ಎಷ್ಟು ಬಾರಿ ವಿನಾಯ್ತಿ ಕೇಳೀರಿ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹೈಕೋರ್ಟ್ ಗರಂ

ಪದೇ ಪದೇ ಸಮಯ ಕೇಳಲಾಗುತ್ತಿದೆ. ಮುಂದಿನ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸುತ್ತೀರಿ. ಆದರೆ, ಮತ್ತೆ ಬಂದು ವಿನಾಯಿತಿ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಗರಂ ನ್ಯಾಯಾಧೀಶರು 

How many times do you ask for exemption Says High Court to Union Minister HD Kumaraswamy grg

ಬೆಂಗಳೂರು(ನ.07): ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಆರೋಪಿ ಯಾಗಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್. ಡಿ.ಕುಮಾರಸ್ವಾಮಿ ವಿಚಾರಣೆಗೆ ಗೈರಾಗಿರುವುದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. 

ಸಾಮಾಜಿಕ ಕಾರ್ಯಕರ್ತ ಮಹಾದೇವಸ್ವಾಮಿ ದಾಖಲಿಸಿದ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಹಾಜರಾತಿಗೆ ವಿನಾಯಿತಿ ಕೋರಿದ್ದಕ್ಕೆ ಗರಂ ಆದರು. ಕುಮಾರಸ್ವಾಮಿ ಪರ ವಕೀಲರು, ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಹಾಜರಾತಿಗೆ ವಿನಾಯಿತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದರು. 

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಯಾವುದೇ ಆತುರದ ಕ್ರಮ ಬೇಡ: ಹೈಕೋರ್ಟ್

ಇದಕ್ಕೆ ನ್ಯಾಯಾಧೀಶರು ಗರಂ ಆದರು. ಪದೇ ಪದೇ ಸಮಯ ಕೇಳಲಾಗುತ್ತಿದೆ. ಮುಂದಿನ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸುತ್ತೀರಿ. ಆದರೆ, ಮತ್ತೆ ಬಂದು ವಿನಾಯಿತಿ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ನಂತರ ವಿಚಾರಣೆಯನ್ನು ನ.16ಕ್ಕೆ ಮುಂದೂಡಿಕೆ ಮಾಡಿ, ಅಂದು ಹಾಜರಾಗುವಂತೆ ಸೂಚನೆ ನೀಡಿದರು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ 2007ರಲ್ಲಿ ಬನಶಂಕರಿ 5ನೇ ಹಂತದಲ್ಲಿ ಹಲಗೆವಡೆರಹಳ್ಳಿಯಲ್ಲಿ 2.24 ಎಕರೆ ಡಿ-ನೊಟಿಫೀಕೇಶಷನ್ ಮಾಡಿದ್ದಾರೆ ಎಂದು ಆರೋಪಿಸಿ ಮಹಾದೇವಸ್ವಾಮಿ ದೂರು ನೀಡಿ ದ್ದರು. ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios