Asianet Suvarna News Asianet Suvarna News

ಮುಂದಿನ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

*    ಉತ್ತರ ಒಳನಾಡಿನಲ್ಲಿ ಆ.22ರವರೆಗೆ ಕೆಲವು ಕಡೆ ಮಳೆಯಾಗುವ ಸಾಧ್ಯತೆ
*   ಶುಕ್ರವಾರ ರಾಜ್ಯದ ಬಹುತೇಕ ಕಡೆ ಸುರಿದ ಮಳೆ 
*   ಉಡುಪಿಯ ಕೋಟದಲ್ಲಿ 6 ಸೆಂ.ಮೀ ಮಳೆ 

Heavy Rain Likely in Next Four Days in Coastal Part of Karnataka grg
Author
Bengaluru, First Published Aug 21, 2021, 8:00 AM IST

ಬೆಂಗಳೂರು(ಆ.21): ಆಗಸ್ಟ್‌ 24ರವರೆಗೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್‌ ಪಾಟೀಲ್‌ ತಿಳಿಸಿದ್ದಾರೆ. 

ಉತ್ತರ ಒಳನಾಡಿನಲ್ಲಿ ಆ.22ರವರೆಗೆ ಕೆಲವು ಕಡೆ ಮಳೆಯಾಗುವ ಸಾಧ್ಯತೆಯಿದ್ದು, ಬಳಿಕ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಆ.22 ರಂದು ಬಹುತೇಕ ಎಲ್ಲ ಕಡೆ ಮಳೆಯಾಗಲಿದೆ. ನಂತರ ಮಳೆಯ ಪ್ರಮಾಣ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.

3 ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ : ಹವಾಮಾನ ಇಲಾಖೆ

ಶುಕ್ರವಾರ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಸಾಮಾನ್ಯವಾಗಿತ್ತು. ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗಿದೆ.

ಉಡುಪಿಯ ಕೋಟ 6 ಸೆಂ.ಮೀ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಗೋಕರ್ಣ, ರಾಯಚೂರಿನ ಅರೆಕಾಲಿನ ಹವಾಮಾನ ವೀಕ್ಷಣಾಲಯ, ಬೆಳಗಾವಿಯ ಕನಬರ್ಗಿ, ಬೆಂಗಳೂರಿನ ಗೋಪಾಲ ನಗರ, ಸೋಂಪುರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.
 

Follow Us:
Download App:
  • android
  • ios