ಓದಿನಲ್ಲಿ ಚುರುಕಿದ್ದ ಮಗ ಸನ್ಯಾಸಿಯಾಗುತ್ತಾನೆಂದರೆ ಯಾವ ಅಪ್ಪ ತಾನೇ ಸುಮ್ಮನಿದ್ದಾನು? ಸಹಿಸಿಕೊಂಡಾನು ಹೇಳಿ! ಶಿವಕುಮಾರ ಸ್ವಾಮೀಜಿಗಳ ವಿಚಾರದಲ್ಲೂ ಇದೇ ಆಯ್ತು. ಮಠದ ಉತ್ತರಾಧಿಕಾರಿಯಾಗಿದ್ದ ಶ್ರೀ ಮರುಳಾರಾಧ್ಯರ ನಿಧನದ ಬಳಿಕ ಶ್ರೀಮಠದ ಆಗಿನ ಹಿರಿಯ ಶ್ರೀಗಳಾದ ಉದ್ದಾನ ಶಿವಯೋಗಿಗಳ ದೃಷ್ಟಿ ಶಿವಣ್ಣ ಅವರ ಮೇಲೆ ಬೀಳುತ್ತದೆ. ಮುರುಳಾರಾಧ್ಯರ ಆತ್ಮೀಯರೂ ಆಗಿದ್ದ, ಶಿಸ್ತಿಗೆ ಹೆಸರುವಾಸಿಯಾಗಿದ್ದ ಶಿವಣ್ಣ ಅವರನ್ನು ಶಿವಯೋಗಿಗಳು ಕರೆದು ಮಠದ ಉತ್ತರಾಧಿಕಾರಿಯಾಗುತ್ತೀಯಾ ಎಂದು ಕೇಳುತ್ತಾರೆ. ಶಿವಣ್ಣರವರಿಗೂ ಸನ್ಯಾಸದ ಹಾದಿ ಇಷ್ಟವಿದ್ದ ಕಾರಣ ತಕ್ಷಣ ಒಪ್ಪಿಗೆ ನೀಡುತ್ತಾರೆ.

ಆಗ ಅವರ ಕಾಲೇಜು ಗುರುಗಳಾದ ಎ.ಆರ್. ಕೃಷ್ಣಶಾಸ್ತ್ರಿಗಳು ಹರಸಿ ಕಳಿಸುತ್ತಾರೆ. ಚೆನ್ನಾಗಿ ಓದಿದ ಮಗ ಸನ್ಯಾಸಿ ಆಗುವುದು ತಂದೆ ಹೊನ್ನಪ್ಪರವರಿಗೆ ಸುತರಾಂ ಇಷ್ಟವಿರಲಿಲ್ಲ. ಬೆಂಗಳೂರಿನ ತೋಟದಪ್ಪ ಹಾಸ್ಟೆಲ್‌ಗೆ ಬಂದು ಮಗನನ್ನು ಸನ್ಯಾಸಿಯಾಗಬೇಡ ಎಂದು ಸಾಕಷ್ಟು ಬಾರಿ ಒಲಿಸಲು ಪ್ರಯತ್ನಿಸುತ್ತಾರೆ. ಆದರೆ, ಇದ್ಯಾವುದಕ್ಕೂ ಶಿವಣ್ಣ ಕರಗುವುದಿಲ್ಲ. ಸನ್ಯಾಸದ ಹಾದಿಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾಗಿ ತಂದೆಗೆ ಮನವರಿಕೆ ಮಾಡಿಕೊಡುತ್ತಾರೆ. ವಿಶೇಷವೆಂದರೆ ಸನ್ಯಾಸತ್ವ ಸ್ವೀಕರಿಸಿದ ಬಳಿಕವೂ ಶಿವಣ್ಣ ಶಿಕ್ಷಣ ಮುಂದು ವರಿಸುತ್ತಾರೆ. ಬೆಂಗಳೂರಿಗೆ ವಾಪಸಾಗಿ ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯ ಬದ್ಧವಾಗಿ ಪಾಲಿಸುತ್ತ ಹಾಗೂ ಶಿಸ್ತುಬದ್ಧ ವಿದ್ಯಾರ್ಥಿಯಾಗಿ ವ್ಯಾಸಂಗ ಮುಗಿಸುತ್ತಾರೆ.

ಬೇಗ ಉತ್ತರಾಧಿಕಾರ ನೀಡಿ ಎಂದು ಪತ್ರ:

