Asianet Suvarna News Asianet Suvarna News

ಸಿಎಂ ಆದರೂ ಕೂಡ ಸಂತೋಷವಾಗಿಲ್ಲ : ಕಣ್ಣೀರಿಟ್ಟ ಕುಮಾರಸ್ವಾಮಿ

ನಾನು ಸಂತೋಷದಲ್ಲಿಲ್ಲ. ನೋವಿನ ವಿಷ ನುಂಗಿ ನಾನು ವಿಷಕಂಠನಾಗಿದ್ದು, ನಿಮಗೆ ಅಮೃತ ನೀಡುವ ಪ್ರಯತ್ನ ಪಡುತ್ತಿದ್ದೇನೆ. ಇವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೋವಿನ ನುಡಿಗಳು.

Im Not Happy With CM Post Says Kumaraswamy
Author
Bengaluru, First Published Jul 15, 2018, 7:32 AM IST

ಬೆಂಗಳೂರು :  ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿರುವುದಕ್ಕೆ ನಿಮಗೆ (ಕಾರ್ಯಕರ್ತರಿಗೆ) ಸಂತೋಷ ವಾಗಿದೆ. ಆದರೆ, ನಾನು ಸಂತೋಷದಲ್ಲಿಲ್ಲ. ನೋವಿನ ವಿಷ ನುಂಗಿ ನಾನು ವಿಷಕಂಠನಾಗಿದ್ದು, ನಿಮಗೆ ಅಮೃತ ನೀಡುವ ಪ್ರಯತ್ನ ಪಡುತ್ತಿದ್ದೇನೆ. 

ಇವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೋವಿನ ನುಡಿಗಳು. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಳ್ಳಲಾದ ಪಕ್ಷದ ನೂತನ ಸಚಿವರು ಮತ್ತು ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು.

ಸಮ್ಮಿಶ್ರ ಸರ್ಕಾರ ನಡೆಸುವ ವೇಳೆ ತಾವು ಅನುಭವಿಸುತ್ತಿರುವ ಮಾನಸಿಕ ತುಮಲವನ್ನು ವಿವರಿಸುವಾಗ ಭಾವನೆಗಳ ಮೇಲೆ ಹತೋಟಿ ಕಳೆದುಕೊಂಡು ಹಲವು ಬಾರಿ ಕಣ್ಣೀರಾದರು. ನಾನು ಮೆರೆಯಲು ಮುಖ್ಯಮಂತ್ರಿಯಾಗಿಲ್ಲ.  ರಾಜ್ಯದ ಜನತೆಯ, ಬಡವರ, ರೈತರ ಸಮಸ್ಯೆಗಳನ್ನು ಪಕ್ಷ ಮತ್ತು ಜಾತಿ ಭೇದ ಮರೆತು ಬಗೆಹರಿಸಬೇಕೆಂಬ ಬಯಕೆಯಿಂದ ಬಹುಮತದೊಂದಿಗೆ ಮುಖ್ಯಮಂತ್ರಿ ಯಾಗಬೇಕು ಎಂದುಕೊಂಡಿದ್ದೆ. ಆದರೆ, ಅದು ಸಾಧ್ಯ ವಾಗಲಿಲ್ಲ. 

ಅಚ್ಚರಿಯೆಂಬಂತೆ ಮುಖ್ಯಮಂತ್ರಿಯಾಗಿ ದ್ದೇನೆ. ಯಾವುದೇ ಸ್ಥಳಕ್ಕೆ ನಾನು ಮಧ್ಯರಾತ್ರಿ ಹೋದರೂ ಜನ ಸೇರುತ್ತಾರೆ. ಆದರೆ, ಅದೇಕೋ ಮತ ನೀಡುವಾಗ ಮಾತ್ರ ನನ್ನ ಪಕ್ಷ ಮತ್ತು ನಮ್ಮ ಅಭ್ಯರ್ಥಿಗಳನ್ನು ಮರೆಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಪಕ್ಷಕ್ಕೆ ಜನಾಶೀರ್ವಾದ ಸಿಗದ ಕಾರಣ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿಯಾಗಿದ್ದೇನೆ. ಇದಕ್ಕೆ ತಮಗೆ (ಕಾರ್ಯಕರ್ತರಿಗೆ) ಸಂತೋಷ ವಾಗಿದೆ. ಆದರೆ ನಾನು ಸಂತೋಷದಲ್ಲಿಲ್ಲ. ವಿಷ ಕಂಠನಾಗಿ ನೋವು ನುಂಗಿಕೊಂಡಿದ್ದೇನೆ. ರಾಜ್ಯದ ಜನತೆಗೆ ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದರು. 

