Asianet Suvarna News Asianet Suvarna News

ಲಾಕ್‌ಡೌನ್‌ ಮುಗಿಯುವವರೆಗೆ ಮನೆಯಲ್ಲೇ ಇರಿ : ಗೃಹ ಸಚಿವರ ಸೂಚನೆ

  •  ಲಾಕ್‌ಡೌನ್‌ ವಿನಾಯಿತಿಗೆ ಇನ್ನು ಮೂರು ದಿನಗಳು ಬಾಕಿಯಿರುವ ಮುನ್ನವೇ ಜನರು ರಸ್ತೆಗೆ
  • ನಿಯಮ ಪಾಲಿಸದೆ ಪೊಲೀಸರ ಬಲ ಪ್ರಯೋಗಕ್ಕೆ ಜನರು ಅವಕಾಶ ಕೊಡಬಾರದು 
  • ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೂಚನೆ
Home Minister bommai instruct To People Stay Home snr
Author
Bengaluru, First Published Jun 12, 2021, 8:02 AM IST | Last Updated Jun 12, 2021, 8:54 AM IST

ಬೆಂಗಳೂರು (ಜೂ.12):  ಲಾಕ್‌ಡೌನ್‌ ವಿನಾಯಿತಿಗೆ ಇನ್ನು ಮೂರು ದಿನಗಳು ಬಾಕಿಯಿರುವ ಮುನ್ನವೇ ಜನರು ರಸ್ತೆಗಿಳಿದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ನಿಯಮ ಪಾಲಿಸದೆ ಪೊಲೀಸರ ಬಲ ಪ್ರಯೋಗಕ್ಕೆ ಜನರು ಅವಕಾಶ ಕೊಡಬಾರದು ಎಂದು ಎಚ್ಚರಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಸಂದರ್ಭದಲ್ಲಿ ಲಾಕ್‌ಡೌನ್‌ ಅವಧಿ ಮುಗಿಯುವವರೆಗೆ ಮನೆಯಲ್ಲೇ ಇದ್ದು ನಾಗರಿಕರು ಸಹಕಾರ ನೀಡಬೇಕು ಎಂದು ಕೋರಿದರು.

5 ಕೇಸ್‌ ಪತ್ತೆಯಾದ್ರೆ ಹಳ್ಳಿ ಸೀಲ್‌ಡೌನ್‌: ಸಚಿವ ಸುಧಾಕರ್‌ .

ಜೂನ್‌ 14ರ ಸೋಮವಾರ ನಂತರ ಲಾಕ್‌ಡೌನ್‌ಗೆ ವಿನಾಯಿತಿ ನೀಡಲಾಗಿದೆ. ಆದರೆ ಲಾಕ್‌ಡೌನ್‌ ವಿನಾಯಿತಿ ಇಂದಿನಿಂದಲೇ ಜಾರಿಗೆ ಬಂದಿರುವಂತೆ ಭಾವಿಸಿ ಜನರು ಮನೆಯಿಂದ ಹೊರ ಬರುತ್ತಿರುವುದು ಸರಿಯಲ್ಲ. ಕಾನೂನು ಪಾಲಿಸಿ ಪೊಲೀಸರೊಂದಿಗೆ ಜನರಿಗೆ ಸಹಕರಿಸಬೇಕು. ಪೊಲೀಸರ ಬಲ ಪ್ರಯೋಗಕ್ಕೆ ಅವಕಾಶ ಕೊಡಬಾರದು ಎಂದರು.

ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಕೆಲ ಕ್ಷೇತ್ರಗಳಿಗೆ ಲಾಕ್‌ಡೌನ್‌ ನಿಯಮದಲ್ಲಿ ಮುಖ್ಯಮಂತ್ರಿಗಳು ರಿಯಾಯಿತಿ ಘೋಷಿಸಿದ್ದಾರೆ. ಕೈಗಾರಿಕಾ ಕ್ಷೇತ್ರಗಳಲ್ಲಿ ಶೇ.50ರಷ್ಟುಸಿಬ್ಬಂದಿಗೆ ಕೆಲಸಕ್ಕೆ ಅವಕಾಶ ಕೊಡಲಾಗಿದೆ. ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಹಾಗೂ ಅವರಿಗೆ ಲಸಿಕೆ ಕೊಡಿಸುವ ಕೆಲಸವನ್ನು ಮಾಲಿಕರೇ ಮಾಡಬೇಕು ಎಂದು ಹೇಳಿದರು.

ನಿಲ್ದಾಣಗಳಲ್ಲಿ ಕೊರೋನಾ ಟೆಸ್ಟ್‌?

ಲಾಕ್‌ಡೌನ್‌ ವಿನಾಯಿತಿಯಿಂದ ಬೆಂಗಳೂರಿಗೆ ಮರು ವಲಸೆ ಶುರುವಾಗುವ ಹಿನ್ನೆಲೆಯಲ್ಲಿ ರೈಲ್ವೆ, ವಿಮಾನ ಹಾಗೂ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕೊರೋನಾ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಲಾಕ್‌ಡೌನ್‌ ಜಾರಿಯಾದ ಬಳಿಕ ನಗರ ತೊರೆದು ಬಹುತೇಕರು ಊರುಗಳಿಗೆ ಜನರು ಹೋಗಿದ್ದರು. ಈಗ ಲಾಕ್‌ಡೌನ್‌ ನಿಯಮಗಳು ಸಡಿಲಿಕೆ ಮಾಡಿದ ಕಾರಣ ನಗರಕ್ಕೆ ಜನರು ಮರಳುವ ಸಾಧ್ಯತೆಗಳಿವೆ. ಹೀಗಾಗಿ ಹೆಚ್ಚು ಜನಸಂದಣಿಯಾಗುವ ನಿಲ್ದಾಣಗಳಲ್ಲಿ ಕೊರೋನಾ ಪರೀಕ್ಷೆ ನಡೆಸುವ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios