ಪಿಎ​ಫ್‌ಐ ವ್ಯಕ್ತಿ​ಗಳು ನನ್ನನ್ನ ಕೊಲೆ ಮಾಡುವ ಹಿಟ್‌ ಲಿಸ್ಟ್‌ನಲ್ಲಿ ಸೇರಿಸಿಕೊಂಡಿದ್ದರು, ಆ ವೇಳೆ ನನಗೆ ಬೆದರಿಕೆ ಕರೆ ಬಂದಿತ್ತು. ಯಾವುದೇ ಕರೆಗಳಿಗೂ ನಾನು ಜಗ್ಗಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. 

ಶಿವಮೊಗ್ಗ (ಏ.17): ಪಿಎ​ಫ್‌ಐ ವ್ಯಕ್ತಿ​ಗಳು ನನ್ನನ್ನ ಕೊಲೆ ಮಾಡುವ ಹಿಟ್‌ ಲಿಸ್ಟ್‌ನಲ್ಲಿ ಸೇರಿಸಿಕೊಂಡಿದ್ದರು, ಆ ವೇಳೆ ನನಗೆ ಬೆದರಿಕೆ ಕರೆ ಬಂದಿತ್ತು. ಯಾವುದೇ ಕರೆಗಳಿಗೂ ನಾನು ಜಗ್ಗಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ನಗರದಲ್ಲಿ ಭಾನುವಾರ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆ ಕಚೇರಿ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಸಂಘಟನೆ ಬ್ಯಾನ್‌ ಆದ ವೇಳೆ ಶಾಹೀದ್‌ ಶೇಖ್‌ ಎಂಬಾತ ಸಚಿವ ನಿತಿನ್‌ ಗಡ್ಕರಿಗೆ ಬೆದರಿಕೆವೊಡ್ಡಿದ್ದ. ಆತನನ್ನ ಬಂಧಿಸಲಾಗಿದೆ. ಹಿಂದೂ ಧರ್ಮದ ಬೆಂಬಲಿತರನ್ನ ಕೊಲೆ ಮಾಡಲು ಅವರೊಂದು ಪಟ್ಟಿಮಾಡಿಕೊಂಡಿದ್ದರು. ಅವರ ಪಟ್ಟಿಯಲ್ಲಿ ನನ್ನ ಹೆಸರಿದೆ. ಪೊಲೀಸ್‌ ಇಲಾಖೆ ನನ್ನ ಗಮನಕ್ಕೆ ತಂದಿದೆ. ಪಿಎಫ್‌ಐ ಮತ್ತು ಆ ವ್ಯಕ್ತಿಗಳ ಬಗ್ಗೆ ಸಿಎಂ ಗಮನಿಸುತ್ತಿದ್ದಾರೆ. ನನಗೆ ಭದ್ರತೆಯನ್ನು ಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

ಲಕ್ಷ್ಮಣ್‌ ಸವದಿ ಪಕ್ಷ ಬಿಟ್ಟ ಬಗ್ಗೆ ಮಾತಾಡಲ್ಲ: ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಪಕ್ಷ ಬಿಟ್ಟಿರುವ ಬಗ್ಗೆ ನಾನು ಮಾತನಾಡಲ್ಲ. ದೇಶ ಮತ್ತು ಧರ್ಮದ ಅಭಿವೃದ್ಧಿಯೇ ಬಿಜೆಪಿ ಗುರಿಯಾಗಿದೆ. ಯಾವುದೇ ಕಾರಣಕ್ಕೂ ತಾಯಿಯನ್ನು ಮರೆತುಹೋಗುವುದು ಸರಿಯಲ್ಲ. ಬಿಜೆಪಿ ಎಲ್ಲಾ ಮಟ್ಟದ ನಾಯಕರು ಕಾರ್ಯಕರ್ತರೇ, ಅವಕಾಶ ಸಿಕ್ಕರೆ ಚುನಾಯಿತಿ ಪ್ರತಿನಿಧಿಗಳಾಗ್ತಾರೆ. ಇಲ್ಲವಾದಾಗ ಸಾಮಾನ್ಯ ಕಾರ್ಯಕರ್ತನೇ ಎಂಬುದು ಎಲ್ಲರೂ ಅರಿತುಕೊಳ್ಳಬೇಕು. ದೊಡ್ಡ ನಾಯಕರು ಪಕ್ಷ ಬಿಡುವರನ್ನ ತಪ್ಪಿಸಲು ವರಿಷ್ಠರು ಮನವೊಲಿಸುವ ಪ್ರಯತ್ನ ಮಾಡಬೇಕು. ಎಷ್ಟೇ ದೊಡ್ಡ ಚುನಾಯಿತ ಪ್ರತಿನಿಧಿಗೆ ನಾನು ಎಂಬ ಅಭಿಪ್ರಾಯ ಬಂದರೆ ಸ್ವಾಭಾವಿಕವಾಗಿ ನೋವಾಗುತ್ತದೆ. 

