Asianet Suvarna News Asianet Suvarna News

ರಾಜ್ಯಾದ್ಯಂತ ಮೇ 15ರವರೆಗೆ ಬಿರುಗಾಳಿ ಸಹಿತ ಭಾರೀ ಮಳೆ, ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಮೇ 12, 13, 14, 15 ನಾಲ್ಕು ದಿನಗಳ ಕಾಲ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

IMP predicate Karnataka Heavy Rainfall till May 15th imposed Yellow alert gow
Author
First Published May 12, 2024, 6:39 PM IST

ಬೆಂಗಳೂರು (ಮೇ.12): ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಸಂಜೆಯಾಗುತ್ತಿದ್ದಂತೆಯೇ ಮಳೆ  ಆರಂಭವಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕೂಡ ಆರಂಭವಾಗಿದೆ. ಮೈಸೂರು ರೋಡ್, ಉತ್ತರಹಳ್ಳಿ, ಆರ್.ಆರ್ ನಗರ, ಗೊಟ್ಟಿಗೆರೆ ಸುತ್ತಮುತ್ತ  ಗುಡುಗು ಸಹಿತ ಮಳೆ ಸುರಿಯುತ್ತಿದೆ. 

ಮೆಜೆಸ್ಟಿಕ್, ಮಲ್ಲೇಶ್ವರ, ಮಾಗಡಿ ರೋಡ್ , ಕೆ.ಆರ್ ಮಾರುಕಟ್ಟೆ ಸೇರಿದಂತೆ ಹಲವೆಡೆ ತುಂತುರು ಮಳೆ ಆರಂಭವಾಗಿದ್ದು, ಮಳೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: 18 ಜಿಲ್ಲೆಗಳಿಗಿಂದು ಯಲ್ಲೋ ಅಲರ್ಟ್

ಮೇ 12, 13, 14, 15 ನಾಲ್ಕು ದಿನಗಳ ಕಾಲ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಲಘು ಪ್ರವಾಹ, ನೈಸರ್ಗಿಕ ಸಮಸ್ಯೆಗಳು ಎದುರಾಗುವ ಮುನ್ಸೂಚನೆ ಕೂಡ ನೀಡಿದೆ. ಇಂದಿನಿಂದ ಮೇ‌ 15ರ ವರೆಗೆ ಬೆಂಗಳೂರಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಹೇಳಿಕೆ ನೀಡಿ, ರಾಜ್ಯದಲ್ಲಿ ಹಲವು ಕಡೆ ಮಳೆ ಆಗಿದೆ. ಧಾರವಾಡದಲ್ಲಿ 8cm ಮಳೆ, ದಕ್ಷಿಣ ಕನ್ನಡದಲ್ಲಿ 6 cm ಮಳೆ, ಬೆಳಗಾವಿ, ಚಿಕ್ಕಮಗಳೂರು 5 cm ಮಳೆ ಆಗಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ 16ವರೆಗೂ ಬಿರುಗಾಳಿ, ಗುಡುಗು, ಮಿಂಚು ಸಮೇತ  ಮಳೆ ಆಗುವ ಸಾಧ್ಯತೆ. ಬೆಂಗಳೂರಿನಲ್ಲಿ ಮುಂದಿನ 5 ದಿನ ಬಿರುಗಾಳಿ ಸಮೇತ ಮಳೆ ಆಗುವ ಸಾಧ್ಯತೆ ಇದೆ ಎಂದಿದ್ಧಾರೆ.

ಬೆಂಗ್ಳೂರಲ್ಲಿ ಭಾರೀ ಮಳೆಗೆ ಕುಸಿದ ರಸ್ತೆ, 150 ಮರಗಳು ಧರೆಗೆ..!

ಇನ್ನು ಯಾವಾಗ ಮಳೆ ಬರುತ್ತೋ ಅಂತ ಕಾಯ್ತಿದ್ದ ಬೆಂಗಳೂರಿಗರು ಕಳೆದ ಕೆಲ ದಿನಗಳಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ಇದೀಗ ಸುರಿಯುತ್ತಿರುವ ಮಳೆಗೆ ನಗರದ ಹಲವೆಡೆ ಧರೆಗುರುಳುತ್ತಿರುವ ಮರ ಹಾಗೂ ರೆಂಬೆ ಕೊಂಬೆಗಳಿಂದ ಬೇಸರಗೊಂಡಿದ್ದಾರೆ. ಮರಗಳಿಗೆ ಆಸಿಡ್ ಇಂಜೆಕ್ಷನ್ ನೀಡಿ ಮರಗಳ ಮಾರಣ ಹೋಮಕ್ಕೆ ಸಂಚು ಮಾಡಿದ್ದಾರೆಂದು ಕೆಲವರು ಆರೋಪಿಸಿದ್ದಾರೆ. ಕೆಲವರು ನಿವೇಶನ, ಮನೆಗಳಿಗೆ ತೊಂದರೆಯಾಗುತ್ತದೆ ಎಂದು ಮರಗಳನ್ನು ಕತ್ತರಿಸುತ್ತಿದ್ದಾರೆ. ಇತ್ತೀಚಿಗೆ ಮಲ್ಲೇಶ್ವರಂನಲ್ಲಿರುವ ಮರಗಳಿಗೆ ಆಸಿಡ್ ಇಂಜೆಕ್ಷನ್ ಹಾಕಲಾಗಿದೆ ಅಂತ ಮಾಹಿತಿ ಇದೆ. ಆದ್ರೆ ಈಗಾಗಲೇ ಸಿಟಿಯಲ್ಲಿ ಕೆಲವು ಕಡೆ ಮರಗಳ ಮಾರಣ ಹೋಮ ಆಗಿವೆ. ದಾಖಲೆಯ ತಾಪಮಾನ, ಮಳೆ ಕೊರತೆ, ನೀರಿನ ಅಭಾವ ಎದುರಾಗಿದೆ ಎಂದು ಪರಿಸರವಾದಿಗಳೂ ದೂರಿದ್ದಾರೆ.

Latest Videos
Follow Us:
Download App:
  • android
  • ios