Asianet Suvarna News Asianet Suvarna News

ರೇಪ್‌, ಕಿಡ್ನಾಪ್ ಕೇಸ್‌: ನಾಳೆ ಹೆಚ್.ಡಿ.ರೇವಣ್ಣಗೆ ಬಿಗ್ ಡೇ..!

ನ್ಯಾ.ಎಂ. ನಾಗಪ್ರಸನ್ನ ಅವರ ನ್ಯಾಯಪೀಠದಿಂದ ಆದೇಶ ಹೊರಬೀಳಲಿದೆ. ವಾದ-ಪ್ರತಿವಾದವನ್ನ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನಾಳೆ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಎಚ್‌.ಡಿ. ರೇವಣ್ಣ ಅವರಿಗೆ ಈಗಿನಿಂದಲೇ ತಳಮಳ ಶುರುವಾಗಿದೆ. 

High Court will be decision the SIT's request to cancel the bail granted to HD Revanna grg
Author
First Published Aug 27, 2024, 9:37 PM IST | Last Updated Aug 27, 2024, 9:37 PM IST

ಬೆಂಗಳೂರು(ಆ.27): ಅತ್ಯಾಚಾರ, ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಬಿಗ್ ಡೇ ಆಗಲಿದೆ. ಹೌದು, ಜಾಮೀನು ರದ್ದುಪಡಿಸುವಂತೆ ಕೋರಿ ಎಸ್ಐಟಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. 

ಅರ್ಜಿ ಸಂಬಂಧ ಹೈಕೋರ್ಟ್ ನಾಳೆ(ಬುಧವಾರ) ಆದೇಶ ಪ್ರಕಟಿಸಲಿದೆ. ಇದೇ ವೇಳೆ ಅಪಹರಣ ಪ್ರಕರಣದ ಇತರೆ ಆರೋಪಿಗಳಾದ ಎಚ್.ಕೆ. ಸುಜಯ್, ಸತೀಶ್ ಬಾಬಣ್ಣ, ರಾಜಗೋಪಾಲ, ಮಾವುಗೌಡ ಅವರ ಜಾಮೀನು ಅರ್ಜಿ ಆದೇಶ ಕೂಡ ಪ್ರಕಟಿಸಲಿದೆ. 

ಪ್ರಜ್ವಲ್‌- ಎಚ್‌.ಡಿ. ರೇವಣ್ಣ ವಿರುದ್ಧ ಜಾರ್ಜ್‌ಶೀಟ್‌: ಮನೆಗೆಲಸದ ಒಬ್ಬಳೇ ಮಹಿಳೆಗೆ ತಂದೆಯಿಂದ ಕಿರುಕುಳ, ಮಗನಿಂದ ರೇಪ್‌!

ನ್ಯಾ.ಎಂ. ನಾಗಪ್ರಸನ್ನ ಅವರ ನ್ಯಾಯಪೀಠದಿಂದ ಆದೇಶ ಹೊರಬೀಳಲಿದೆ. ವಾದ-ಪ್ರತಿವಾದವನ್ನ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನಾಳೆ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಎಚ್‌.ಡಿ. ರೇವಣ್ಣ ಅವರಿಗೆ ಈಗಿನಿಂದಲೇ ತಳಮಳ ಶುರುವಾಗಿದೆ. 

Latest Videos
Follow Us:
Download App:
  • android
  • ios