ಬಿಜೆಪಿ ಮಾಡಿರುವ ಭ್ರಷ್ಟಾಚಾರ, ದುರಾಡಳಿತದಿಂದ ಜನರು ಬೇಸತ್ತಿದ್ದಾರೆ: ಸಿದ್ದರಾಮಯ್ಯ

ಆಗ ಅದು ಪರೀಕ್ಷೆ ಆಗಲಿದೆ. ಆಗ ಆತನ ನಡೆ ಬಗ್ಗೆ ಸ್ಪಷ್ಟವಾಗಲಿದೆ ಎಂದು ಪ್ರತಿಕ್ರಿಯಿಸಿದರು. ನನಗೆ ತೊಂದರೆ ಆದಾಗ ಪಕ್ಷದ ವಿಚಾರ ಮತ್ತು ಸಿದ್ಧಾಂತವನ್ನು ತೆಗಳೋದು, ಅನುಕೂಲ ಆದಾಗ ಹೊಗಳೋದು ಸರಿಯಲ್ಲ. ಬಿಜೆಪಿ ಕಾರ್ಯಕರ್ತರ ಫಲದಿಂದ ನಾನು ನಾಯಕನಾಗಿದ್ದೆ ಎಂಬ ನೆನಪು ಇಟ್ಟುಕೊಂಡು ನಾಯಕರು ಮುಂದಿನ ನಡೆಯನ್ನು ತೀರ್ಮಾನಿಸಬೇಕೆಂದು ಪಕ್ಷ ಬಿಡುವವರಿಗೆ ತಿಳಿಹೇಳಿದರು. ನಾನು ಏನೇ ಹೇಳಿದರೂ ಈ ಸಂದರ್ಭ ಸೂಕ್ತವಲ್ಲ. ಆದರೂ ಪಕ್ಷ ಬಿಡುವವರು ಒಮ್ಮೆ ಯೋಚಿಸಬೇಕೆಂದು ಕರೆ ನೀಡಿದರು.

ಗೆಲ್ಲಿಸಿದರೇ ತಲೆ ಎತ್ತಿ ನಡೆಯುವ ಹಾಗೆ ನೋಡಿಕೊಳ್ಳುತ್ತೇನೆ: ರಮೇಶ ಕತ್ತಿ

‘ಶತಾಯಗತಾಯ ಶಿವಮೊಗ್ಗ ಗೆಲ್ತೇವೆ’: ಬಿಜೆಪಿಯ ನಡೆಗೆ ಶಿವಮೊಗ್ಗ ಉತ್ತಮ ಸಂದೇಶ ಸಾರಿದೆ. ಪಕ್ಷ ಹೇಳಿದಾಗ ಅಧಿಕಾರ ಬೇಡ ಎಂದಾಗ ಚುನಾವಣೆಯಿಂದಲೇ ಹಿಂದೆ ಸರಿದಿರುವೆ. ಆದರೆ, ಚುನಾವಣೆಯಲ್ಲಿ ಶತಾಯಗತಾಯ ನಗರ ವಿಧಾನಸಭೆಯನ್ನು ಗೆಲ್ಲುತ್ತೇವೆ. ಶೀಘ್ರದಲ್ಲೇ ಬಾಕಿ ಉಳಿದಿರುವ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸುವ ನಿರೀಕ್ಷೆ ಇದೆ ಎಂದು ಕೆ.ಎಸ್‌. ಈಶ್ವ​ರಪ್ಪ ಈ ಸಂದರ್ಭ ಹೇಳಿ​ದ​ರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.