ಡಿಕೆಶಿ ಹೇಳಿಕೆ ಗಲಭೆಕೋರರ ರಕ್ಷಿಸುವ ತಂತ್ರ: ಗೃಹ ಸಚಿವ ಬೊಮ್ಮಾಯಿ

ಕಮಲ್‌ ಪಂತ್‌ ದಕ್ಷ, ಪ್ರಾಮಾಣಿಕ ಅಧಿಕಾರಿ: ಬೊಮ್ಮಾಯಿ| ಕಾವಲ್‌ಭೈರಸಂದ್ರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ವಿಡಿಯೋಗಳಲ್ಲಿ ಸ್ಪಷ್ಟವಾಗಿದ್ದು, ಗಲಭೆಕೋರರ ವಿರುದ್ಧ ನಿರ್ಧಾಕ್ಷಿಣವಾಗಿ ಪೊಲೀಸ್‌ ಆಯುಕ್ತರು ಕೈಗೊಂಡಿದ್ದಾರೆ| ಆಯುಕ್ತರ ಕ್ರಮದ ಬಗ್ಗೆ ಜನರ ಮೆಚ್ಚುಗೆ| 
 

Home Minister Basavaraj Bommai Reacts On D K Shivakumar Statement

ಬೆಂಗಳೂರು(ಆ.21): ದಕ್ಷ, ಪ್ರಮಾಣಿಕ ಅಧಿಕಾರಿ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಅವರನ್ನು ಏಜೆಂಟ್‌ ಎಂದು ಕರೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟ್‌ ಮಾಡಿರುವ ಅವರು, ಕಮಲ್‌ಪಂತ್‌ ಅವರ ಕುರಿತ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಗಲಭೆಕೋರರನ್ನು ಪರೋಕ್ಷವಾಗಿ ರಕ್ಷಣೆ ಮಾಡುವ ಮತ್ತೊಂದು ತಂತ್ರವಾಗಿದೆ. ಇದು ಯಾವುದು ನಡೆಯುವುದಿಲ್ಲ ಎಂದಿದ್ದಾರೆ.

'ಏಜೆಂಟರಂತೆ ಕೆಲಸ ಮಾಡ್ಬೇಡಿ' ಕಮಿಷನರ್‌ ವಿರುದ್ಧ ಡಿಕೆಶಿ ಗುಡುಗು

ಕಾವಲ್‌ಭೈರಸಂದ್ರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ವಿಡಿಯೋಗಳಲ್ಲಿ ಸ್ಪಷ್ಟವಾಗಿದ್ದು, ಗಲಭೆಕೋರರ ವಿರುದ್ಧ ನಿರ್ಧಾಕ್ಷಿಣವಾಗಿ ಪೊಲೀಸ್‌ ಆಯುಕ್ತರು ಕೈಗೊಂಡಿದ್ದಾರೆ. ಆಯುಕ್ತರ ಕ್ರಮದ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರನ್ನು ಏಜೆಂಟರನ್ನಾಗಿ ನಡೆಸಿಕೊಳ್ಳುವುದು ಅವರ ಸಂಸ್ಕೃತಿ, ಪೊಲೀಸರ ನಿಷ್ಪಕ್ಷಪಾತವಾಗಿ ತನಿಖೆಯನ್ನು ಮಾಡುತ್ತಿದ್ದಾರೆ. ಇದರಲ್ಲಿ ಪ್ರಭಾವ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios