IAS vs IPS: ರೋಹಿಣಿ ಸಿಂಧೂರಿ, ರೂಪಾ ಸೇರಿ ಮನೀಶ್‌ ಮೌದ್ಗಿಲ್‌ಗೆ ಎತ್ತಂಗಡಿ ಶಾಕ್‌

ಸರ್ಕಾರ ಮಾನವನ್ನು ಹರಾಜು ಹಾಕಿದ್ದ ಐಎಎಸ್‌ ರೋಹಿಣಿ ಸಿಂಧೂರಿ, ಐಪಿಎಸ್‌ ಡಿ. ರೂಪಾ ಅವರಿಗೆ ಸರ್ಕಾರ ವರ್ಗಾವಣೆ ಶಿಕ್ಷೆಯನ್ನು ನೀಡಿದೆ. 

IAS  IPS Rohini sindhuri D Roopa and Manish moudgil transfer sat

ಬೆಂಗಳೂರು (ಫೆ.21): ಸರ್ಕಾರ ಪ್ರಮುಖ ಹುದ್ದೆಗಳಲ್ಲಿದ್ದರೂ ಸೇವಾ ನಿಯಮಗಳನ್ನು ಮೀರಿ ಕಳೆದ ಎರಡು ದಿನಗಳಿಂದ ಹಾದಿರಂಪ ಹಾಗೂ ಬೀದಿ ರಂಪವನ್ನು ಮಾಡಿಕೊಂಡು ರಾಜ್ಯದ ಮರ್ಯಾದೆಯನ್ನು ಹರಾಜು ಹಾಕಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್‌ ಅಧಿಕಾರಿ ಡಿ. ರೂಪಾ ಹಾಗೂ ರೂಪಾ ಅವರ ಗಂಡ ಮನೀಶ್‌ ಮೌದ್ಗಿಲ್‌ ಅವರನ್ನೂ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಐಎಎಸ್ ಹಾಗೂ ಐಪಿಎಸ್ ರೋಹಿಣಿ ಸಿಂಧೂರಿ ಹಾಗೂ ರೂಪಾ.ಡಿ ಅವರ ಜಗಳಕ್ಕೆ ಬೇಸತ್ತ ಸರಕಾರ ಇಬ್ಬರಿಗೂ ವರ್ಗವಾಣೆ ಮಾಡಿದ್ದು, ಈ ಇಬ್ಬರಿಗೂ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಧಾರ್ಮಿಕ ಮತ್ತು ಮುಜರಾಯಿ ಇಲಾಖೆಗೆ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಎಚ್.ಬಸವರಾಜೇಂದ್ರ ಅವರನ್ನು ರೋಹಿಣಿ ಅವರ ಸ್ಥಾನಕ್ಕೆ ನಿಯೋಜಿಸಿದ್ದು, ರೋಹಿಣಿಯವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಕರುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿ ಭಾರತಿ ಅವರನ್ನು ನಿಯೋಜಿಸಿದ್ದು, ರೂಪಾ ಅವರಿಗೂ ಸ್ಥಳ ತೋರಿಸಿಲ್ಲ.

IAS vs IPS: ಹಲ್ಲಿಲ್ಲದ ಹಾವಿನಂತಾದ ಸರ್ಕಾರ: ರೋಹಿಣಿ ಸೀಂಧೂರಿ- ಡಿ. ರೂಪಾಗೆ ಶಿಸ್ತುಕ್ರಮವಿಲ್ಲದ ನೋಟಿಸ್‌ ಜಾರಿ

ಅಲ್ಲದೇ ರೂಪಾ ಪತಿ ಮೌನಿಶ್ ಮೌದ್ಗಿಲ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪರ್ಸನಲ್ ಮತ್ತು ಅಡ್ಮಿನಿಸ್ಟ್ರೇಟಿವ್ ರಿಫಾರ್ಮ್ಸ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಮುಂದಿನ ಆದೇಶದವರೆಗೆ ನಿಯೋಜಿಸಲಾಗಿದೆ.

