ಬೆಂಗಳೂರು (ನ.25):  ನೈಋುತ್ಯ ರೈಲ್ವೆಯು ಇದೇ ಪ್ರಥಮ ಬಾರಿಗೆ ಬೆಂಗಳೂರು ರೈಲ್ವೆ ವಿಭಾಗದ ಹೊಸೂರು ರೈಲು ನಿಲ್ದಾಣದಿಂದ ಮಂಗಳವಾರ ಬಾಂಗ್ಲಾದೇಶದ ಬೆನಪೊಲೆ ರೈಲು ನಿಲ್ದಾಣಕ್ಕೆ ವಾಣಿಜ್ಯ ಸರಕು ಸಾಗಣೆ ರೈಲು ಕಾರ್ಯಾಚರಣೆ ಮಾಡಿತು.

ಹೊಸೂರು ರೈಲ್ವೆ ನಿಲ್ದಾಣದಲ್ಲಿ 25 ವ್ಯಾಗನ್‌ನಲ್ಲಿ ಅಶೋಕ ಲೇಲ್ಯಾಂಡ್‌ ಕಂಪನಿಗೆ ಸೇರಿದ 100 ಲಘು ವಾಣಿಜ್ಯ ವಾಹನಗಳನ್ನು ಹೊತ್ತ ಸರಕು ಸಾಗಣೆ ರೈಲಿಗೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ ಹಸಿರು ನಿಶಾನೆ ತೋರಿದರು. ಬಾಂಗ್ಲಾದೇಶದ ಬೆನಪೊಲೆ ರೈಲು ನಿಲ್ದಾಣ ಹೊಸೂರು ರೈಲು ನಿಲ್ದಾಣದಿಂದ 2,121 ಕಿ.ಮೀ. ದೂರದಲ್ಲಿದೆ.

ಕಮಾಂಡೋ ತರಬೇತಿ ಪಡೆದು, ಕತ್ತಲಲ್ಲಿ 30 ಕಿ.ಮೀ ನಡೆದು ಬಂದಿದ್ದ ಉಗ್ರರು!

ನೈಋುತ್ಯ ರೈಲ್ವೆ ಈ ಹಿಂದೆ ಪೆನಗೊಂಡ ರೈಲು ನಿಲ್ದಾಣದಿಂದ ನೇಪಾಳದ ನೌಟ್ನವಾಗೆ ಎರಡು ಸರಕು ಸಾಗಣೆ ರೈಲು ಕಾರ್ಯಾಚರಣೆ ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ ದೇಶದ ಹಾಗೂ ಹೊರ ದೇಶದ ವಿವಿಧ ಸ್ಥಳಗಳಿಗೆ 128 ಸರಕು ಸಾಗಣೆ ರೈಲುಗಳನ್ನು ಕಾರ್ಯಾಚರಣೆ ಮಾಡಿದೆ.

ಆಟೋಮೊಬೈಲ್‌ ಸರಕುಗಳ ಸಾಗಣೆಗೆ ರಸ್ತೆ ಸಾರಿಗೆಗೆ ಹೋಲಿಕೆ ಮಾಡಿದರೆ ರೈಲು ಸಾರಿಗೆ ಸುರಕ್ಷಿತ ಹಾಗೂ ಸುಲಭವಾಗಿದೆ. ಅಲ್ಲದೆ, ನಿಗದಿತ ಸಮಯಕ್ಕೆ ಸರಕು ತಲುಪುವ ಬಗ್ಗೆ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ ಹೇಳಿದರು.

ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಎ.ಎನ್‌.ಕೃಷ್ಣಾ ರೆಡ್ಡಿ, ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಅಖಿಲ್‌ ಎಂ.ಶಾಸ್ತ್ರೀ, ಅಶೋಕ ಲೈಲ್ಯಾಂಡ್‌ ಉಪಾಧ್ಯಕ್ಷ ರಾಜೇಶ್‌ ಮಿತ್ತಲ್‌ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

- ನೈಋುತ್ಯ ರೈಲ್ವೆ ವ್ಯಪಸ್ಥಾಪಕರಿಂದ ರೈಲಿಗೆ ಹಸಿರು ನಿಶಾನೆ

- 100 ವಾಹನಗಳನ್ನು ಹೊತ್ತು ಸಂಚಾರ ಆರಂಭ

- 2121 ಕಿ.ಮೀ. ಸಂಚಾರ