ರಾಜ್ಯದಲ್ಲಿ ಮೆಕ್ಕೆಜೋಳ ಮತ್ತು ರಾಗಿಯನ್ನು ಸಂಗ್ರಹಿಸುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಮತ್ತಷ್ಟು ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಬೆಂಗಳೂರು (ಫೆ.25): ರಾಜ್ಯದಲ್ಲಿ (Karnataka) ಮೆಕ್ಕೆಜೋಳ ಮತ್ತು ರಾಗಿಯನ್ನು ಸಂಗ್ರಹಿಸುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಮತ್ತಷ್ಟು ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Devegowda) ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ (Prime Minitser Narendra Modi) ಅವರಿಗೆ ಪತ್ರ (Letter) ಬರೆದಿದ್ದಾರೆ. ಮೆಕ್ಕೆಜೋಳ ಮತ್ತು ರಾಗಿಯನ್ನು ಸಂಗ್ರಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿವೆ. ಅಗತ್ಯ ಇರುವಷ್ಟುಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಅಲ್ಲದೇ, ರಾಜ್ಯ ಸರ್ಕಾರದ ರಾಜ್ಯ ಕೃಷಿ ಉತ್ಪಾದಕರ ಮಾರುಕಟ್ಟೆಸಮಿತಿಗಳು ರೈತರಿಗೆ ಹೆಚ್ಚಿನ ಸಹಾಯ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗಾಗುತ್ತಿರುವ ತೊಂದರೆಯನ್ನು ಆದಷ್ಟುಬೇಗ ತಪ್ಪಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 1870 ರು. ನಿಗದಿಗೊಳಿಸಿದ್ದು, ಈ ವರ್ಷ 20 ರು. ಹೆಚ್ಚಿಸಲಾಗಿದೆ. ಅಂತೆಯೇ ರಾಗಿಗೆ ಪ್ರತಿ ಕ್ವಿಂಟಲ್‌ಗೆ 3,377 ರು. ನಿಗದಿಗೊಳಿಸಿದ್ದು, 52 ರು. ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಯಾವುದೇ ರೀತಿಯಲ್ಲಿಯೂ ಲಾಭದಾಯಕವಾಗಿಲ್ಲ. ಖರೀದಿಯಲ್ಲಿ ವಿಳಂಬ ಮಾಡುತ್ತಿರುವ ಕಾರಣ ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಗಿಂತ ಶೇ.35ರಷ್ಟುಕಡಿಮೆ ಬೆಲೆಗೆ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರವು ಸಂಗ್ರಹಣೆಯ ಪ್ರಮಾಣವನ್ನು ನಿರ್ಬಂಧಿಸಬಾರದು.
ಮತ್ತೆ ಸಮ್ಮಿಶ್ರ ಸರ್ಕಾರ, ಇಬ್ಬರೂ ನಮ್ಮ ಬಳಿ ಬರಹುದು: ದೇವೇಗೌಡ ಭವಿಷ್ಯ
ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು. ಮೆಕ್ಕೆಜೋಳ ಮತ್ತು ರಾಗಿಯ ಬೆಂಬಲ ಬೆಲೆಯನ್ನು ಕ್ರಮವಾಗಿ ಪ್ರತಿ ಕ್ವಿಂಟಲ್‌ಗೆ ಎರಡೂವರೆ ಮತ್ತು ನಾಲ್ಕು ಸಾವಿರ ರು. ಹೆಚ್ಚಿಸಿದರೆ ಅನುಕೂಲವಾಗಲಿದೆ. ಅಲ್ಲದೇ, ಗೊಬ್ಬರ, ಬೀಜಗಳು, ಸಂರಕ್ಷಣಾ ರಾಸಾಯನಿಕ ಶುಲ್ಕ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಪರಿಣಿತರಿಂದ ಮರುಪರಿಶೀಲನೆ ನಡೆಸಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
6 ಬಾರಿ ಗೆದ್ದವರನ್ನು ಅಧಿಕಾರದಿಂದ ಇಳಿಸಲು ಆಗುತ್ತಾ: ಸಿಎಂ ಇಬ್ರಾಹಿಂ(CM Ibrahim) ಅವರು ಕಾಂಗ್ರೆಸ್ (Congress) ತೊರೆಯುವುದಾಗಿ ಹೇಳಿದ್ದು, ಜೆಡಿಎಸ್ ಸೇರುವ ಒಲವು ತೋರಿದ್ದಾರೆ. ಆದ್ರೆ, ದೆಹಲಿಯಿಂದ ಕರೆ ಬಮದ ಹಿನ್ನೆಲೆಯಲ್ಲಿ ಫೆ.14ರಂದು ರಾಜೀನಾಮೆ ಕೊಡುತ್ತೇನೆ ಎಂದವರು ಯುಟರ್ನ್ ಹೊಡೆದಿದ್ದಾರೆ. ಇಬ್ರಾಹಿಂ ಜೆಡಿಎಸ್‌ಗೆ ಬಂದರೆ ಅಲ್ಪಸಂಖ್ಯಾತ ಮತಗಳನ್ನ ಕ್ರೋಢೀಕರಣ ಮಾಡಬಹುದು ಎನ್ನುವ ಪ್ಲಾನ್‌ನಲ್ಲಿ ದಳಪತಿಗಳು ಇದ್ದಾರೆ. ಆದ್ರೆ, ಇಬ್ರಾಹಿಂ ರಾಜೀನಾಮೆಯಿಂದ ಹಿಂದೆ ಸರಿದಿರುವುದು ಜೆಡಿಎಸ್‌ಗೆ ನಿರಾಸೆಯಾಗಿದೆ.