ಕಳೆದ 12 ವರ್ಷಗಳ ಹಿಂದೆಯೂ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದೆ. ನನ್ನ ತಂದೆಯ ಆಶಯಕ್ಕೆ ವಿರುದ್ಧವಾಗಿ ಮೈತ್ರಿ ಮಾಡಿ ಕೊಂಡರೂ ಮಾಧ್ಯಮಗಳು ಸೇರಿದಂತೆ ಯಾರೂ ಸಹ ವಿರೋಧ ಮಾಡಿರಲಿಲ್ಲ. ಆದರೆ, ಈಗ ರಾಜ್ಯದ ಜನತೆಯ ಹಿತಾಸಕ್ತಿಗಾಗಿ ಕೆಲಸ ಮಾಡಲು ಬಯಸಿದ್ದೇನೆ. ನಾನು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. 

ರಾಜ್ಯದ ಯಾವುದೋ ಒಂದು ಭಾಗಕ್ಕೆ ಮುಖ್ಯಮಂತ್ರಿ ಯಾಗಿಲ್ಲ. ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿಯಾಗಿದ್ದೇನೆ ಎಂದು ಭಾವಿಸಿ ದ್ದೇನೆ. ಆದರೂ ನನ್ನ ಮೇಲೆ ಏಕೆ ಆಕ್ರೋಶ? ನನ್ನ ದು ಏನು ತಪ್ಪಿದೆ ಎಂದು ಅವಲತ್ತುಕೊಂಡರು.

ವಿಷ ಕೊಡುತ್ತಾರೋ? ಅನ್ನ ಕೊಡುತ್ತಾ ರೋ?: ರಾಜ್ಯದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ದಿಟ್ಟ ನಿರ್ಧಾರ ಕೈಗೊಂಡಿದ್ದೇನೆ. ರೈತರ ಬದುಕಿನಲ್ಲಿ ಚೆಲ್ಲಾಟವಾಡುವ ವ್ಯಕ್ತಿ ನಾನಲ್ಲ. ಸಹಕಾರ ಬ್ಯಾಂಕ್‌ಗಳ ಸದಸ್ಯ ರೈತರ ಒಂದು ಲಕ್ಷ ರು.ವರೆಗಿನ ಸಾಲಮನ್ನಾ ಮಾಡುವ ಕಠಿಣ ನಿರ್ಧಾರ ಕೈಗೊಂಡಿದ್ದೇನೆ. ಇಷ್ಟಾದರೂ ಸಮಾಧಾನ ಇಲ್ಲವಾದರೆ ‘ರೈತರು ನನಗೆ ವಿಷ ಕೊಡುತ್ತಾರೋ? ಅನ್ನ ಕೊಡುತ್ತಾರೋ?’ ಎಂದು ಮಾರ್ಮಿಕವಾಗಿ ನುಡಿದರು. 

ಸಾಲಮನ್ನಾ ವಿಷಯದಲ್ಲಿ ಪಕ್ಷದ ಶಾಸಕರಿಂದಲೇ ಆಕ್ಷೇಪ ಎದುರಿಸಬೇಕಾಯಿತು. ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬುದರ ಚಿಂತ ನೆಯನ್ನೇ ಮಾಡಲಿಲ್ಲ. ಸಹಕಾರಿ ಬ್ಯಾಂಕ್‌ನ ಸಾಲವನ್ನು 25 ಸಾವಿರ ರು. ಮನ್ನಾ ಮಾಡುವ ಘೋಷಣೆ ಮಾಡಿದೆ. ಆದರೆ, ಅದು ಸಾಕಾಗುವು ದಿಲ್ಲ ಎಂದು ಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದರು.

ಆಗ 50 ಸಾವಿರ ರು.ಗೆ ಏರಿಕೆ ಮಾಡುವ ನಿರ್ಧಾರ ಮಾಡಲಾಯಿತು. ಆದರೂ ಸಮಾಧಾ ನಪಡಲಿಲ್ಲ. ಹೀಗಾಗಿ ಧೈರ್ಯ ಮಾಡಿ ಒಂದು ಲಕ್ಷ ರು.ವರೆಗಿನ ಸಾಲಮನ್ನಾದ ಘೋ ಷಣೆ ಮಾಡಲಾಯಿತು. ಇದರಿಂದ 22 ಲಕ್ಷ ರೈತ ಕುಟುಂಬಗಳಿಗೆ ಸಹಾಯವಾಗಲಿದೆ. ಬಿಜೆಪಿಯ ವರು ಸಮಂಜಸ ಟೀಕೆಗಳನ್ನು ಮಾಡದೆ ಸಂಕುಚಿತ ಬುದ್ಧಿಯಿಂದ ವರ್ತಿಸುತ್ತಿದ್ದು, ಇದನ್ನು ಬಿಡಬೇಕು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

Follow Us:
Download App:
  • android
  • ios