Asianet Suvarna News Asianet Suvarna News

ಬಿಟ್ಟಿ ಭಾಗ್ಯಗಳಿಗೆ ಸರಕಾರದ ಬಳಿ ಹಣವಿದೆ, ನರೇಗಾ ಕಾರ್ಮಿಕರ ವೇತನ ನೀಡಲು ನಯಾಪೈಸೆ ಇಲ್ಲ!

ಬಿಟ್ಟಿ ಭಾಗ್ಯಗಳಿಗೆ ಸರಕಾರದ ಬಳಿ ಹಣವಿದೆ, ನರೇಗಾ ಕಾರ್ಮಿಕರ ವೇತನ ನೀಡಲು ನಯಾಪೈಸೆ ಇಲ್ಲ. ಕೋಟಿ ಕೋಟಿ  ವೇತನ ಬಾಕಿ. ಕೇಂದ್ರ, ರಾಜ್ಯ ಸರಕಾರಕ್ಕೆ‌ ಹಿಡಿಶಾಪ ಹಾಕುತ್ತಿರುವ ಕೂಲಿ ಕಾರ್ಮಿಕರು 

government  pending wages to MGNREGA  workers in karnataka gow
Author
First Published Feb 22, 2024, 4:59 PM IST

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಫೆ.22): ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ ಬರ ಇರೋ ಕಾರಣಕ್ಕೆ ಗ್ರಾಮೀಣ ಭಾಗದ ಜನರು ಸದ್ಯ ತಮ್ಮ ಗ್ರಾಮಗಳನ್ನು ತೊರೆದು ಹೊಟ್ಟೆ ಪಾಡಿಗಾಗಿ ಪಟ್ಟಣಗಳತ್ತ ಗುಳೆ ಹೊರಟಿದ್ದಾರೆ .ಇನ್ನು ಅದರಲ್ಲಿ ಪ್ರಮುಖವಾಗಿ ಜನರು ಕೂಲಿ ಕೆಲಸಗಳಿಲ್ಲದೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಅವರಿಗೆ ಸರಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಕೊಡಬೇಕು ಎಂದು ಸರಕಾರಗಳ ಆದೇಶವಿದೆ. ಆದರೆ ಸದ್ಯ ಎನ್ ಆರ್ ಜಿ ಯಲ್ಲಿ ಕೂಲಿ ಮಾಡಿದ ಕೂಲಿ ಕಾರ್ಮಿಕರಿಗೆ ವೇತನವನ್ನ ಕೊಡಲು ಸರಕಾರಗಳು ಕೂಲಿ ಕಾರ್ಮಿಕರನ್ನ ಸತಾಯಿಸುತ್ತಿದೆ. 

ಬರ ಈ ವರ್ಷ ರೈತಾಪಿ ಜನರನ್ನ ಮತ್ತು ಕೂಲಿ ಕಾರ್ಮಿಕರನ್ನ ಕಿತ್ತು ತಿನ್ನುತ್ತಿದೆ. ಇನ್ನು ಇಂತಹ ಪರಿಸ್ಥಿತಿಯಲ್ಲಿ ಬಡವರ ಗೋಳು ಕೇಳದಂತಾಗಿದೆ ಕೈತುಂಬ ಕೆಲಸವಿಲ್ಲದ ಜನರಿಗೆ ಕೆಲಸವನ್ನ ಕೊಡಲು ಅದರಲ್ಲೂ ನರೇಗಾ ಅಡಿಯಲ್ಲಿ 150 ದಿನಗಳ ವರೆಗೆ ಕೂಲಿ ಕೆಲಸವನ್ನ ಕೊಡಬೇಕು ಎಂದು ಸರಕಾರದ ಆದೇಶವಿದೆ. ಆದರೆ ಎನ್ ಪ್ರಯೋಜನೆ ಹೇಳಿ ಸದ್ಯ ಧಾರವಾಡದಲ್ಲಿ ನರೇಗಾ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳಿಂದ ಕೂಲಿಯ ವೇತವನ್ನ ನೀಡಿಲ್ಲ ಎಂದು ಕೂಲಿ ಕಾರ್ಮಿಕರು ಸರಕಾರಕ್ಕೆ ಹಿಡಿ ಶಾಪವನ್ನ ಹಾಕುತ್ತಿದ್ದಾರೆ. ಇನ್ನು ಎರಡು ತಿಂಗಳಲ್ಲಿ ಬರೊಬ್ಬರು 6 ಕೋಟಿ 50 ಲಕ್ಷ ಹಣವನ್ನ ಸರಕಾರ ಬೀಡುಗಡೆ ಮಾಡಬೇಕಿದೆ.

