ಅಂಬರೀಶ್ ಅವರ ಅಂತ್ಯಕ್ರಿಯೆ ನಾಳೆ ಅಂದ್ರೆ ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ  ನಡೆಯಲಿದ್ದು, ಪಾರ್ಥಿವ ಶರೀರ ಮೆರವಣಿಗೆ ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಬದಲಾದ ಮಾರ್ಗ ಹೀಗಿದೆ.

ಬೆಂಗಳೂರು, [ನ.25]: ಹಿರಿಯ ನಟ ಅಂಬರೀಶ್(66) ಅವರ ಅಂತ್ಯಕ್ರಿಯೆ ನಾಳೆ ಅಂದ್ರೆ ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.

ಆದ್ದರಿಂದ ಬೆಂಗಳೂರು ನಗರದಲ್ಲಿ ವಿಶೇಷವಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಅಂಬರೀಶ್ ಪಾರ್ಥಿವ ಶರೀರ ಮೆರವಣಿಗೆ ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. 

ಪಾರ್ಥಿವ ಶರೀರ ತೆಗೆದುಕೊಂಡು ಹೋಗುವ ರಸ್ತೆಗಳನ್ನು ಸೆಕ್ಟರ್ ಗಳಾಗಿ ವಿಂಗಡಣೆ ಮಾಡಿ, ಪ್ರತಿ ಸೆಕ್ಟರ್ ನ ಉಸ್ತುವಾರಿಯನ್ನು ಡಿಸಿಪಿ ನೇತೃತ್ವದ ತಂಡಕ್ಕೆ ನೀಡಲಾಗಿದೆ.

ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ವಾಹನ ದಟ್ಟಣೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

ಮೆರವಣಿಗೆ ಸಾಗುವ ಮಾರ್ಗ
* HALನಿಂದ ಹಡ್ಸನ್ ವೃತ್ತ, ಹಲಸೂರ್ ಗೇಟ್, ಪೊಲೀಸ್ ಕಾರ್ನರ್,
* ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಪ್ಯಾಲೇಸ್ ರೋಡ್, 
* CID ಜಂಕ್ಷನ್, ಬಸವೇಶ್ವರ ಸರ್ಕಲ್, ಹಳೆಯ ಹೈಗ್ರೌಂಡ್ ಜಂಕ್ಷನ್, 
* ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ಸಾಂಕಿ ರಸ್ತೆ, 
* ಮಾರಮ್ಮ ಸರ್ಕಲ್, BHEL, ಯಶವಂತಪುರ ಫ್ಲೈಓವರ್, 
* ಮೆಟ್ರೋ ರೈಟ್ ಟರ್ನ್, RMC ಯಾರ್ಡ್, ಗುರುಗುಂಟೆಪಾಳ್ಯ ಜಂಕ್ಷನ್, 
* ಸಿಎಂಟಿಐ, FTIನಿಂದ ಕಂಠೀರವ ಸ್ಟುಡಿಯೋವರೆಗೆ ಮೆರವಣಿಗೆ
* ಮೆರವಣಿಗೆ ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ

ಪೊಲೀಸ್ ಬಂದೋಬಸ್ತ್ ಹೇಗಿದೆ?
* 11,000 ಕಾನೂನು ಸುವ್ಯವಸ್ಥೆ ಪೊಲೀಸರು ಹಾಗೂ ಅಧಿಕಾರಿಗಳು 
* 4,000 ಸಂಚಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳು
* 30 ಕೆ ಎಸ್ ಆರ್ ಪಿ ತುಕಡಿಗಳು 
* 34 ಸಿ ಎ ಆರ್ ತುಕಡಿಗಳು 
* 3 ಆರ್ ಎ ಎಫ್ ತುಕಡಿಗಳು 
* 5 ಆರ್ ಐ ವಿ