Asianet Suvarna News Asianet Suvarna News

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ: ಗೋಡೆ ಕುಸಿದು ಮಹಿಳೆ ಸಾವು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕೊಂಡಗೂಳಿಯಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಗದೇವಿ ಮನೆಗೋಡೆ ಕುಸಿತು ಮೃತಪಟ್ಟ ಮಹಿಳೆ. 

Heavy rains in many districts of Karnataka on august 27th 2024 grg
Author
First Published Aug 18, 2024, 8:00 AM IST | Last Updated Aug 18, 2024, 8:00 AM IST

ಬೆಂಗಳೂರು(ಆ.18):  ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ ಸೇರಿ ಏಳಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. 

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕೊಂಡಗೂಳಿಯಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಗದೇವಿ (22) ಮನೆಗೋಡೆ ಕುಸಿತು ಮೃತಪಟ್ಟ ಮಹಿಳೆ. 

ಇಂದು, ನಾಳೆ ಕರ್ನಾಟಕದ 14 ಜಿಲ್ಲೆಗಳಲ್ಲಿ ಭಾರೀ ಮಳೆ..!

ಕಲಬುರಗಿ, ಬಳ್ಳಾರಿ, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತಿತರ ಕಡೆ ಶುಕ್ರವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದೆ. ಇದರಿಂದ ನಗರದ ಹಲವೆಡೆ ನೀರು ನಿಂತು ಜನಜೀವನಕ್ಕೆ ತೊಂದರೆಯಾಗಿದೆ.

Latest Videos
Follow Us:
Download App:
  • android
  • ios