ಚಿತ್ರದುರ್ಗ[ಡಿ.21]: ಸುಳ್ವಾಡಿ ವಿಷ ಪ್ರಸಾದ ದುರಂತ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರೆ.

ಚಿತ್ರದುರ್ಗದ ಹಿರಿಯೂರು ತಾಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ಘಟನೆ ನಡೆದಿದ್ದು,ಮೃತರನ್ನು ಚಿತ್ತಪ್ಪ[80], ಶಶಿಧರ್[40], ಭಾಗ್ಯಮ್ಮ[35], ಹೇಮಲತಾ[35] ಎಂದು ಗುರುತಿಸಲಾಗಿದೆ. ಈ ಆಹಾರ ಸೇವಿಸಿದ ಇನ್ನೂ ನಾಲ್ವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ನಿನ್ನೆ ರಾತ್ರಿ ಜೋಳದ ಮುದ್ದಿ, ಕಾಳು ಸಾರು ಊಟ ಮಾಡಿದ್ದ ಚಿತ್ತಪ್ಪ ಕುಟುಂಬದ ಒಟ್ಟು 8 ಮಂದಿಗೆ ವಾಂತಿ ಭೇದಿಯಾಗಿದೆ. ಕೂಡಲೇ ಇವರೆಲ್ಲರನ್ನೂ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಕಲ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇನ್ನೂ ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ.