ಬಿಎಸ್‌ವೈ ಮೂಲೆಗುಂಪು ಮಾಡಿ ಮೋದಿ ಫೋಟೊ ಹಿಡಿದು ಹೋದರೆ ಮತ ಸಿಗಲ್ಲ: ಎಂಪಿ ರೇಣುಕಾಚಾರ್ಯ

ಬಿ.ಎಸ್‌.ಯಡಿಯೂರಪ್ಪ ಅವರು ಸೈಕಲ್, ಬೈಕ್, ಕಾರು ಮೂಲಕ ರಾಜ್ಯದಾದ್ಯಂತ ಪಕ್ಷ ಸಂಘಟನೆ ಮಾಡಿದ್ದಾರೆ. ದಕ್ಷಿಣ ಭಾರದತದ ಬಿಜೆಪಿಗೆ ಯಡಿಯೂರಪ್ಪ ಅವರಂತಹ ನಾಯಕ ಇನ್ನು ಸಿಗಲ್ಲ. ಅಂತವರನ್ನೇ ಮೂಲೆಗುಂಪು ಮಾಡಿದರು. ಅವರ ಕಣ್ಣೀರಿನಿಂದ ಇವತ್ತು ಬಿಜೆಪಿ ನೆಲಕಚ್ಚಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Ignoring Yeddyurappa issue renukacharyas resentment against BJP high command rav

 ಶಿವಮೊಗ್ಗ (ಅ.10) :  ಬಿ.ಎಸ್‌.ಯಡಿಯೂರಪ್ಪ ಅವರು ಸೈಕಲ್, ಬೈಕ್, ಕಾರು ಮೂಲಕ ರಾಜ್ಯದಾದ್ಯಂತ ಪಕ್ಷ ಸಂಘಟನೆ ಮಾಡಿದ್ದಾರೆ. ದಕ್ಷಿಣ ಭಾರದತದ ಬಿಜೆಪಿಗೆ ಯಡಿಯೂರಪ್ಪ ಅವರಂತಹ ನಾಯಕ ಇನ್ನು ಸಿಗಲ್ಲ. ಅಂತವರನ್ನೇ ಮೂಲೆಗುಂಪು ಮಾಡಿದರು. ಅವರ ಕಣ್ಣೀರಿನಿಂದ ಇವತ್ತು ಬಿಜೆಪಿ ನೆಲಕಚ್ಚಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ. ಕರ್ನಾಟಕದಲ್ಲಿ ಯಡಿಯೂರಪ್ಪಗೆ ಮಾತ್ರ ಮತ ಗಳಿಸುವ ಶಕ್ತಿ ಇದೆ. ಅವರನ್ನು ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಪಕ್ಷ ಹೇಗೆ ಗೆಲ್ಲುತ್ತದೆ ಎಂದು ಖಾರವಾಗಿ ಹೇಳಿದರು.

ಈ ಪುಣ್ಯ ಕ್ಷೇತ್ರದಲ್ಲಿ ಯಾವ ರಾಜಕಾರಣಿಯೂ ಉಳಿಯೋಲ್ಲ, ಬಿಎಸ್‌ವೈ ಉಳಿದದ್ದಕ್ಕೆ ಬೆಲೆ ತೆರಬೇಕಾಯ್ತಾ?

ರಾಜ್ಯದಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿ, ಮೋದಿ ಭಾವಚಿತ್ರ ಹಿಡಿದು ಹೋದರೆ ಮತ ಸಿಗಲ್ಲ. ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮಾದರಿ ಮಾಡಲು ಹೋಗಿ 70 ಜನ ಹೊಸಬರಿಗೆ ಟಿಕೆಟ್ ನೀಡಿದರು. ಜಗದೀಶ್ ಶೆಟ್ಟರ್ ಅಂಥವರನ್ನು ಕಡೆಗೆಣಿಸಿದರು. ಯಡಿಯೂರಪ್ಪ ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಡಲು ಹೋಗಿದ್ರು, ಅದಕ್ಕೆ ಬ್ರೇಕ್ ಹಾಕಿದ್ರು ಎಂದು ಸ್ವಪಕ್ಷದ ವರಿಷ್ಠರ ವಿರುದ್ಧವೇ ಹರಿಹಾಯ್ದರು.

ಕೋರ್ ಕಮಿಟಿ ನಿಯಂತ್ರಣದಲ್ಲಿ ಪಕ್ಷ ಇರಬೇಕಾ? ಅವರೇ ಯಡಿಯೂರಪ್ಪ ಅವರನ್ನು ಮುಗಿಸಿದರಲ್ವ ಎಂದು ಪ್ರಶ್ನಾರ್ಥಕವಾಗಿ ನುಡಿದ ಅವರು ಹೋರಾಟ ಹಿನ್ನೆಲೆಯಿಂದ ಯಡಿಯೂರಪ್ಪ ಬಂದವರು. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಈ ರೀತಿಯ ಸರ್ವಾಧಿಕಾರಿ ಧೋರಣೆ ಮಾಡಬೇಡಿ ಎಂದು ಕಿಡಿಕಾರಿದರು.

ನನಗೂ ರಾಜ್ಯಾಧ್ಯಕ್ಷನಾಗುವ ಸಾಮರ್ಥ್ಯ ಇದೆ

ರಾಜ್ಯಾಧ್ಯಕ್ಷರ ಮೇಲೆ ಗೌರವವಿದೆ. ಆದರೆ. ನಮಗೆ ರಬ್ಬರ್ ಸ್ಟ್ಯಾಂಪ್ ರಾಜ್ಯ ಅಧ್ಯಕ್ಷರ ಅಗತ್ಯವಿಲ್ಲ. ನನಗೂ ರಾಜ್ಯಾಧ್ಯಕ್ಷರಾಗುವ ಸಾಮರ್ಥ್ಯವಿದೆ. ಯಾರಿಗೆ ಸಾಮರ್ಥ್ಯವಿದೆಯೋ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ. ತಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನವನ್ನು ಭರ್ತಿ ಮಾಡಿ ಎಂದು ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಏಜೆಂಟ್‌ಗಳು: ಬಿಎಸ್‌ವೈ ವಾಗ್ದಾಳಿ

ಯಡಿಯೂರಪ್ಪ ಒಬ್ಬ ಶಿಲ್ಪಿಯಿದ್ದಂತೆ. ನಾನೊಬ್ಬ ಕಾಡುಗಲ್ಲು ಆಗಿದ್ದೆ, ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಅವರು ಇಲ್ಲದಿದ್ದರೆ ನಾನು ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರ್ತಿದ್ದೆ. ನಾನು ಈಗಲೂ ಬಿಜೆಪಿ ಕಟ್ಟಾಳು, ಕೇಸರಿ- ಹಿಂದುತ್ವ ಎಂದಿಗೂ ಇರುತ್ತೆ ಎಂದರು.

Latest Videos
Follow Us:
Download App:
  • android
  • ios