Asianet Suvarna News Asianet Suvarna News

ಕೋಲಾರ, ಕಲಬುರಗಿಯಲ್ಲಿ ವರುಣನ ಅಬ್ಬರ: ದ.ಕ, ಶಿವಮೊಗ್ಗದಲ್ಲಿ ಸಾಧಾರಣ ಮಳೆ

* ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆ
* ರೈಲ್ವೆ ಅಂಡರ್‌ ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರ ಪರದಾಟ
* ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು 

Heavy Rain in Some Parts of Karnataka on July 9th grg
Author
Bengaluru, First Published Jul 10, 2021, 9:46 AM IST

ಬೆಂಗಳೂರು(ಜು.10): ಗುರುವಾರ ತಡರಾತ್ರಿಯಿಂದಲೂ ರಾಜ್ಯದ ಹಲವೆಡೆ ಮುಂದುವರಿದ್ದು, ಕೋಲಾರ, ಕಲಬುರಗಿ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಿದೆ.

ಕೋಲಾರ ಜಿಲ್ಲೆಯಲ್ಲಿ ಬಿದ್ದ ಜೋರು ಮಳೆಯಿಂದ ತಗ್ಗು ಪ್ರದೇಶಗಳಿಗೆ ಸುಮಾರು 4 ಅಡಿಯಷ್ಟು ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಒಂದೇ ಸಮನೆ ಮಳೆ ಸುರಿಯಿತು. ಚರಂಡಿಗಳು ತುಂಬಿದ ಪರಿಣಾಮ ಮನೆಗೆ ನುಗ್ಗಿದ ನೀರಿನಿಂದ ಸಾಮಾನುಗಳು ನೀರು ಪಾಲಾದವು. ರೈಲ್ವೆ ಅಂಡರ್‌ ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು.

ಹೂವಿನಹಡಗಲಿ: ಭಾರೀ ಮಳೆಗೆ 300 ಎಕರೆ ಬೆಳೆಹಾನಿ 

ದ.ಕ. ಜಿಲ್ಲೆಯಾದ್ಯಂತ ಮಳೆ ಉತ್ತಮವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 2-3 ಗಂಟೆಗಳ ಕಾಲ ತುಂತುರು ಮಳೆಯಾಗಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. 2 ದಿನದಿಂದ ದಟ್ಟಮೋಡ ಆವರಿಸಿದ್ದ ಕಲಬುರಗಿ ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಮಳೆಯಾಗುತ್ತಿದ್ದು, ಹಳ್ಳಗಳು, ಮಾರುಕಟ್ಟೆಗಳು, ಸಿದ್ದಲಿಂಗೇಶ್ವರ ಮಠ, ಶಾಲಾವರಣ ಜಲಾವೃತವಾಗಿದೆ.
 

Follow Us:
Download App:
  • android
  • ios