Asianet Suvarna News Asianet Suvarna News

ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ : ಫುಲ್ ಟ್ರಾಫಿಕ್ ಜಾಮ್

ಬೆಂಗಳೂರಿನಲ್ಲಿಂದು ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲೆಡೆ ಫುಲ್ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. 

Heavy Traffic Jam in Bengaluru Due To  Farmers Protest  snr
Author
Bengaluru, First Published Jan 20, 2021, 1:23 PM IST

ಬೆಂಗಳೂರು (ಜ.20): ಇಂದು ಬೆಂಗಳೂರಿನಲ್ಲಿ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಎಲ್ಲೆಡೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. 

ಪ್ರತಿಭಟನೆ ಬಗ್ಗೆ ಪೊಲೀಸರು ಮೊದಲೇ ಟ್ರಾಫಿಕ್ ನಿರ್ವಹಣೆ ಬಗ್ಗೆ ಪ್ಲಾನ್ ಮಾಡದ ಹಿನ್ನೆಲೆಯಲ್ಲಿ ನಿರ್ಲಕ್ಷ್ಯದಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ.   

ರಾಜ್ಯದ ವಿವಿಧ ಭಾಗದಿಂದ ಟ್ರಾಕ್ಟರ್ ,ಬಸ್ ಗಳಲ್ಲಿ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದು, ಫ್ರೀಡಂ ಪಾರ್ಕ್ ರಸ್ತೆಯಲ್ಲಿ ಸಂಪೂರ್ಣ ಬಂದ್ ಆಗಿದೆ. ಮೆರವಣಿಗೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಸುಗಮಗಿಳಿಸಲು ಸಂಚಾರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 

ರೈತರ ಜೊತೆಗಿನ 9ನೇ ಸುತ್ತಿನ ಮಾತುಕತೆ ವಿಫಲ; ಮತ್ತೆ ಸಭೆ ಯಾವಾಗ? ...

ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದು,  ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಟ್ರಾಕ್ಟರ್ ಗಳ ಜಮಾವಣೆ ಮಾಡಲಾಗಿದೆ. ಬೆಂಗಳೂರಿನ ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತರು ಕೂಡ ರಾಯಣ್ಣ ಸರ್ಕಲ್ ನಲ್ಲಿ‌ ಜಮಾವಣೆ ಮಾಡಿದ್ದಾರೆ. 

ಕಾಂಗ್ರೆಸ್ ರಾಜಭವನ ಚಲೋ ಹಿನ್ನೆಲೆಯಲ್ಲಿ ಮೌರ್ಯ ಸರ್ಕಲ್ ಬಳಿ ಕಂಪ್ಲೀಟ್ ಟ್ರಾಫಿಕ್ ಜಾಮ್ ಉಂಟಾಗಿದೆ.  ಆನಂದ್ ರಾವ್ ಸರ್ಕಲ್, ಶಿವಾನಂದ್ ಸರ್ಕಲ್ & ಮಾರ್ಯ ಸರ್ಕಲ್ ಸಂಚಾರ ದಟ್ಟಣೆ ಉಂಟಾಗಿದ್ದು,  ಟ್ರಾಕ್ಟರ್ ಮೂಲಕ‌ ರೈತರು ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ.  ಇದರಿಂದಾಗಿ  ವಾಹನ ಸವಾರರು ಪರದಾಡುವಂತಾಗಿದೆ.  ಪ್ರತಿಭಟನಾಕಾರರನ್ನು ನಿಯಂತ್ರಿಸಲು ಖಾಕಿ ಪಡೆಯೂ ಕೂಡ ಹರಸಾಹಸ ಪಡುತ್ತಿದೆ. 

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ :  ರೈತರನ್ನ ಬಗ್ಗು ಬಡೆಯೋಕೆ ಕೇಂದ್ರ ಸರ್ಕಾರ ಏನ್ ಮಾಡ್ಬೇಕೋ ಅದೆಲ್ಲವೂ ಮಾಡುತ್ತಿದೆ.  ಸುಪ್ರೀಂಕೋರ್ಟ್ ಸ್ಟೇ ಕೊಟ್ಟಿದೆ. ಆದರೆ ದೇಶದಲ್ಲಿರುವ ಎಲ್ಲಾ ರೈತರ ಬೇಡಿಕೆ ಆ ಕಾಯ್ದೆಯನ್ನ ರದ್ದು ಮಾಡಬೇಕು ಎನ್ನುವುದೇ ಆಗಿದೆ. ದೇಶದಲ್ಲಿ ರೈತರ ಪರವಾಗಿ ಕಾಂಗ್ರೆಸ್ ಇದೆ. ಆ ನಿಟ್ಟಿನಲ್ಲಿ ಇವತ್ತು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ.  ರಾಜ್ಯದಿಂದ ಆರಿಸಿ ಹೋಗಿರುವ 25 ಜನ ಸಂಸದರು ನಾಮಾಕವಸ್ಥೆಗೆ ಇದ್ದಾರೆ ಎಂದು ಈ ವೇಳೆ ಕೈ ಮುಖಂಡ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

ಇನ್ನು ಈ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಒಂದೇ ಟ್ರಾಕ್ಟರ್ ನಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಏರಿ ಸವಾರಿ ಹೊರಟಿದ್ದಾರೆ.  

Follow Us:
Download App:
  • android
  • ios