ಯಮ ಸಲ್ಲೇಖನ ವ್ರತದ ಮೂಲಕ ಸಮಾಧಿ ಮರಣ ಹೊಂದಿದ ಜ್ಞಾನೇಶ್ವರ ಮುನಿ ಮಹಾರಾಜರ ಅಂತ್ಯಕ್ರಿಯೆ

ಯಮಸಲ್ಲೇಖನ ವ್ರತ ಸ್ವೀಕರಿಸಿ ಬುಧವಾರ ಸಮಾಧಿ ಮರಣ ಹೊಂದಿದ್ದ ಜೈನಮುನಿ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ಅಂತಿಮ ದಹನಕ್ರಿಯೆ ವಿಧಿವಿಧಾನಗಳು ಜೈನ ಧರ್ಮದ ಸಂಪ್ರದಾಯದಂತೆ ಗುರುವಾರ ತಾಲೂಕಿನ ದೇವಲಾಪುರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ನಡೆಯಿತು.

Funeral of Jnaneshwara Muni Maharaja who died a grave death through Yama Sallekha Vrata at belgum rav

ಬೈಲಹೊಂಗಲ (ನ.22): ಯಮಸಲ್ಲೇಖನ ವ್ರತ ಸ್ವೀಕರಿಸಿ ಬುಧವಾರ ಸಮಾಧಿ ಮರಣ ಹೊಂದಿದ್ದ ಜೈನಮುನಿ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ಅಂತಿಮ ದಹನಕ್ರಿಯೆ ವಿಧಿವಿಧಾನಗಳು ಜೈನ ಧರ್ಮದ ಸಂಪ್ರದಾಯದಂತೆ ಗುರುವಾರ ತಾಲೂಕಿನ ದೇವಲಾಪುರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ನಡೆಯಿತು.

ಆಚಾರ್ಯರು ತಮ್ಮ ಪದವಿಯನ್ನು ಪರಮ ಶಿಷ್ಯರಾದ ಶ್ರೀ 108 ವಿಮಲೇಶ್ವರ ಮುನಿ ಮಹಾರಾಜರಿಗೆ ವಹಿಸಿ, ಪದವಿಮುಕ್ತರಾಗಿ ಹಾಗೂ ನಾಂದನಿ ಮಠದ ಸ್ವಸ್ತಿ ಶ್ರೀ ಜಿನಸೇನ ಭಟ್ಟಾರಕ ಪಟಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಯಮಸಲ್ಲೇಖನ ವ್ರತಾಧಾರಣೆ ಮಾಡಿದ್ದರು.

Sallekhana: ನಿರಾಹಾರಿಗಳಾಗಿ ಸಾವು ಬರಮಾಡಿಕೊಳ್ಳುವ ಜೈನ ಸಂತರು… ಏನಿದು ಸಂಪ್ರದಾಯ?

ನ.13ರಂದು ಯಮಸಲ್ಲೇಖನ ವೃತ್ತ ಸ್ವೀಕರಿಸಿದ್ದ ಜ್ಞಾನೇಶ್ವರ ಮುನಿ ಮಹಾರಾಜರು 8 ದಿನಗಳ ನಂತರ ಬುಧವಾರ ದೇವಲಾಪುರ ಕ್ಷೇತ್ರದಲ್ಲಿ ಸಮಾಧಿ ಮರಣ ಹೊಂದಿದ್ದರು. ದೇಹದಹನ ಕ್ರಿಯಾವಿಧಾನ ಪಟ್ಟಾಚಾರ್ಯ ಶ್ರೀ 108 ವಿಮಲೇಶ್ವರ ಮುನಿ ಮಹಾರಾಜರ ಸಾನ್ನಿಧ್ಯ, 105 ಗಣನಿ ಆರ್ಯಿಕಾ ಜಿನವಾನಿ ಮಾತಾಜಿ, ಕ್ಷುಲ್ಲಿಕಾ 105 ವಿಶುದ್ಧಮತಿ ಮಾತಾಜಿ ಮತ್ತು ಕ್ಷುಲ್ಲಿಕಾ 105 ಅಮೃತ ಜ್ಯೋತಿ ಮಾತಾಜಿ, ಕ್ಷುಲ್ಲಿಕಾ 105 ಅಚಲಜ್ಯೋತಿ ಮಾತಾಜಿ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಯಿತು. 

ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತು. ದೇಹದಹನದ ವಿಧಿವಿಧಾನಗಳ ಕ್ರಿಯೆಯನ್ನು ಹರಾಜಿನ ಮೂಲಕ ಭಕ್ತರಿಗೆ ನೀಡಲಾಯಿತು. ಸಕಲ ವೈಭವದ ಮೆರವಣಿಗೆಯೊಂದಿಗೆ ಪಂಚನಮಸ್ಕಾರ ಮಂತ್ರ ಪಠಣ ಮಾಡುತ್ತ, ಕುಟೀರದಿಂದ ಅಲಂಕೃತ ಆಸನದಲ್ಲಿ ಸಾಗಿ ಅಷ್ಟಮ ನಂದೀಶ್ವರ ಕ್ಷೇತ್ರದ ಬಳಿಯ ಜಾಗದಲ್ಲಿ ತ್ರಿಕೋನಾಕಾರದಲ್ಲಿ ಚಿತೆ ರೂಪಿಸಿ, ಪದ್ಮಾಸನದಲ್ಲಿ ಕುಳ್ಳಿರಿಸಿ, ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಜಲಾಭಿಷೇಕ, ಚಂದನ ಅಭಿಷೇಕ, ಕ್ಷೀರಾಭಿಷೇಕ, ತುಪ್ಪದ ಅಭಿಷೇಕ, ಅಷ್ಟಕಳಶ ಅಭಿಷೇಕಗಳನ್ನು ಭಕ್ತರು ನೆರವೇರಿಸಿದರು. 

