ನಾನು ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಆರಂಭಿಸೋಕೆ ಸಿದ್ಧನಿಲ್ಲ: ಖಾದರ್

ವಾಲ್ಮೀಕಿ ಹಗರಣ ತುರ್ತಾಗಿತ್ತು ಹಾಗಾಗಿ ಚರ್ಚೆಗೆ ಅವಕಾಶ ಕೊಟ್ಟೆವು. ಅತ್ಯಗತ್ಯ ಅದಕ್ಕೆ ಕೊಟ್ಟೆವು. ಮುಡಾ ಹಗರಣ ಕಳೆದ 10, 12 ದಿನಗಳ ಹಿಂದಷ್ಟೇ ಬಂದಿರೋ ವಿಚಾರವಾಗಿದೆ. ಜ್ಯೂಡಿಷಿಯಲ್ ಇನ್ವೆಷ್ಟಿಗೇಷನ್ ಆಗ್ತಾ ಇದೆ‌. ಇದು ಈಗ ಆಗಿರುವ ಘಟನೆ ಅಲ್ಲ. ನಾನು ಚರ್ಚೆಗೆ ಅವಕಾಶ ಕೊಟ್ಟರೆ ಕೆಟ್ಟ ಸಂಪ್ರದಾಯ ಆರಂಭವಾಗುತ್ತದೆ ಎಂದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ 

I am not ready to start a bad tradition as a speaker Says ut khader grg

ಬೆಂಗಳೂರು(ಜು.24):  ಇವತ್ತು ಪ್ರತಿಪಕ್ಷ ಮಿತ್ರರ ಜೊತೆ ಚರ್ಚೆ ಮಾಡಿದ್ವಿ. ಅವರಿಗೆ ಬೇಕಾದ ಸವಲತ್ತಿಗೆ ಅವಕಾಶ ನೀಡಿದ್ದೇವೆ‌. ನಾನು ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಆರಂಭಿಸೋಕೆ ಸಿದ್ಧನಿಲ್ಲ. ನಿಲುವಲಿ ಸೂಚನೆ ಅತ್ಯಗತ್ಯ, ತುರ್ತಾಗಿರಬೇಕು, ಸಾರ್ವಜನಿಕ ಮಹತ್ವ ಆಗಿರಬೇಕು. ವಾಲ್ಮೀಕಿ ಹಗರಣ ತುರ್ತಾಗಿತ್ತು ಹಾಗಾಗಿ ಚರ್ಚೆಗೆ ಅವಕಾಶ ಕೊಟ್ಟೆವು. ಅತ್ಯಗತ್ಯ ಅದಕ್ಕೆ ಕೊಟ್ಟೆವು. ಮುಡಾ ಹಗರಣ ಕಳೆದ 10, 12 ದಿನಗಳ ಹಿಂದಷ್ಟೇ ಬಂದಿರೋ ವಿಚಾರವಾಗಿದೆ. ಜ್ಯೂಡಿಷಿಯಲ್ ಇನ್ವೆಷ್ಟಿಗೇಷನ್ ಆಗ್ತಾ ಇದೆ‌. ಇದು ಈಗ ಆಗಿರುವ ಘಟನೆ ಅಲ್ಲ. ನಾನು ಚರ್ಚೆಗೆ ಅವಕಾಶ ಕೊಟ್ಟರೆ ಕೆಟ್ಟ ಸಂಪ್ರದಾಯ ಆರಂಭವಾಗುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ. 

ಈಗ ಅವಕಾಶ ಕೊಟ್ಟರೆ ಮುಂದೆ ಹತ್ತು ವರ್ಷದ ಕೇಸ್ ತಗೊಂಡು ಚರ್ಚೆಗೆ ಅವಕಾಶ ಕೇಳಬಹುದು. ಆಗ ನನ್ನ ಉದಾಹರಣೆ ತೆಗೆದುಕೊಳ್ಳಬಹುದು. ಅವರಿಗೆ ಹೋರಾಟಕ್ಕೆ ಬೇಕಾದ ಸವಲತ್ತು ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ. 

ಅಯ್ಯೋ...! ಈ ಬಾರಿಯೂ ಶಾಸಕ ಪ್ರದೀಪ್ ಈಶ್ವರ್‌ಗೆ ಮಾತನಾಡಲು ಅವಕಾಶ ಕೊಡದ ಸ್ಪೀಕರ್!

ಸ್ಪೀಕರ್ ಖುರ್ಚಿ ಬಳಿ ಫೋಟೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು, ಸದನದ ಒಳಗಡೆ ಅಧಿವೇಶನದ ವೇಳೆ ತೆಗೆದುಕೊಂಡ ಫೋಟೋ ಅಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೈಕ್ ಟೆಸ್ಟಿಂಗ್ ಗೆ ಹೋದಾಗ ತೆಗೆದುಕೊಂಡ ಫೋಟೋ ಆಗಿದೆ. ನನ್ನ ಗಮನಕ್ಕೂ ಇದು ಬಂದಿಲ್ಲ. ಸೆಷನ್ ಪ್ರಾರಂಭವಾಗುವ ಮುಂಚೆ ಕೆಲಸ ಕಾರ್ಯ ವೇಳೆ ರಾತ್ರಿ ಪರಿಶೀಲನೆಗೆ ಬಂದಾಗ ಅನೇಕರು ಬಂದು ತೆಗೆದುಕೊಂಡ ಫೋಟೋ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

Latest Videos
Follow Us:
Download App:
  • android
  • ios