ದಾವಣಗೆರೆ[ಅ.08]: ಬಿಜೆಪಿ ಸರ್ಕಾರದಲ್ಲಿನ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಖಾತೆ ನಿಭಾಯಿಸುವುದು ಕಷ್ಟ ಆಗ್ತಿದೆಯಾ ಅನ್ನೋ ಅನುಮಾನ ಹುಟ್ಟಿದೆ. ಇದಕ್ಕೆ ಕಾರಣವಾಗಿದ್ದು ಅವರು ನೀಡಿದ ಹೇಳಿಕೆ.

ಹೌದು ದಾವಣಗೆರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ '5  ವರ್ಷ ನೀರಾವರಿ ಸಚಿವರಾಗಿದ್ದಾಗ ಇಷ್ಟು ಭಾರ ಆಗಿರಲಿಲ್ಲ. ಆದರೆ, ಈಗ 50 ದಿನಗಳಲ್ಲಿ ಗೃಹ ಖಾತೆ ನಿಭಾಯಿಸಿದ್ದು, ದೊಡ್ಡ ಭಾರ ಆಗಿದೆ' ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಕುರಿತಾಗಿಯೂ ತಮಾತನಾಡಿದ ಅವರು 'ನಮ್ಮ ಮುಖ್ಯಮಂತ್ರಿ ಗುರುಗಳ ಆಶೀರ್ವಾದದಿಂದ ಗೃಹ ಖಾತೆ ಸಿಕ್ಕಿದ್ದು, ದುಷ್ಟರ ಸಂಹಾರ ಶಿಷ್ಟರ ರಕ್ಷಣೆ ಅತಿದೊಡ್ಡ ಜವಾಬ್ದಾರಿ. ಈ ಖಾತೆ ಅತ್ಯಂತ ಜವಾಬ್ದಾರಿಯುತ ಖಾತೆಯಾಗಿದ್ದು, ನಿಭಾಯಿಸುವುದು ಅಷ್ಟು ಸುಲಭವಲ್ಲ' ಎಂದಿದ್ದಾರೆ.