IAS  IPS Rohini sindhuri D Roopa and Manish moudgil transfer sat

ವಿಪಕ್ಷ, ಸಾರ್ವಜನಿಕರಿಂದ ಆಕ್ರೋಶ: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಂದೆ ವೈಯಕ್ತಿಕ ವಿಚಾರಗಳು ಹಾಗೂ ಕರ್ತವ್ಯಕ್ಕೆ ಕುರಿತಾದ ಆರೋಪಗಳನ್ನು ಹೇಳಿಕೊಳ್ಳುವ ಮೂಲಕ ಕೆಸರೆರಚಾಟ ಮಾಡಿಕೊಂಡಿದ್ದ ಐಪಿಎಸ್‌ ಅಧಿಕಾರಿ ಐಜಿಪಿ ಡಿ. ರೂಪಾ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರದಿಂದ ನೋಟಿಸ್‌ ನೀಡಲಾಗಿದೆ. ಅದು ಕೂಡ ನೀವು ಮಾಧ್ಯಮಗಳ ಮುಂದೆ ಮಾತನಾಡದಂತೆ ಮಾತ್ರ ಸೂಚನೆ ನೀಡಲಾಗಿದ್ದು, ಯಾವುದೇ ಕಠಿಣ ಕ್ರಮವನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಎಚ್ಚೆತ್ತು ಸರ್ಕಾರ ವರ್ಗಾವಣೆ ಶಿಕ್ಷೆಯನ್ನು ನೀಡಿದೆ.

ನೋಟಿಸ್‌ ನೀಡಿ ಸುಮ್ಮನಾಗಿದ್ದ ಸರ್ಕಾರ: ಕರ್ನಾಟಕದ ಮಾನವನ್ನು ಇಡೀ ದೇಶದಲ್ಲಿಯೇ ಹರಾಜು ಆಗುವಂತೆ ಮಾಡಿದ್ದ ಸರ್ಕಾರದ ಇಬ್ಬರು ಪ್ರಮುಖ ಅಧಿಕಾರಿಗಳ ಮೇಲೆ ಎರಡು ದಿನಗಳ ನಂತರ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಅದೂ ಕೂಡ ನಾಮಕೇವಾಸ್ತೆಗೆ ಕ್ರಮ ಕೈಗೊಂಡಂತೆ ಕಾಣುತ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಲ್ಲಿಲ್ಲದ ಹಾವಿನಂತೆ ನಡೆದುಕೊಂಡಿದೆ. ಇವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳದೆ ಕೇವಲ ಶಾಂತಿ ಕಾಪಾಡುವಂತೆ ಹಾಗೂ ಮಾಧ್ಯಮಗಳ ಮುಂದೆ ಮಾತನಾಡದಂತೆ ನೋಟಿಸ್‌ ನೀಡಿ ಸುಮ್ಮನಾಗಿತ್ತು. 

IAS vs IPS: ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ: ಫೋಟೋ ಯಾರಿಗೆ ಕಳಿಸಿದ್ದೇನೆ ಬಹಿರಂಗಪಡಿಸಲಿ

ನೋಟಿಸ್‌ನಲ್ಲಿ ಏನಿತ್ತು.? ಇಬ್ಬರೂ ಸರ್ಕಾರಿ ಅಧಿಕಾರಿಗಳು ಆಗಿದ್ದಿ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಬಾರದು. ಇದರಲ್ಲಿ ದೂರಿಗಳು, ಮನವಿಗಳು ಅಥವಾ ಇನ್ಯಾವುದೇ ಆರೋಪಗಳನ್ನು ಮಾಡುವಂತಿಲ್ಲ. ನೀವು ಸಾರ್ವಜನಿಕವಾಗಿ ಶಾಂತಿ ಕಾಪಾಡಬೇಕು. ಆಲ್ ಇಂಡಿಯಾ ಸರ್ವೀಸ್ ಕಂಡಕ್ಟ್ ರೂಲ್ಸ್‌ ಅನ್ವಯ ನಡೆದುಕೊಳ್ಳಬೇಕು. ನೀವು ಇನ್ನುಮುಂದೆ ಯಾವುದೇ ಕಾರಣಕ್ಕೂ ಆರೋಪ, ಪ್ರತ್ಯಾರೋಪ ಸೇರಿ ಸರ್ಕಾರದ ಅಧಿಕಾರವನ್ನು ಅಥವಾ ಸೇವೆಯ ಕುರಿತಾದ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಬಾರದು ಎಂದು ತಿಳಿಸಿದೆ.

Latest Videos
Follow Us:
Download App:
  • android
  • ios