Asianet Suvarna News Asianet Suvarna News

ರೆಬೆಲ್‌ಸ್ಟಾರ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ರೇಸ್‌ ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರು

ಬೆಂಗಳೂರಿನ  ರೇಸ್‌ ಕೋರ್ಸ್‌ ರಸ್ತೆಗೆ ಖ್ಯಾತ ಚಿತ್ರನಟ ಅಂಬರೀಶ್‌ ಅವರ ಹೆಸರನ್ನು ಮಾ.27ರಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Good news for Rebel star fans Race Course Road named after Ambarish sat
Author
First Published Mar 23, 2023, 8:46 PM IST

ಬೆಂಗಳೂರು (ಮಾ.23): ರಾಜ್ಯ ರಾಜಧಾನಿಯ ಅತ್ಯಂತ ಸಂಚಾರ ದಟ್ಟಣೆ ರಸ್ತೆಗಳಲ್ಲಿ ಒಂದಾಗಿರುವ ರೇಸ್‌ ಕೋರ್ಸ್‌ ರಸ್ತೆಗೆ ಖ್ಯಾತ ಚಿತ್ರನಟ ಅಂಬರೀಶ್‌ ಅವರ ಹೆಸರನ್ನು ಮಾ.27ರಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

14 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾಂಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಅಂಬರೀಶ್ ಹೆಸರನ್ನು ಇಡುತ್ತೇವೆ. ಮಾ.27 ರಂದು ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರನ್ನ ಇಡಲಾಗುತ್ತದೆ. ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಅಂಬರೀಶ್ ಮತ್ತು ತಮ್ಮ ನಡುವೆಯ ಸ್ನೆಹ ಸಂಬಂಧದ ಬಗ್ಗೆ ನೆನಪು ಮಾಡಿಕೊಂಡರು. ನಂತರ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಅವರಿಗೆ ಈ ವಿಚಾರವನ್ನು ತಿಳಿಸಿ ಅಧಿಕೃತ ಆಹ್ವಾನ ನೀಡಿದರು.

ತೆಲುಗಿನ ಆರ್‌ಆರ್‌ಆರ್‌ ಸಿನಿಮಾ ಹೊಗಳಿದ ಕನ್ನಡದ ಮುಖ್ಯಮಂತ್ರಿ : ಕೆಜಿಎಫ್, ಕಾಂತಾರಕ್ಕೆ ಅಭಿನಂದನೆ

ಪುನೀತ್‌, ರಾಜ್‌ ಕುಮಾರ್‌ ಸ್ಮಾರಕ: ಈಗಾಗಲೇ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡಿದ್ದೇವೆ. ಪುನಿತ್ ಸ್ಮಾರಕ ಈ ವರ್ಷವೇ ಮಾಡ್ತೀವಿ. ಅಲ್ಲದೇ ರಾಜಕುಮಾರ್ ಮತ್ತು ಪುನಿತ್ ಇಬ್ಬರ ಸ್ಮಾರಕ ಅಭಿವೃದ್ಧಿ ಪಡಿಸಲಾಗಿತ್ತದೆ. ಕನ್ನಡ ನಾಡಿನ ಬಹುತೇಕರು ಎಲ್ಲರೂ ಸಿನಿಮಾ ನೋಡುತ್ತಾರೆ. ಸಿನಿಮಾ ರಂಗಕ್ಕೆ ಯಾವ ಸಹಾಯ ಬೇಕು ಅದನ್ನು ನಮ್ಮ‌ ಸರ್ಕಾರ ಮಾಡಿದೆ. ಶೀಘ್ರದಲ್ಲೇ ಫಿಲ್ಮ್ ಸಿಟಿ ಸಹ ಆಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ರೀರಿಯಲ್ಲಿ ಪಿಲ್ಮ್‌ ಸಿಟಿ ಆಗುತ್ತದೆ. ಆ ಫಿಲ್ಮ್ ಸಿಟಿಗೆ ಬಾಲಿವುಡ್ ಅಷ್ಟೇ ಅಲ್ಲ ಹಾಲಿವುಡ್‌ನವರು ಕೂಡ ಬಂದು ಸಿನಿಮಾ ಮಾಡಬೇಕು ಎಂದು ಹೇಳಿದರು.

ಡಿಜಿಟಲ್‌ ಕ್ಷೇತ್ರದಲ್ಲಿ ಸಿನಿಮಾ ಹೊಂದಾಣಿಕೆ: ಮನೋರಂಜನೆ ಕ್ಷೇತ್ರದ ಬಹುಪಾಲು ಆವರಿಸಿಕೊಂಡಿರುವ  ಸಿನಿಮಾಗೆ ಬಹಳ ದೊಡ್ಡ ಇತಿಹಾಸವಿದೆ. ಇಂದಿನ ಡಿಜಿಟಲೈಜೆಷನ್ ನಿಂದ ಸಿನಿಮಾ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ನಾವು ಸಿನಿಮಾ ನೋಡಿದಕ್ಕೂ ನಮ್ಮ ಮಕ್ಕಳು ಸಿನಿಮಾ ನೋಡ್ತಿರೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಿನಿಮಾ ಕ್ಷೇತ್ರ ಸಾಕಷ್ಟು ಬೇಗ ತಂತ್ರಜ್ಞಾನದಿಂದ ಬದಲಾವಣೆ ಕಂಡಿದೆ. ಕನ್ನಡ ಸಿನಿಮಾ ಅಂತರ್ರಾಷ್ಟ್ರೀಯ ಸಿನಿಮಾ ಕ್ಷೇತ್ರ ಹೆಸರು ಮಾಡಿದೆ. ತಂತ್ರಜ್ಞಾನ ಕಥೆ ಎಲ್ಲದರಲ್ಲೂ ಹೆಸರು ಮಾಡಿದೆ ಎಂದು ಹೇಳಿದರು.

Bengaluru Breaking: ಮೆಜೆಸ್ಟಿಕ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ: ಓರ್ವ ಸಾವು- ಇಬ್ಬರ ಸ್ಥಿತಿ ಗಂಭೀರ

ಮೈಸೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಂಬರೀಶ್‌ ಪುತ್ಥಳಿ:  ಕಂದಾಯ ಸಚಿವ ಆರ್. ಅಶೋಕ್‌ ಮಾತನಾಡಿ, ನಟ ಅಂಬರೀಶ್ ನಮ್ಮೊಂದಿಗಿಲ್ಲ, ಅವರ ನೆನಪಿಗಾಗಿ ಮೈಸೂರಿನಲ್ಲಿ ಬರೋಬ್ಬರಿ 10 ಕೋಟಿ ರೂ. ವೆಚ್ಚದಲ್ಲಿ ಪುತ್ಥಳಿ ನಿರ್ಮಾಣ ಮಾಡುತ್ತೇವೆ. ಇನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಪುನೀತ್ ನೆನಪಿಗಾಗಿ ರಿಂಗ್‌ರಸ್ತೆಗೆ ಪುನೀತ್ ಹೆಸರು ನಾಮಕರಣ ಮಾಡಲಾಗುತ್ತದೆ. ಮಾ.25 ರಂದು ಬ್ರ್ಯಾಂಡ್ ಬೆಂಗಳೂರು, 26 ರಂದು ಬಸವಣ್ಣ, ಕೆಂಪೇಗೌಡ ಪುತ್ಥಳಿ ಅನಾವರಣ ಮಾಡುತ್ತೇವೆ. ಬೆಂಗಳುರು ಚಲನಚಿತ್ರೋತ್ಸವ ಅಂಗವಾಗಿ ಮೂರು ದಿನಗಳ‌ ಕಾರ್ಯಕ್ರಮ ವಿಧಾನಸೌಧದಲ್ಲಿ ನಡೆಯಲಿದೆ ಎಂದರು.

Follow Us:
Download App:
  • android
  • ios