Asianet Suvarna News Asianet Suvarna News

ರಾಜಕೀಯಕ್ಕೆ ಬರ್ತಾರಂತೆ ರಿಷಭ್ ಶೆಟ್ಟಿ, ರಕ್ಷಿತ್ ಸಾಥ್ ಕೊಡ್ತಾರಾ?

ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಚಿತ್ರದ ಸಕ್ಸಸ್ ಬಳಿಕ ರಿಷಭ್ ಶೆಟ್ಟಿ ರಾಜಕೀಯ ರಂಗಕ್ಕೆ ಪ್ರವೇಶ ಪಡೆಯುತ್ತಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಹಾಗಾದರೆ ಯಾವ ಪಕ್ಷ ಸೇರ್ತಾರೆ? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

I will never enter to  politics says sandalwood actor Rishab Shetty gow
Author
First Published Apr 3, 2023, 9:48 PM IST | Last Updated Apr 3, 2023, 10:48 PM IST

ಬೆಂಗಳೂರು (ಏ.3): ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಪಕ್ಷಾಂತರ ಪರ್ವ ಕೂಡ ಆರಂಭವಾಗಿದೆ.  ಇವೆಲ್ಲದರ ನಡುವೆ  ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಚಿತ್ರದ ಸಕ್ಸಸ್ ಬಳಿಕ ರಿಷಭ್ ಶೆಟ್ಟಿ ರಾಜಕೀಯ ರಂಗಕ್ಕೆ ಪ್ರವೇಶ ಪಡೆಯುತ್ತಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ವಿಶೇಷವೆಂದರೆ ಈ ಚರ್ಚೆಗೆ ನಟ ರಕ್ಷಿತ್ ಶೆಟ್ಟಿ ಕೂಡ ಜೊತೆಯಾಗಿದ್ದಾರೆ. ಹಾಗಾದರೆ ಯಾವ ಪಕ್ಷ ಸೇರ್ತಾರೆ? ಎಂಬ ಕುತೂಹಲ ಖಂಡಿತ.

ಮಹಿಳೆಯೊಬ್ಬರು ಟ್ವಿಟ್ಟರ್ ನಲ್ಲಿ  ರಿಷಭ್ ಶೆಟ್ಟಿ ರಾಜಕೀಯಕ್ಕೆ ಸೇರುತ್ತಾರಾ? ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ  ವಿಭಿನ್ನ ರೀತಿಯಲ್ಲಿ ಕಮೆಂಟ್ ಗಳು ಸಾಕಷ್ಟು ಬಂದಿದೆ. ಮಹಿಳೆ ಮಾಡಿದ ಈ ಟ್ವೀಟ್ ಗೆ ರಿಷಭ್ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ ಅವರ ಆತ್ಮೀಯ ಗೆಳೆಯ ನಟ ರಕ್ಷಿತ್ ಶೆಟ್ಟಿ ಕೂಡ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಯ ಟ್ವೀಟ್ ಗೆ ಉತ್ತರಿಸಿದ ಶೆಟ್ರು , ಸುಮ್ನನೆ ಇರಿ ಮರ್ರೆ ಸುಳ್ಳು ಸುದ್ದಿ, #April1st ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ ಎಂದಿದ್ದಾರೆ.

ಮತ್ತೊಂದು ಕಮೆಂಟ್ ನಲ್ಲಿ ಬನ್ನಿ ಶೆಟ್ರೆ ನಮ್ಮ ಫುಲ್ ಸಪೂರ್ಟ್ ನಿಮಗೆ ಎಂದು ರಕ್ಷಿತ್ ಮತ್ತು ರಿಷಭ್ ಗೆ ಟ್ಯಾಗ್ ಮಾಡಲಾಗಿದೆ. ಇದಕ್ಕ ಉತ್ತರಿಸಿರುವ ರಿಷಭ್ ಶೆಟ್ಟಿ ಬೇಡ ದೇವ್ರು, ಬೇಡ ದೇವ್ರು, ನನ್ನ ಸಿನಿಮಾಗೆ ನಿಮ್ಮ ಸಪೋರ್ಟ್ ಇದ್ರೆ ಸಾಕು ಎಂದಿದ್ದಾರೆ.

Breaking: ಆಂತರಿಕ ಸಮಸ್ಯೆ, ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮುಂದೂಡಿಕೆ!

ನಟ ರಕ್ಷಿತ್ ಶೆಟ್ಟಿ ಇದಕ್ಕೆ ಉತ್ತರಿಸಿ  "ಎಂದೂ ಹೋಗುವುದಿಲ್ಲ? Ahem ahem" ಎಂದಿದ್ದಾರೆ. ರಕ್ಷಿತ್ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಿಷಭ್ , "ನಾವು ಕ್ಷೇತ್ರ ಬಿಟ್ಟು ಹೋಗಬಾರದು, ಜನ ನಮ್ಗೆ ಆಶೀರ್ವಾದ ಮಾಡಿದ್ದಾರೆ,ನಮಗೆ ಸಿನಿಮಾ ಕ್ಷೇತ್ರವೇ ಸಾಕು ಮಗಾ" ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಸಂಭಾಷಣೆಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬಂದಿದೆ.

ಬಿಜೆಪಿ ಪರ ಸ್ಪರ್ಧೆ, ಡಿಜಿ ಕಚೇರಿಗಳ ಮೆಟ್ಟಿಲಿಗೆ ನಮಸ್ಕರಿಸಿದ ಕಣ್ಣೀರಿಟ್ಟ ಸಿಪಿಐ

ಏಪ್ರಿಲ್ 1 ರಂದು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ. ಆದಿನ ಟ್ವಿಟ್ಟರ್ ನಲ್ಲಿ ಮಹಿಳೆಯೊಬ್ಬರು "ರಿಷಬ್ ರಾಜಕೀಯಕ್ಕೆ ಎಂಟ್ರಿ ಇವತ್ತಿನ ಸುದ್ದಿ" ಎಂದು ಟ್ವೀಟ್ ಮಾಡಿದ್ದು, ಇಷ್ಟೇಲ್ಲ ಸಂಭಾಷಣೆಗೆ ಕಾರಣವಾಯ್ತು.

 

Latest Videos
Follow Us:
Download App:
  • android
  • ios