ಕಲಬುರಗಿಯಲ್ಲಿ ಅಪ್ರಾಪ್ತರ ಲವ್, ಪ್ರೀತಿ ನಿರಾಕರಿಸಿದ್ದಕ್ಕೆ 10ನೇ ತರಗತಿ ಬಾಲಕಿ ಕತ್ತು ಕೊಯ್ದ 9ನೇ ಕ್ಲಾಸ್‌ ಹುಡುಗ!

ಇನ್ನೇನೂ ಬರಗಾಲದಲ್ಲಿ ದಿನಗೂಲಿ ಕೆಲಸವಾದರೂ ಸಿಕ್ಕಿತ್ತೆಂದು ಕಾರ್ಮಿಕರು ಹುಮ್ಮಸ್ಸಿನಿಂದ ಕೆಲಸವನ್ನ ಮಾಡಿದ್ದಾರೆ. ಆದರೆ ಸದ್ಯ ಎಲ್ಲ ಕೂಲಿ ಕಾರ್ಮಿಕರಿಗೆ ವೇತನವನ್ನ ನೀಡದೆ ಇರೋದಕ್ಕೆ ಕಾರ್ಮಿಕರ ಮೇಲೆ ಬರೆ ಎಳೆದಂತಾಗಿದೆ. ಒಂದು ಕಡೆ ಕೇಂದ್ರ ಸರಕಾರವು ರಾಜ್ಯಕ್ಕೆ ಅನುದಾನವನ್ನ ಕೊಟ್ಟಿಲ್ಲ ಎಂದು ರಾಜ್ಯ ಸರಕಾರ ಕೇಂದ್ರ ಸರಕಾರದ ವಿರುದ್ದ ಸಮರ ಸಾರಿದೆ. ಆದರೆ ಇಲ್ಲಿ ರಾಜ್ಯದ ಕೂಲಿ ಕಾರ್ಮಿಕರಿಗೆ ಸದ್ಯ ಕೂಲಿಯ ವೇತನವು ಸಿಗುತ್ತಿಲ್ಲ. 

ಸರಕಾರದ ಗೈಡ್ ಲೈನ್ ಪ್ರಕಾರ ನರೆಗಾ ಅಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ 15 ದಿನದೊಳಗೆ ವೇತನವನ್ನ ಕೊಡಬೇಕು ಎಂದು ನಿಯಮ ಇದ್ದರೂ ಅದು ಧಾರವಾಡ ಜಿಲ್ಲೆಯಲ್ಲಿ ಪಾಲನೆ ಆಗುತ್ತಿಲ್ಲ ಎಂದು ಕಾರ್ಮಿಕರು ಸದ್ಯ ಸರಕಾರದ ವಿರುದ್ದ ಕಿಡಿ ಕಾರುತ್ತಿದ್ದಾರೆ. ಸದ್ಯ ಒಂದು ಕೂಲಿ ಕಾರ್ಮಿಕರಿಗೆ ಪ್ರತಿ ದಿನ 316 ರೂ ನೀಡಬೇಕು ಎಂದು ಸರಕಾರ ನಿಗದಿ ಪಡಿಸಿದ ಮೊತ್ತ ಕಾರ್ಮಿಕರ ಕೈ ಸೇರುತ್ತಿಲ್ಲ‌ ಇದರಿಂದ ಕಾರ್ಮಿಕರು ನರೇಗಾ ಅಡಿಯಲ್ಲಿ ಕೆಲಸವನ್ನು ಮಾಡೋದನ್ನ ಬಿಟ್ಟು ಸದ್ಯ  ಶಹರಗಳದತ್ತ ಕಟ್ಡಡಗಳ ನಿರ್ಮಾಣದ ಕೆಲಸಗಳಿಗೆ ಹೋಗುತ್ತಿದ್ದಾರೆ.

ಕುರುಡ ಮತ್ತು ಕಿವುಡ ಈಶ್ವರ್ ಖಂಡ್ರೆ ಅವರೇ....: ಭಗವಂತ

ಸದ್ಯ ನರೇಗಾ ಅಡಿಯಲ್ಲಿ ಬದು ನಿರ್ಮಾಣ, ಕೆರೆ ಹೂಳೆತ್ತುವುದು, ಗಿಡ ನೆಡುವುದು, ಸೇರಿದಂತೆ ನಾನಾ ಕಾಮಗಾರಿಗಳನ್ನ ಕೈಗೆತ್ತುಕ್ಕೊಂಡಿದೆ ಜನರು ಆರಂಭದಲ್ಲಿ ಓಡಾಡಿ ಕೆಲಸ ಮಾಡಿದ್ದರು ಆದರೆ ಅವರಿಗೆ ಕಳೆದ ಎರಡು ತಿಂಗಳಿಂದ ವೇತನವನ್ನ ನೀಡಿಲ್ಲ ಎಂದು ಜನರು ಸರಕಾರಕ್ಕೆ ಕೂಲಿ ವೇತವನ್ನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸದ್ಯ ಧಾರವಾಡ ಜಿಲ್ಲೆಯಲ್ಲಿ ತಾಲೂಕಾವಾರು ಬರಬೇಕಾದ ವೇತನವನ್ನ ನೋಡೋದಾದ್ರೆ, ಧಾರವಾಡ ತಾಲೂಕಿನಲ್ಲಿ 389 ಕಾಮಗಾರಿ ಗಳಿಗೆ 1,63,68,596 ಹುಬ್ಬಳ್ಳಿ ತಾಲೂಕಿನಲ್ಲಿ 206 ಕಾಮಗಾರಿಗಳಿಗೆ 67,33,014.ಕಲಘಟಗಿ ತಾಲೂಕಿನಲ್ಲಿ 357 ಕಾಮಗಾರಿಗಳಿಗೆ 2,19,79,017 ಬರಬೇಕಿದ್ರೆ,ಕುಂದಗೋಳ ತಾಲೂಕಿನಲ್ಲಿ 2881 ಕಾಮಗಾರಿಗಳಿಗೆ 23,88,564, ಇನ್ನು ನವಲಗುಂದ ತಾಲೂಕಿನಲ್ಲಿ 163 ಕಾಮಗಾರಿಗಳಿಗೆ ಬರೋಬ್ಬರಿ 76,38,424 ರಷ್ಟು ಅದ್ರೆ ಬರೊಬ್ಬರಿ 6 ಕೋಟಿ 51 ಲಕ್ಷ ಹಣ ಬಿಡುಗಡೆಯಾಗಬೇಕಿದೆ. 

ಒಟ್ಡಿನಲ್ಲಿ ಈ ಕುರಿತು ಜಿಲ್ಲಾ ಪಂಚಾಯತ ಸಿಇಓ ಅವರನ್ನ ಕೇಳಿದರೆ ಕೇಂದ್ರದಿಂದ ಹಣ ಬಿಡುಗಡೆ ಯಾಗಿದೆ ಆದರೆ ರಾಜ್ಯ ಸರಕಾರದಲ್ಲಿ ಸಮಸ್ಯ ಆಗಿದೆ ಎಂದು ಸಬೂಬ್ ಕೊಡ್ತಾ ಇದಾರೆ ಇನ್ನು ಸದ್ಯ ಕಳೆದ ಎರಡು ತಿಂಗಳಿಂದ ಬರಬೇಕಿದ್ದ ಕೂಲಿ ಹಣ ಕಾರ್ಮಿಕರ ಕೈ ಸೇರುತ್ತಿಲ್ಲ.ಕೇವಲೆ ಬಿಟ್ಟಿ ಭಾಗ್ಯಗಳಿಗೆ ರಾಜ್ಯ ಸರಕಾರ ಕೋಟಿ ಕೋಟಿ ಹಣವನ್ನ ನೀಡುತ್ತಿದೆ..ಒಟ್ಡಿನಲ್ಲಿ ಇದರಲ್ಲಿ ರಾಜ್ಯ ಸರಕಾರದ ನಿರ್ಲಕ್ಯ್ಯನೋ..? ಕೇಂದ್ರ ಸರಕಾರದ ನಿರ್ಲಕ್ಷ್ಯನೋ? ಗೊತ್ತಿಲ್ಲ‌ ಎರಡು ಸರಕಾರಗಳ ಮದ್ಯ ನರೇಗಾ ಕಾರ್ಮಿಕರು ಸದ್ಯ ವೇತನಕ್ಕಾಗಿ ಪರದಾಡುತ್ತಿದ್ದಾರೆ..ಕೂಡಲೆ ಈ ವರದಿಯನ್ನಾದರೂ ನೋಡಿ ಸರಕಾರಗಳು ಕೂಲಿ ಕಾರ್ಮಿಕರ ಎರಡು ತಿಂಗಳ ವೇತನವನ್ನ‌ ಬಿಡುಗಡೆ ಮಾಡಬೇಕಿದೆ.

Follow Us:
Download App:
  • android
  • ios