Asianet Suvarna News Asianet Suvarna News

ನೇಕಾರರ ಬಾಯಿಗೆ ಸಕ್ಕರೆ ಹಾಕಿದ ಸಚಿವ; 250 ಯುನಿಟ್‌ ವಿದ್ಯುತ್ ಉಚಿತ!

ರಾಜ್ಯದ ನೇಕಾರರಿಗೆ 10 ಎಚ್‌ಪಿವರೆಗೆ 250 ಯುನಿಟ್‌ ಉಚಿತ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ರಾಜ್ಯದ ನೇಕಾರರಿಗೆ ದಸರಾ, ದೀಪಾವಳಿಯ ಗಿಫ್ಟ್‌ ನೀಡಿದೆ ಎಂದು ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.

Free electricity for nekara community minister shivananda patil order at vijayapur rav
Author
First Published Oct 22, 2023, 6:36 AM IST

ವಿಜಯಪುರ (ಅ.22): ರಾಜ್ಯದ ನೇಕಾರರಿಗೆ 10 ಎಚ್‌ಪಿವರೆಗೆ 250 ಯುನಿಟ್‌ ಉಚಿತ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ರಾಜ್ಯದ ನೇಕಾರರಿಗೆ ದಸರಾ, ದೀಪಾವಳಿಯ ಗಿಫ್ಟ್‌ ನೀಡಿದೆ ಎಂದು ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಚುನಾವಣೆ ಸಂದರ್ಭದಲ್ಲಿ ನೇಕಾರರಿಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯನ್ನು ಅನುಷ್ಠಾನಗೊಳಿಸಲು ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ. ಇದು ನೇಕಾರರಿಗೆ ದಸರಾ ಹಾಗೂ ದೀಪಾವಳಿಯ ಬಂಪರ್‌ ಕೊಡುಗೆಯಾಗಿದೆ ಎಂದು ಹೇಳಿದರು.

ರೈತರು ಪರಿಹಾರಕ್ಕೆಂದೇ ಆತ್ಮಹತ್ಯೆ ಮಾಡಿಕೊಳ್ತಾರೆಂದಿದ್ದ ಶಿವಾನಂದ ಪಾಟೀಲ್‌ ಮೇಲೆ ಹಣ ಮಳೆ: ಸಚಿವರಿಂದ ಉಡಾಫೆ ಉತ್ತರ!

0ದಿಂದ 10 ಎಚ್‌ಪಿವರೆಗಿನ 250 ಯುನಿಟ್‌ ವರೆಗೆ ರಾಜ್ಯದ ನೇಕಾರರಿಗೆ ಉಚಿತ ವಿದ್ಯುತ್‌ ನೀಡಲಾಗುವುದು. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. 35ರಿಂದ 40 ಸಾವಿರ ನೇಕಾರರ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ. ₹129ರಿಂದ ₹149 ಕೋಟಿವರೆಗೆ ಈ ಯೋಜನೆ ಅನುಷ್ಠಾನಕ್ಕೆ ವೆಚ್ಚವಾಗಲಿದೆ ಎಂದು ಹೇಳಿದರು.

ದೊಡ್ಡ ನೇಕಾರರಿಗೂ 500 ಯುನಿಟ್‌ ವರೆಗೆ ₹1.25 ನಂತೆ ರಿಯಾಯ್ತಿ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ 1ರಿಂದ 10ರಷ್ಟು ಎಚ್‌ಪಿ ಹೊಂದಿದ ನೇಕಾರರು ಶೇ.80ರಷ್ಟು ಇದ್ದಾರೆ. ಶೇ.20ರಷ್ಟು ದೊಡ್ಡ ನೇಕಾರರಿದ್ದಾರೆ. ಶೇ. 80ರಷ್ಟು ನೇಕಾರರಿಗೆ ಉಚಿತ ವಿದ್ಯುತ್‌ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು.

ದುಡ್ಡು ಎಸೆದಿದ್ದಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ:

ಹೈದ್ರಾಬಾದ್‌ನಲ್ಲಿ ಮದುವೆ ಸಮಾರಂಭದಲ್ಲಿ ಕವಾಲಿ ಕಾರ್ಯಕ್ರಮದಲ್ಲಿ ನೋಟಿನ ಸುರಿಮಳೆಗರೆದಿರುವುದಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಮದುವೆ ಸಮಾರಂಭದಲ್ಲಿ ಕವಾಲಿ ಕಾರ್ಯಕ್ರಮದಲ್ಲಿ ಹಾಡುಗಾರನ ಮೇಲೆ ಅಭಿಮಾನಿಗಳು ನೋಟಿನ ಸುರಿಮಳೆ ಹರಿಸುವುದು ಅಲ್ಲಿನ ಸಂಪ್ರದಾಯ. ಅಲ್ಲಿ ನಾನು ಅತಿಥಿಯಾಗಿ ಹೋಗಿದ್ದೆ. ನನಗೆ ಆ ಸಂಪ್ರದಾಯ ತಡೆಯುವ ಅಧಿಕಾರ ಇರುವುದಿಲ್ಲ. ಅಲ್ಲಿನ ಗೃಹ ಸಚಿವರು ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಅದನ್ನು ತಡೆಯುವ ಬಗ್ಗೆ ಅವರನ್ನು ಕೇಳಬೇಕು. ನಾನು ಕವಾಲಿ ಹಾಡು ಆಲಿಸಲು ಕೆಲ ಹೊತ್ತು ಕುಳಿತುಕೊಂಡಿದ್ದೆ ಅಷ್ಟೇ. ಕವಾಲಿ ಹಾಡುಗಾರನ ಮೇಲೆ ಅಭಿಮಾನಿಗಳು ನೋಟುಗಳನ್ನು ಹಾರಿಸುತ್ತಿದ್ದರು. ಕೆಲವೊಂದು ನೋಟುಗಳು ನನ್ನ ಬಳಿ ಬಂದು ಬಿದ್ದವು. ಈ ಬಗ್ಗೆ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

ಸಚಿವರೇ ನಿಮಗೆ 10 ಕೋಟಿ ರೂ. ಕೋಡ್ತೀವಿ, ನೇಣು ಹಾಕಿಕೊಳ್ಳಿ: ಮಾಜಿ ಸಚಿವ ಬೆಳ್ಳುಬ್ಬಿ ಸವಾಲು

ಈ ಸಂಬಂಧ ಈಗಾಗಲೇ ಒಂದು ಸುದ್ದಿವಾಹಿನಿ ಮೇಲೆ ಮಾನಹಾನಿ ಖಟ್ಲೆ ಹಾಕಲು ನೋಟಿಸ್‌ ನೀಡಿದ್ದೇನೆ. ಇನ್ನೂ ಒಂದು ಸುದ್ದಿವಾಹಿನಿ ಮೇಲೆ ಕೇಸ್‌ ಹಾಕುತ್ತೇನೆ ಎಂದು ತಿಳಿಸಿದರು.

Follow Us:
Download App:
  • android
  • ios