ಪಂಚಮಸಾಲಿ ಮೀಸಲಿಗೆ ಸರ್ಕಾರದ ನಿರ್ಲಕ್ಷ್ಯ: ಜಯಮೃತ್ಯುಂಜಯ ಶ್ರೀ ಕಿಡಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ದೊರಕಿಸಿಕೊಡುವ ಬಗ್ಗೆ ಸರ್ಕಾರ ಪದೇ ಪದೇ ನಿರ್ಲಕ್ಷ್ಯ ತೋರುತ್ತಿದ್ದು, ಶೀಘ್ರದಲ್ಲಿಯೇ ದಾವಣಗೆರೆಯಲ್ಲಿ ಸಮಾಜದ ಮುಖಂಡರ ರಾಜ್ಯ ಮಟ್ಟದ ಸಭೆ ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಕೊಟ್ಟೂರು (ಜ.29) : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ದೊರಕಿಸಿಕೊಡುವ ಬಗ್ಗೆ ಸರ್ಕಾರ ಪದೇ ಪದೇ ನಿರ್ಲಕ್ಷ್ಯ ತೋರುತ್ತಿದ್ದು, ಶೀಘ್ರದಲ್ಲಿಯೇ ದಾವಣಗೆರೆಯಲ್ಲಿ ಸಮಾಜದ ಮುಖಂಡರ ರಾಜ್ಯ ಮಟ್ಟದ ಸಭೆ ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಸೌಲಭ್ಯಕ್ಕಾಗಿ ಕೂಡಲ ಸಂಗಮ ಪೀಠ ನಿರಂತರವಾಗಿ ಹೋರಾಟ ನಡೆಸುತ್ತಾ ಸಾಗಿದೆ. ಈ ಸೌಲಭ್ಯ ಪಡೆಯದ ಹೊರತು ವಿರಮಿಸುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಸೌಲಭ್ಯ ಕೊಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಇದೀಗ ಜನಾಂಗಕ್ಕೆ ಒಳಿತಾಗುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆ ಈಡೇರಿಸಿಲ್ಲ: ಬಸವಜಯ ಮೃತ್ಯುಂಜಯ ಶ್ರೀ
ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕೆಂಬ ಇಡೀ ವೀರಶೈವ ಸಮಾಜದ ಬೇಡಿಕೆಗೆ ನಮ್ಮದು ಪೂರಕ ಬೆಂಬಲವಿದೆ. ಸರ್ವೆ ಕಾರ್ಯ ಕೈಗೊಂಡಾಗ ಸಮಾಜದವರು ಒಳಪಂಗಡಗಳ ನಮೂನೆಯಲ್ಲಿ ಪಂಚಮಸಾಲಿ ವೀರಶೈವ ಎಂದು ನಮೂದಿಸಬೇಕು. ಇದರಿಂದ ವೀರಶೈವ ಜನಾಂಗದ ಬೇಡಿಕೆ ಸಮಗ್ರ ಸಮಾಜದ ಬೇಡಿಕೆಗೆ ಖಂಡಿತ ಪೆಟ್ಟಾಗುವುದಿಲ್ಲ ಎಂದರು.
ಮುಖಂಡರಾದ ಎಸ್. ತಿಂದಪ್ಪ, ಅಂಗಡಿ ಪಂಪಾಪತಿ, ಪಿ. ಭರಮನಗೌಡ, ರಾಂಪುರ ವಿವೇಕ, ಹರಾಳು ಬಸವರಾಜ, ವಿರೂಪಾಕ್ಷಪ್ಪ, ವಿ.ಟಿ. ಮುಕೇಶ್, ಜಂಬೂರು ಚಂದ್ರು ಮತ್ತಿತರರು ಇದ್ದರು.
ಬಿಜೆಪಿಯಲ್ಲಿ ಯತ್ನಾಳ ಹತ್ತಿಕ್ಕುವ ಷಡ್ಯಂತ್ರ: ಯಡಿಯೂರಪ್ಪ ಹರಿಹಾಯ್ದ ಕೂಡಲ ಶ್ರೀ