ಸನ್ಯಾಸತ್ವ ಸ್ವೀಕರಿಸಿದ ಮೇಲೂ ಪೂರ್ವಾಶ್ರಮದ ತಂದೆ ಹೊನ್ನೇಗೌಡರು ಬಂದು ವಿರಕ್ತಾಶ್ರಮವವ ನ್ನು ತ್ಯಜಿಸಿ ತಮ್ಮೊಂದಿಗೆ ಹಿಂತಿರುಗಬೇಕೆಂದು ಆಗಾಗ ಶಿವಕುಮಾರ ಶ್ರೀಗಳನ್ನು ಒತ್ತಾಯಿಸುತ್ತಿ ದ್ದರು. ಹೀಗಾಗಿ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಗುರುಗಳಾದ ಉದ್ದಾನ ಶಿವಯೋಗಿಗಳಿಗೆ ಕಾಗದ ಬರೆದು ಬೇಗನೆ ತಮಗೆ ವಿಧ್ಯುಕ್ತವಾಗಿ ಉತ್ತ ರಾಧಿಕಾರ ನೀಡಿಬಿಟ್ಟರೆ ಪೂರ್ವಾಶ್ರಮದ ಸಂಬಂಧಿಗಳ ಕಾಟ ತಪ್ಪುತ್ತದೆ. ಪದೇ ಪದೇ ಅವರು ನನಗೆ ತೊಂದರೆ ಕೊಡುತ್ತಿದ್ದಾರೆ ಎಂಬುದನ್ನು ವಿನಯ ಪೂರ್ವಕವಾಗಿ ತೋಡಿಕೊಂಡರು. ಶಿವಕುಮಾರ ಸ್ವಾಮಿಗಳ ಮಾನಸಿಕ ದುಗುಡ, ಅದರ ಹಿಂದಿನ ಸದಾಶಯ ಅರ್ಥ ಮಾಡಿಕೊಂಡ ಉದ್ದಾನ ಶಿವಯೋಗಿಗಳು 03/03/1930ರಂದು ವಿಧ್ಯುಕ್ತವಾಗಿ ಶಿವಕುಮಾರ ಸ್ವಾಮಿಗಳಿಗೆ ನಿರಂಜನ ಪಟ್ಟಾಧಿಕಾರ ನೀಡಿದರು.

ಇವರಿಂದ ನಾಡು ಬೆಳಗುವುದು ಎಂದು ಬಾಲ್ಯದಲ್ಲೇ ಗೋಸಾಯಿ ಭವಿಷ್ಯ!

ಒಮ್ಮೆ ಒಂದು ಪ್ರಸಂಗ ನಡೆ​ದಿತ್ತು. ಶಿವಣ್ಣ ಇನ್ನೂ ಚಿಕ್ಕ​ವನು. ನಾಲ್ಕೈದು ವರ್ಷ​ದ​ವ​ನಿ​ರ​ಬೇಕು. ವೀರಾ​ಪು​ರಕ್ಕೆ ಹಸ್ತ ಸಾಮು​ದ್ರಿ​ಕೆಯ ಗೋಸಾ​ಯಿ ​ಬಂದ. ಇಂಥ​ವ​ರು ಯಾರೇ​ಬಂದರೂ ಮೊದ​ಲು​ ಪ​ಟೇ​ಲರ ಮನೆಯ ಕಟ್ಟೆಯ ಮೇಲೆ ಕುಳಿತುಕೊಳ್ಳು​ತ್ತಿ​ದ್ದರು. ಆಗ ಅಲ್ಲೇ ಇದ್ದ ಶಿವ​ಣ್ಣನ ಮೇಲೆ ಗೋಸಾ​ಯಿಯ ದೃಷ್ಟಿಬಿತ್ತು. ಕೂಡಲೇ ಗೋಸಾಯಿ ಹುಡು​ಗನ ಕೈ ನೋಡಿ​ ಕೈ​ಯನ್ನು ಹಣೆ​ಗೊ​ತ್ತಿ​ಕೊಂಡು ಪಟೇ​ಲ​ರಿಗೆ ‘ಸ್ವಾಮಿ ಇಷ್ಟೊಂದು ಶುಭ ಲಕ್ಷ​ಣದ ಕೈಯನ್ನೇ ನಾನು ಇದು​ವ​ರೆಗೂ ನೋಡಿಲ್ಲ. ಇವ​ನ್ನೊಬ್ಬ ಮಹಾ​ಭಾ​ಗ್ಯ​ವಂತ. ಅನ್ನ​ದಾನಿ. ಇವ​ನಿಂದ ನಾಡೆ​ಲ್ಲ​ ಬೆಳ​ಗುವುದು. ಇವ​ನೇ​ನಿ​ದ್ದರೂ ಕಾರ​ಣಿಕ ಪುರುಷ. ನಿಮಗೆ ದಕ್ಕುವ ಮಗ​ನಲ್ಲ’ ಎಂದಿದ್ದನಂತೆ. ಈ ಮಾತು​ಗ​ಳನ್ನು ಶಿವಣ್ಣನ ತಂದೆ ಅಷ್ಟಾ​ಗಿ ಗಂಭೀ​ರ​ವಾಗಿ ಪರಿ​ಗ​ಣಿ​ಸ​ಲಿಲ್ಲ. ನಂತರ ಗೋಸಾಯಿ ಪಟೇ​ಲರು ನೀಡುವ ಭಕ್ಷೀ​ಸನ್ನು ಪಡೆದು ಅವರ ಮನೆ​ಯಲ್ಲಿ ಊಟ ಮಾಡಿ ಹೊರ​ಟು​ಹೋ​ದರು. ದಿನ​ಕ​ಳೆ​ದಂತೆ ಗೋಸಾಯಿ ಹೇಳಿದ ಭವಿ​ಷ್ಯ​ವ​ನ್ನು ಪಟೇ​ಲರು ಮರೆ​ತರು. ಆದರೆ, ಕೊನೆಗೆ ಅದೇ ನಿಜವಾಯಿತು.