ಮುನಿಗಳು ಮೃತದೇಹಕ್ಕೆ ನೀರು, ಹಾಲು, ತುಪ್ಪ ಮತ್ತು ಸಕ್ಕರೆಯ ಸೇಚನದೊಂದಿಗೆ ಅಭಿಷೇಕ ಮಾಡಲಾಯಿತು. ನಂತರ ಪಾರ್ಥಿವ ಶರೀರಕ್ಕೆ ಮುನಿಗಳು ಮತ್ತು ಮಾತಾಜಿಯವರು ಪಂಚ ನಮಸ್ಕಾರ, ಮಂತ್ರ ಪಠಣದೊಂದಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಅಂತಿಮ ಸಂಸ್ಕಾರಕ್ಕೆ ಚಾಲನೆ ನೀಡಿದರು.ಪಟ್ಟಾಚಾರ್ಯ ಆಚಾರ್ಯ ವಿಮಲೇಶ್ವರ ಮುನಿ ಮಹಾರಾಜರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಚಿತೆಗೆ ಗಂಧ ಮತ್ತು ಚಂದನದ ಕೊರಡು ಬಳಸಿ ಮೇಲೆ ತುಪ್ಪ ಸುರಿಯಲಾಯಿತು. ಚಿತೆಯ ಸನಿಹದಲ್ಲಿ ಮುನಿ ಸಂಘದವರು ಮತ್ತು ಮಾತಾಜಿಯವರು ಸಾಮೂಹಿಕ ಪ್ರತಿಕ್ರಮಣ ಮಾಡುತ್ತಿದ್ದಂತೆಯೇ ಭಕ್ಷರಿಂದ ಜ್ಞಾನೇಶ್ವರ ಮಹಾರಾಜ ಕೀ ಜೈ ಎಂದು ಘೋಷಣೆಗಳು ಮೊಳಗಿದವು.

ಸಲ್ಲೇಖನ ಕಮಿಟಿಯ ಜಿನಪ್ಪ ಮಲ್ಲಾಡಿ, ಸಂತೋಷ ನಾಗನೂರ, ಉದಯ ಬೆಳಗಾವಿ, ಸಂತೋಷ ಬೆಳಗಾವಿ, ಅನಿಲ ಮೇಕಲಮರಡಿ, ಅನಂತ ಮರೆಣ್ಣವರ, ಶಾಂತಿನಾಥ ಚೌಗಳೆ, ಪದ್ಮರಾಜ ಇಂಚಲ ಸೇರಿದಂತೆ ಅನೇಕರು ಇದ್ದರು. ಜ್ಞಾನೇಶ್ವರ ಮುನಿಗಳ ಅಂತಿಮ ದರ್ಶನ :

ಯಮಸಲ್ಲೇಖನ ವ್ರತ ಸ್ವೀಕರಿಸಿ, ಸಮಾಧಿ ಮರಣ ಹೊಂದಿದ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ಅಂತಿಮ ದರ್ಶನಕ್ಕೆ ಜನಸಾಗರವೇ ಹರದಿ ಬಂದಿತ್ತು. ಬೆಳಗ್ಗೆಯಿಂದ ತಂಡೋಪ-ತಂಡವಾಗಿ ರಾಜ್ಯದ ವಿವಿಧೆಡೆಯಿಂದ ಸಕಲ ಧರ್ಮಗಳ ಭಕ್ತರು, ಜನರು, ಗ್ರಾಮಸ್ಥರು ಆಗಮಿಸಿ ಅಂತಿಮ ದರ್ಶನ ಪಡೆದು ಪುನಿತರಾದರು. ಮರಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಂಡರು. 

200 ಕೋಟಿಯ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ ಉದ್ಯಮಿ!

ಸ್ವಾಮೀಜಿಗಳು, ಗಣ್ಯರಿಂದ ಸಂತಾಪ : ಜೈನ ಮುನಿಗಳು ಕೈಗೊಳ್ಳುವ ಅತ್ಯಂತ ಕಠಿಣ ವ್ರತ ಯಮಸಲ್ಲೇಖನ. ಮೋಕ್ಷ ಅಥವಾ ಸದ್ಗತಿಗಾಗಿ ಶರೀರ ತ್ಯಾಗ ಮಾಡುವುದಕ್ಕಾಗಿ ಈ ನಿರ್ಧಾರ ಕೈಗೊಂಡಿರುವ ಜ್ಞಾನೇಶ್ವರ ಮುನಿ ಮಹಾರಾಜರ ಸಮಾಧಿ ಮರಣೋತ್ಸವಕ್ಕೆ ಮೂರುಸಾವಿರಮಠದ ಪ್ರಭುನೀಲಕಠ ಶ್ರೀಗಳು, ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶಶಾಸ್ತ್ರೀ ಆರಾದ್ರಿಮಠ, ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಶ್ರೀಗಳು, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಮಾಜಿ ಸಚಿವ ಶಿವಾನಂದ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ, ಯುವ ಮುಖಂಡೆ ಲಕ್ಷ್ಮೀ ಇನಾಮದಾರ, ನಾನಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಎಫ್.ಎಸ್. ಸಿದ್ಧನಗೌಡರ, ಕಲಾವಿದ ಸಿ.ಕೆ.ಮೆಕ್ಕೇದ, ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios