Asianet Suvarna News Asianet Suvarna News

ಕುಮಾರಸ್ವಾಮಿಯೇ ಐದು ವರ್ಷ ಸಿಎಂ: ದೇವೇಗೌಡ

ಸರ್ಕಾರ ಐದು ವರ್ಷಗಳ ಕಾಲ ಸುಸೂತ್ರವಾಗಿ ನಡೆಯಲಿದ್ದು, ಕುಮಾರಸ್ವಾಮಿ ಅವರೇ ಅಷ್ಟೂಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

HD Kumaraswamy will be the CM for 5 years says JDS supremo HD Deve Gowda
Author
Bangalore, First Published Nov 19, 2018, 7:36 AM IST

ಹುಬ್ಬಳ್ಳಿ[ನ.19]: ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯ ಎದುರಾಗದಂತೆ ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಭಾಯಿಸುತ್ತೇವೆ. ಸರ್ಕಾರ ಐದು ವರ್ಷಗಳ ಕಾಲ ಸುಸೂತ್ರವಾಗಿ ನಡೆಯಲಿದ್ದು, ಕುಮಾರಸ್ವಾಮಿ ಅವರೇ ಅಷ್ಟೂಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌ ತಾವೂ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಅರ್ಹತೆ ಕಾಂಗ್ರೆಸ್‌ನಲ್ಲಿ ಸಾಕಷ್ಟುಜನರಿಗೆ ಇದೆ. ಆದರೆ ಮೈತ್ರಿ ಸರ್ಕಾರ ರಚಿಸುವಾಗ ಆ ಪಕ್ಷದ ಹೈಕಮಾಂಡೇ ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಎಂದು ಮಾತುಕೊಟ್ಟಿದೆ. ಹೀಗಾಗಿ ಇದರಲ್ಲಿ ಯಾವುದೇ ಬದಲಾವಣೆಯಾಗಲ್ಲ ಎಂದಿದ್ದಾರೆ.

ನಾನು, ಸಿದ್ದು ಜವಾಬ್ದಾರಿ:

ಮೈತ್ರಿ ಸರ್ಕಾರದಲ್ಲಿ ಹಲವಾರು ಸಣ್ಣ ಪುಟ್ಟಸಮಸ್ಯೆಗಳು ಬರುವುದು ಸಹಜ. ಆದರೆ, ಸರ್ಕಾರಕ್ಕೆ ಯಾವುದೇ ಅಪಾಯ ಬಾರದಂತೆ ತಡೆಯಲು ಪ್ರಯತ್ನಿಸುತ್ತೇವೆ. ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಸಮಸ್ಯೆ ನಿಭಾಯಿಸುತ್ತೇವೆ. ಆಗಾಗ ಚರ್ಚೆ ನಡೆಸುವ ಮೂಲಕ ಅಪಾಯ ಎದುರಾಗದಂತೆ ನೋಡಿಕೊಳ್ಳುತ್ತೇವೆ. ಇದಕ್ಕೆ ನಮ್ಮ ಅನುಭವವನ್ನು ಬಳಸಿಕೊಳ್ಳುತ್ತೇವೆ ಎಂದಿದ್ದಾರೆ.

ಮಾಸಾಂತ್ಯ ಸಂಪುಟ ವಿಸ್ತರಣೆ:

ಈ ಮಾಸಾಂತ್ಯಕ್ಕೆ ಮೈತ್ರಿ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನ, ನಿಗಮ-ಮಂಡಳಿಗಳನ್ನು ಭರ್ತಿ ಮಾಡಲಾಗುವುದು. ಇದಕ್ಕಾಗಿ ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದಿದ್ದಾರೆ.

ಹೊರಟ್ಟಿಗೆ ತಕ್ಕಂತೆ ಗೌರವ:

ಸಭಾಪತಿ ಬಸವರಾಜ ಹೊರಟ್ಟಿಅವರಿಗೆ ಸಚಿವ ಸ್ಥಾನ ಸಿಗಬಹುದೇ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ದೇವೇಗೌಡರು, ಹೊರಟ್ಟಿಅವರು ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರು. ಬಹಳಷ್ಟುಬೆಳೆದವರು. ಅವರಿಗೆ ತಕ್ಕಂತೆ ಪಕ್ಷದಲ್ಲಿ ಗೌರವ ನೀಡಲಾಗುವುದು ಎಂದು ನುಡಿದರೆ ವಿನಃ ಸಚಿವ ಸ್ಥಾನ ಕೊಡಲಾಗುವುದೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಇದೇವೇಳೆ ಅನಿತಾ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂದು ಕೇಳಿದ್ದಕ್ಕೆ ಕಾ ನೋಡಿ ಎಂದು ಹೇಳಿದ್ದಾರೆ.

Follow Us:
Download App:
  • android
  • ios