ಇನ್ನು ಸಿಎಂ ಇಬ್ರಾಹಿಂ ಪಕ್ಷ ಸೇರ್ಪಡೆ ವಿಚಾರಕ್ಕೆ ಜೆಡಿಎಸ್(JDS) ವರಿಷ್ಠ ಎಚ್‌ಡಿ ದೇವೇಗೌಡ (HD Devegowda) ಪ್ರತಿಕ್ರಿಯಿಸಿ, ನಮ್ಮಲ್ಲಿ ಈಗ ಒಬ್ಬರು ರಾಜ್ಯಾಧ್ಯಕ್ಷರಾಗಿ ಇದ್ದಾರೆ. ಅವರು ಆರು ಬಾರಿ ಗೆದ್ದವರು. ಅವರನ್ನು ನಾಳೆ ಬೆಳಿಗ್ಗೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ.? ಎಂದರು. ಸಿಎಂ ಇಬ್ರಾಹಿಂ ಅವರಿಗೆ ಇಷ್ಟೇ ಹೇಳಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದೇವೆ ಎಂದು ಹೇಳಿದರು. ಈ ಮೂಲಕ ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಇಲ್ಲ. ಮುಂದಿನ ನೋಡೋಣ ಎನ್ನುವ ಮಾತುಳನ್ನಾಡಿದ್ದಾರೆ.
River Alignment ಕುರಿತು ನಮ್ಮ ರಾಜ್ಯವನ್ನು ವಿಶ್ವಾಸಕ್ಕೆ ಪಡೆದಿಲ್ಲ: ದೇವೇಗೌಡ
ಜೆಡಿಎಸ್ ತೊರೆಯುವುದಾಗಿ ಕೆಲ ಮುಖಂಡರು ಬಹಿರಂಗವಾಗಿಯೇ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಲು ಸಮಯ ಇನ್ನೂ ಮೀರಿಲ್ಲ ಎಂದ ಅವರು, ಕೇವಲ 123 ಸೀಟುಗಳು ನಮ್ಮ ಗುರಿ ಎಂದು ಘೋಷಿಸುವುದು ಸಾಕವುದಿಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಹಿಜಾಬ್ ವಿಚಾರದ ಮಾತನಾಡಿ, ವಿವಾದ ಆರಂಭವಾಗುತ್ತಿದ್ದಂತೆ ಎರಡು ರಾಷ್ಟ್ರೀಯ ಪಕ್ಷಗಳು ಅದನ್ನು ಆರಂಭದಲ್ಲೇ ಚಿವುಟಿ ಹಾಕುವ ಕೆಲಸ ಮಾಡ ಬೇಕಿತ್ತು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. ಅದನ್ನು ಎರಡೂ ರಾಷ್ಟ್ರೀಯ ಪಕ್ಷಗಳೂ ಮಾಡಬೇಕಿತ್ತು. ಆದರೆ ಈಗ ತುಂಬಾ ಬೆಳವಣಿಗೆಗಳಾಗಿವೆ, ಹೀಗಾಗಿ ಕೋರ್ಟ್ ಏನು ತೀರ್ಪು ಕೊಡುತ್ತದೋ ಅದನ್ನು ಒಪ್ಪಬೇಕು ಎಂದು ಎಚ್‌ಡಿ ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು
