ಅಯೋಧ್ಯೆ ರೀತಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ; ಶಾಸಕ ಜನಾರ್ದನ ರೆಡ್ಡಿ ಭರವಸೆ
ಅಯೋದ್ಯೆಯಂತೆ ಅಂಜನಾದ್ರಿಯೂ ಅಭಿವೃದ್ದಿ ಪಡಿಸುತ್ತೇನೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭರವಸೆ ನೀಡಿದರು. ಕಳೆದ ಮೂರು ದಿನಗಳ ಹಿಂದೆ ಹನುಮಮಾಲಾ ಧಾರಣೆ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ, ಇಂದು ಕೊಪ್ಪಳದ ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ ಮಾಡಿ, ಆಂಜನೇಯ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಯೊಂದಿಗೆ ಮಾತಾನಾಡಿದ ಅವರು,
ಕೊಪ್ಪಳ (ಡಿ.24): ಅಯೋದ್ಯೆಯಂತೆ ಅಂಜನಾದ್ರಿಯೂ ಅಭಿವೃದ್ದಿ ಪಡಿಸುತ್ತೇನೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭರವಸೆ ನೀಡಿದರು.
ಕಳೆದ ಮೂರು ದಿನಗಳ ಹಿಂದೆ ಹನುಮಮಾಲಾ ಧಾರಣೆ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ, ಇಂದು ಕೊಪ್ಪಳದ ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ ಮಾಡಿ, ಆಂಜನೇಯ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಯೊಂದಿಗೆ ಮಾತಾನಾಡಿದ ಅವರು,
ಸೋನಿಯಾಗೆ ತಲೆಬಾಗದ್ದಕ್ಕೆ ಜೈಲಿಗೆ ಹೋಗಬೇಕಾಯ್ತು: ರೆಡ್ಡಿ
ಕಳೆದ ಬಾರಿ ಲೋಕಕಲ್ಯಾಣಕ್ಕಾಗಿ ಹನುಮಮಾಲೆ ಹಾಕಿಕೊಂಡಿದ್ದೆ. ಈ ಬಾರಿಯೂ ಹನುಮ ಮಾಲೆ ಹಾಕಿಕೊಂಡಿದ್ದೇನೆ. ಗಂಗಾವತಿ ಕ್ಷೇತ್ರವನ್ನು ಮತ್ತೆ ಅಭಿವೃದ್ದಿಗಾಗಿ ಸಂಕಲ್ಪ ಮಾಡಿದ್ದೇನೆ. ಕೇಂದ್ರ ಸರ್ಕಾರ ಅಂಜನಾದ್ರಿಗೆ ಅನುದಾನ ನೀಡುತ್ತಾರೆ ಎಂಬ ವಿಶ್ವಾಸವಿದೆ. ಜನವರಿ 22 ರಂದು ಅಯೋದ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ. ಅಂಜನಾದ್ರಿಯಲ್ಲೂ ಪೂಜೆ ನಡೆಯಲಿದೆ. ಭಕ್ತರಿಗೆ ಅನುಕೂಲವಾಗುವಂತೆ ಇದರ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಇನ್ನಾರು ತಿಂಗಳಲ್ಲಿ ಅಂಜನಾದ್ರಿಯಲ್ಲಿ ರೂಪ್ ವೇ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಜನಾದ್ರಿಯಲ್ಲಿ ಭೂಸ್ವಾದೀನಕ್ಕಾಗಿ 60 ಕೋಟಿ ಬಿಡುಗಡೆ ಆಗಿದೆ. ಭೂಸ್ವಾದೀನದ ಬಗ್ಗೆ ಜಿಲ್ಲಾಧಿಕಾರಿ ಜೊತೆಯಲ್ಲಿ ಚರ್ಚೆ ಮಾಡುವೆ. ಮುಂದಿನ ದಿನದಲ್ಲಿ ಹನುಮಮಾಲಾ ವಿಸರ್ಜನೆ ಸಂದರ್ಭದಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲು ಚಿಂತನೆ ನಡೆಸಲಾಗಿದೆ. ಗಂಗಾವತಿಯಿಂದ ಹಿಟ್ನಾಳವರೆಗೂ ರಸ್ತೆ ಬದಿ ದೀಪಗಳ ಅಳವಡಿಸಲಾಗಿದೆ. ಅದಕ್ಕಾಗಿ ಕೆಕೆಆರ್ ಡಿಬಿಯಿಂದ 40 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ ಎಂದು ತಿಳಿಸಿದರು.