ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ಕೆಲಸದ ವಿಚಾರದ ಬಗ್ಗೆ ಯಾವುಯದಾದರೂ ವಿಚಾರವನ್ನು ಮಾತನಾಡಲಿ. ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದರೆ ನಾನು ಸಹಿಸಲ್ಲ. ಕಾನೂನು ಹೋರಾಟ ಮಾಡುವೆ.

ಬೆಂಗಳೂರು (ಫೆ.20): ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ಕೆಲಸದ ವಿಚಾರದ ಬಗ್ಗೆ ಯಾವುಯದಾದರೂ ವಿಚಾರವನ್ನು ಮಾತನಾಡಲಿ. ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದರೆ ನಾನು ಸಹಿಸಲ್ಲ. ಕಾನೂನು ಹೋರಾಟ ಮಾಡುವೆ ಎಂದು ಐಜಿಪಿ ಡಿ.ರೂಪಾ ವಿರುದ್ಧ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕೆಂಡ ಕಾರಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ರೂಪಾ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ಇದು ಸರಿಯಾದ ವೇದಿಕೆಯಲ್ಲ. ವೈಯಕ್ತಿಕವಾಗಿ ಮಾತನಾಡಿರುವುದರ ಬಗ್ಗೆ ಗಂಭೀರವಾಗಿ ಪರಿಗಣಿಸುವೆ. ಇದನ್ನು ಬಿಡುವುದಿಲ್ಲ. ಈಗಾಗಲೇ ನನ್ನ ಗಂಡ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಲವು ಮಾಹಿತಿಯನ್ನು ನೀಡಿದ್ದಾರೆ. ಅವರ ವಿರುದ್ಧ ನಾನು ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ. ರೂಪಾ ಗೆಟ್‌ ವೆಲ್‌ ಸೂನ್‌ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದಾರೆ.

IAS vs IPS Fight:ರೋಹಿಣಿ ಸಿಂಧೂರಿ ಪತಿ ಸುಧೀರ್‌ರೆಡ್ಡಿಯಿಂದ ರೂಪಾಗೆ ತಪರಾಕಿ: ಬ್ಲೂಟೂತ್‌ ಮೂಲಕ ಫೋಟೋ ಹ್ಯಾಕ್

ದೂರು ದಾಖಲಿಸಿದ ಸುಧೀರ್‌ ರೆಡ್ಡಿ: ರೋಹಿಣಿ ಸಿಂಧೂರಿ ಅವರ ಗಂಡ ಸುಧೀರ್‌ ರೆಡ್ಡಿ ಅವರು ಬಾಗಲಗುಂಟೆ ಪೊಲೀಸ್‌ ಠಾಣೆಗೆ ಹೋಗಿ ಐಜಿಪಿ ಡಿ. ರೂಪಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಮೊಬೈಲ್‌ ಅನ್ನು ಬ್ಲೂಟೂತ್‌ ಮೂಲಕ ಹ್ಯಾಕ್‌ ಮಾಡಿ ಎಲ್ಲ ವೈಯಕ್ತಿಕ ಫೋಟೋಗಳನ್ನು ಕದಿಯಲಾಗಿದೆ. ಈ ಬಗ್ಗೆ ರೂಪಾ ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ರೋಹಿಣಿ ಸಿಂಧೂರಿ ಪತಿ ಸುಧೀರ್‌ ರೆಡ್ಡಿ ಪ್ರಶ್ನೆ: 
ರೂಪಾ ಅನ್ನೋರು ಯಾರು? ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಯಾವ್ಯಾವ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ ಮೊದಲು ಹೇಳಿ. ನಾನು ಹುಟ್ಟಿದ್ದು ಇಲ್ಲೇ, ನಾನು ಕನ್ನಡಿಗ. ಆಂಧ್ರಪ್ರದೇಶದಲ್ಲಿ ನಮ್ಮ ಸಂಬಂಧಿಕರು ಯಾರೂ ಇಲ್ಲ. ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಸರಿಯಲ್ಲ. ರೋಹಿಣಿ ಸಿಂಧೂರಿ ಸಾಮಾಜಿಕ ಜಾಲತಾಣ ಬಳಕೆ ಮಾಡುತ್ತಿಲ್ಲ. ಫೋಟೋಗಳನ್ನು ಅವರು ಹ್ಯಾಕ್ ಮಾಡಿ ತೆಗೆದುಕೊಂಡಿರಬಹುದು. ರೋಹಿಣಿ ಸಿಂಧೂರಿ ಯಾರಿಗೆ ಫೋಟೋ ಕಳಿಸಿದ್ದಾರೆ ಹೆಸರು ಹೇಳಿ. ನನ್ನ ತಂದೆ ಕಾಲದಿಂದಲೂ ರಿಯಲ್ ಎಸ್ಟೇಟ್​​​ ಮಾಡುತ್ತಿದ್ದೇವೆ ಎಂದು ಐಪಿಎಸ್​ ಅಧಿಕಾರಿ ಡಿ.ರೂಪಾ ವಿರುದ್ಧ ಬೆಂಗಳೂರಿನಲ್ಲಿ ರೋಹಿಣಿ ಸಿಂಧೂರಿ ಪತಿ ಸುಧೀರ್​ ರೆಡ್ಡಿ ವಾಗ್ದಾಳಿ ಮಾಡಿದ್ದಾರೆ.

ರೂಪಾ ವಿರುದ್ಧ ಪೊಲೀಸರಿಗೆ ದೂರು ಸುಳಿವು: ಇನ್ನು IPS ಅಧಿಕಾರಿ ರೂಪಾ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಹೊಟ್ಟೆಕಿಚ್ಚಿನಿಂದ ಡಿ.ರೂಪಾ ಅವರು ಈ ರೀತಿ ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ಹಣಕಾಸು ವಿಚಾರದಲ್ಲಿ ನಾವು ಚೆನ್ನಾಗಿಯೇ ಇದ್ದೇವೆ. ಡಿ.ಕೆ.ರವಿ ಅವರ ವಿಚಾರವನ್ನು ಈಗ ಪ್ರಸ್ತಾಪಿಸುವುದು ಸರಿಯಲ್ಲ. ಹೋಗಿರುವವರ ಬಗ್ಗೆ ಏನನ್ನೂ ಮಾತನಾಡಬಾರದು. ಹೋಗಿರುವವರ ಬಗ್ಗೆ ಮಾತನಾಡುವ ಸಂಸ್ಕಾರ ರೂಪಾ ಅವರದ್ದು ಎಂದು ಸಿಂಧೂರಿ ಪತಿ ಸುಧೀರ್‌ ರೆಡ್ಡಿ ಹೇಳಿದರು.