ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಸ್ಥಗಿತವಾಗಲು ಸಾಧ್ಯವಿಲ್ಲ: ಸಚಿವ ಮಹಾದೇವಪ್ಪ
ಕ್ರೈಸ್ ನಲ್ಲಿ 821 ವಸತಿ ಶಾಲೆಗಳಿವೆ. 600 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಇದೇ. ಇನ್ನೂ 200ಕ್ಕೆ ಬಾಡಿಗೆ ನಲ್ಲಿ ನಡೆಸಲಾಗುತ್ತದೆ. ಎಲ್ಲೆಲ್ಲಿ ಬಾಡಿಗೆನಲ್ಲಿ ನಡೆಸಲಾಗುತ್ತೆ, ನಮಗೆ 36 ಕಡೆ ಜಾಗ ಇದ್ದು ಅಲ್ಲಿ ಕಟ್ಟುತ್ತೇವೆ. ಜಾಗ ಇಲ್ಲದ ಕಡೆ ಜಾಗ ಒದಗಿಸಿಕೊಂಡು ಕಟ್ಟುತ್ತೇವೆ ಎಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ
ದಾವಣಗೆರೆ(ಜು.28): ಬಜೆಟ್‌ನಲ್ಲಿ ಅನುದಾನ ನೀಡಿರುವುದು ಮಂಜೂರು ಆಗೇ ಆಗುತ್ತೆ. ಬಿಡುಗಡೆ ಆಗದೇ ಇರಬಹುದು, ಸ್ಥಗಿತ ಆಗಲು ಸಾಧ್ಯವಿಲ್ಲ. ಇಲಾಖೆವಾರು ಅನುದಾನ ಬಿಡುಗಡೆ ಆಗುತ್ತೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ತಿಳಿಸಿದ್ದಾರೆ.
ಅಂಬೇಡ್ಕರ್ ವಸತಿ ಶಾಲೆಗಳು ಗೋಡೌನ್‌ನಲ್ಲಿ ನಡೆಯುತ್ತಿವೆ ವಿಚಾರಕ್ಕೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಸಿ. ಮಹಾದೇವಪ್ಪ ಅವರು, ಕ್ರೈಸ್ ನಲ್ಲಿ 821 ವಸತಿ ಶಾಲೆಗಳಿವೆ. 600 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಇದೇ. ಇನ್ನೂ 200ಕ್ಕೆ ಬಾಡಿಗೆ ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅನುದಾನ ಕೊರತೆ, ಸರ್ವಪಕ್ಷ ಸಭೆಯಲ್ಲಿ ತೀವ್ರ ವಿರೋಧ, ಹೆಚ್ಚು ದಿನ ರಸ್ತೆ ಪಕ್ಕ ನಿಂತ ವಾಹನ ಹರಾಜು
ಎಲ್ಲೆಲ್ಲಿ ಬಾಡಿಗೆನಲ್ಲಿ ನಡೆಸಲಾಗುತ್ತೆ, ನಮಗೆ 36 ಕಡೆ ಜಾಗ ಇದ್ದು ಅಲ್ಲಿ ಕಟ್ಟುತ್ತೇವೆ. ಜಾಗ ಇಲ್ಲದ ಕಡೆ ಜಾಗ ಒದಗಿಸಿಕೊಂಡು ಕಟ್ಟುತ್ತೇವೆ ಎಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.