ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಆಧಾರ್ ಕಾರ್ಡ್ ಬದಲಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕಾರ್ಡ್ ಬಳಸಿ ನಮ್ಮ ಮೆಟ್ರೋದಲ್ಲೂ ಪ್ರಯಾಣಿಸಬಹುದಾಗಿದ್ದು, ಯೋಜನೆ ದುರ್ಬಳಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಇನ್ಮುಂದೆ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿರುವುದಿಲ್ಲ. ಯೋಜನೆ ದುರ್ಬಳಕೆಯನ್ನು ತಡೆಯಲು ರಾಜ್ಯ ಸರ್ಕಾರ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ 1 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಟೆಂಡರ್ ಕರೆದು, ಶೀಘ್ರವೇ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್ ಕಾರ್ಡ್ ಪಡೆಯಲು ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿದ್ದು, ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಭಾಗಿಯಾಗದಿದ್ದಲ್ಲಿ ಸರ್ಕಾರದ ಗ್ಯಾರಂಟಿ ಸೌಲಭ್ಯಗಳು ಲಭ್ಯವಾಗುವುದಿಲ್ಲ.

ಟು ಇನ್ ಒನ್ ಕಾರ್ಡ್

ಆರಂಭದಲ್ಲಿ ಬಿಎಂಟಿಸಿ ಪ್ರಯಾಣಿಕರಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿ, ನಂತರ ಹಂತ-ಹಂತವಾಗಿ ಉಳಿದ ಸಾರಿಗೆ ನಿಗಮಗಳ ಪ್ರಯಾಣಿಕರಿಗೂ ನೀಡಲಾಗುತ್ತದೆ. ವಿಶೇಷವೆಂದರೆ, ಈ ಸ್ಮಾರ್ಟ್ ಕಾರ್ಡ್‌ಗಳನ್ನು 'ನಮ್ಮ ಮೆಟ್ರೋ' ಸಂಚಾರಕ್ಕೂ ಬಳಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಸ್ಮಾರ್ಟ್ ಕಾರ್ಡ್ ವಿಶೇಷತೆ ಏನು?

ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಶಕ್ತಿ ಯೋಜನೆ ಫಲಾನುಭವಿಗಳಿದ್ದಾರೆ.

ಇದೀಗ ಈ ಯೋಜನೆಯಿಂದ ಅನರ್ಹರಿಗೆ ಗೇಟ್ ಪಾಸ್ ಕೊಡೋಕೆ ಸರ್ಕಾರ ಚಿಂತನೆ.

⁠ಸ್ಮಾರ್ಟ್ ಕಾರ್ಡ್ ವಿತರಣೆಗೆ ಟೆಂಡರ್ ಕರೆದಿರೋ ಸರ್ಕಾರ

⁠ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಪ್ಲಾನ್

⁠ಈ ಸ್ಮಾರ್ಟ್ ಕಾರ್ಡ್ ಬಳಸಿ ಮೆಟ್ರೋದಲ್ಲೂ ಕೂಡ ಪ್ರಯಾಣ ಮಾಡಬಹುದು

⁠ಸ್ಮಾರ್ಟ್ ಕಾರ್ಡ್ ನಲ್ಲಿ ಫಲಾನುಭವಿಯ ಹೆಸರು, ಪೋಟೋ,ಆಧಾರ್ ನಂಬರ್, ವಿಳಾಸದ ವಿವರಣೆ

ಸ್ಮಾರ್ಟ್ ಕಾರ್ಡ್ ಎಲ್ಲಿ ಸಿಗಲಿದೆ?

ಬೆಂಗಳೂರು ಒನ್

⁠ಕರ್ನಾಟಕ ಓನ್

ಬಾಪುಜಿ ಸೇವಾ ಕೇಂದ್ರ

⁠ಸೈಬರ್ ಸೆಂಟರ್

ಆನ್ ಲೈನ್‌ ಅರ್ಜಿ ಸಲ್ಲಿಕೆ ಮಾಡಿ ಪಡೆದುಕೊಳ್ಳಬಹುದು.