Asianet Suvarna News Asianet Suvarna News

ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಸೆ.15ರವರೆಗೆ ಕೆಎಸ್ಸಾರ್ಟಿಸಿ ಅವಕಾಶ

  • ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭ - KSRTCಯಿಂದ ವಿದ್ಯಾರ್ಥಿಗಲಿಗೆ ಉಚಿತ ಪ್ರಯಾಣ ಅವಕಾಶ
  •  2020-21ನೇ ಸಾಲಿನ ಬಸ್‌ ಪಾಸ್‌ ಅಥವಾ ಶಾಲಾ-ಕಾಲೇಜು ರಶೀದಿ ಅಥವಾ ಗುರುತಿನ ಚೀಟಿ ತೋರಿಸಬೇಕು
  • ಸೆಪ್ಟೆಂಬರ್‌ 15ರವರೆಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಕೆಎಸ್‌ಆರ್‌ಟಿಸಿ ಅವಕಾಶ 
Free service for Students in KSRTC till September 15 snr
Author
Bengaluru, First Published Aug 27, 2021, 8:54 AM IST

ಬೆಂಗಳೂರು (ಆ.27): ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2020-21ನೇ ಸಾಲಿನ ಬಸ್‌ ಪಾಸ್‌ ಅಥವಾ ಶಾಲಾ-ಕಾಲೇಜು ರಶೀದಿ ಅಥವಾ ಗುರುತಿನ ಚೀಟಿ ತೋರಿಸಿ ಸೆಪ್ಟೆಂಬರ್‌ 15ರವರೆಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಕೆಎಸ್‌ಆರ್‌ಟಿಸಿ ಅವಕಾಶ ಕಲ್ಪಿಸಿದೆ. 

ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸಾರಿಗೆ ಸಚಿವ ಶ್ರೀರಾಮುಲು

ಪ್ರಸಕ್ತ ಶೈಕ್ಷಣಿಕ ಸಾಲಿನ ಬಸ್‌ ಪಾಸ್‌ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ವೆಬ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

ಹೀಗಾಗಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ರಿಯಾಯಿತಿ ದರದ ಪಾಸ್‌ಗಳನ್ನು ಪಡೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ತಿಳಿಸಿದೆ.

ಈ ಹಿಂದೆ ಪಿಯುಸಿ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಅವಕಾಶ ನೀಡಲಾಗಿತ್ತು. ಇದೀಗ ಉಚಿತ ಪ್ರಯಾಣದ ಅವಕಾಶವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲಾಗಿದೆ.

Follow Us:
Download App:
  • android
  • ios