ಕೈಗಾರಿಕೆ ಪ್ರದೇಶ ನಿರ್ವಹಣೆಗೆ ಆಡಳಿತ ಮಂಡಳಿ: ಸಚಿವ ಎಂ.ಬಿ. ಪಾಟೀಲ್
ಕೈಗಾರಿಕಾ ಪ್ರದೇಶಗಳ ನಿರ್ವಹಣೆಗಾಗಿ ಹೊಸದಾಗಿ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು. ಆಯಾ ಆಡಳಿತ ಮಂಡಳಿಗೆ ಕೈಗಾರಿಕಾ ಪ್ರದೇಶವನ್ನು ಹಸ್ತಾಂತರಿಸಲಾಗುವುದು. ಹಾಗೆಯೇ ಕೈಗಾರಿಕೆಗಳಿಂದ ಬರುವ ತೆರಿಗೆಯಲ್ಲಿ ಶೇ.30ನ್ನು ಆಡಳಿತ ಮಂಡಳಿಗಳಿಗೆ ನೀಡಲಾಗುತ್ತದೆ: ಸಚಿವ ಎಂ.ಬಿ. ಪಾಟೀಲ್
ವಿಧಾನಸಭೆ(ಜು.15): ಕೈಗಾರಿಕಾ ಪ್ರದೇಶಗಳ ನಿರ್ವಹಣೆಗೆ ಹೊಸದಾಗಿ ಆಡಳಿತ ಮಂಡಳಿ ರಚಿಸಿ, ಕೈಗಾರಿಕಾ ಪ್ರದೇಶದ ಎಲ್ಲ ಹೊಣೆಯನ್ನು ಆ ಮಂಡಳಿಗೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಪ್ರಶ್ನೋತ್ತರ ಕಲಾಪದ ಬಿಜೆಪಿಯ ಧೀರಜ್ ಮುನಿರಾಜು ಅವರು ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 132 ತಾಲೂಕುಗಳು ಅತಿ ಹಿಂದುಳಿದಿವೆ, 78 ತಾಲೂಕುಗಳು ಹಿಂದುಳಿದಿದ್ದು, 9 ತಾಲೂಕು ಮಾತ್ರ ಅಭಿವೃದ್ಧಿ ಹೊಂದಿವೆ. ಹೀಗಾಗಿ ತಾಲೂಕುಗಳಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸುವ ಸಲುವಾಗಿ ಎಲ್ಲ ಕೈಗಾರಿಕಾ ಪ್ರದೇಶಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಕರ್ಯವನ್ನಾದರೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜು.20ರ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ಸಜ್ಜು ಆಗಸ್ಟ್ 11ರಿಂದ ವಿಮಾನ ಹಾರಾಟ: ಸಚಿವ ಎಂ.ಬಿ.ಪಾಟೀಲ
ಕೈಗಾರಿಕಾ ಪ್ರದೇಶಗಳ ನಿರ್ವಹಣೆಗಾಗಿ ಹೊಸದಾಗಿ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು. ಆಯಾ ಆಡಳಿತ ಮಂಡಳಿಗೆ ಕೈಗಾರಿಕಾ ಪ್ರದೇಶವನ್ನು ಹಸ್ತಾಂತರಿಸಲಾಗುವುದು. ಹಾಗೆಯೇ ಕೈಗಾರಿಕೆಗಳಿಂದ ಬರುವ ತೆರಿಗೆಯಲ್ಲಿ ಶೇ.30ನ್ನು ಆಡಳಿತ ಮಂಡಳಿಗಳಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.
ದೊಡ್ಡಬಳ್ಳಾಪುರದಲ್ಲಿ ಫಾಕ್ಸ್‌ಕಾನ್ ಸ್ಥಾಪನೆ:
ಆ್ಯಪಲ್ ಫೋನ್ ತಯಾರಿಕೆಗೆ ಬಿಡಿಭಾಗ ನೀಡುವ ಫಾಕ್ಸ್‌ಕಾನ್ ಸಂಸ್ಥೆ ರಾಜ್ಯದಲ್ಲಿ ತನ್ನ ಕೈಗಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದೆ. ಅದಕ್ಕಾಗಿ ದೊಡ್ಡಬಳ್ಳಾಪುರದಲ್ಲಿ 300 ಎಕರೆ ಭೂಮಿಯನ್ನು ನೀಡಲಾಗುತ್ತಿದೆ. 8,400 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದ್ದು, 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎಂ.ಬಿ. ಪಾಟೀಲ್ ಹೇಳಿದರು.