ಬೆಂಗಳೂರು, (ಡಿ.28): ಯುಕೆಯಿಂದ ಬಂದವರಲ್ಲಿ ಇದುವರೆಗೂ 26 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಎಲ್ಲರನ್ನು ಆಸ್ಪತ್ರೆಗೆ‌ ದಾಖಲು ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

"

ಸಚಿವ ಸಂಪುಟ ಸಭೆಗೂ ಮುನ್ನ ಮಾತನಾಡಿದ ಸಚಿವರು, ಯುಕೆಯಿಂದ ಬಂದ 26 ಸೋಂಕಿತರ ಆರೋಗ್ಯವಾಗಿದ್ದಾರೆ. ಎಲ್ಲರಿಗೂ ಕೊರೋನಾ ರೋಗದ ಲಕ್ಷಣ ಇದೆ. ಸೋಂಕಿತ ಮಾದರಿಗಳನ್ನು ICMRಗೆ ಕಳಿಸಿಕೊಡಲಾಗಿದೆ. ಇದು ತುಂಬಾ ಸೂಕ್ಷ್ಮ ವಿಚಾರ ಆಗಿರುವುದರಿಂದ ದೆಹಲಿಯಿಂದಲೇ ಎಲ್ಲರ ಪರೀಕ್ಷಾ ಫಲಿತಾಂಶ ಪ್ರಕಟಿಸುತ್ತಾರೆ. ನಾನು ಕೂಡಾ ICMRಗೆ ಮಾತನಾಡುತ್ತೇನೆ ಎಂದರು.

ತಳಮಳ ಸೃಷ್ಟಿಸಿದೆ ಬ್ರಿಟನ್ ರಿಟರ್ನ್ಡ್‌ ಲೆಕ್ಕ ; ಇಂದು ಹೊರಬೀಳಲಿದೆ ಕೋವಿಡ್ ಟೆಸ್ಟ್ ವರದಿ 

ಯುಕೆಯಿಂದ‌ ಬಂದವರು ಸರ್ಕಾರದ ಜೊತೆ ಸಹಕರಿಸಬೇಕು. 400 ಹೆಚ್ಚು ಜನರು ನಾಪತ್ತೆಯಾಗಿದ್ದು ಈಗಾಗಲೇ ಮಿಸ್ ಆಗಿರುವವರು ಸಿಕ್ಕಿಲ್ಲ. ಅವರನ್ನು ಹುಡುಕಲಾಗುತ್ತಿದ್ದು, ಈ ಬಗ್ಗೆ ಸಂಪುಟ ಸಭೆ ನಂತರ ಗೃಹ ಸಚಿವರ ಜೊತೆ ಮಾತನಾಡುತ್ತೇವೆ‌ ಎಂದು ತಿಳಿಸಿದರು.