Karnataka Politics: ಕಾಂಗ್ರೆಸಿಗರು ಮೇಕೆದಾಟು ವಿರೋಧಿಸಿದ್ರು: ದೇವೇಗೌಡ
* ನಾನು ಪ್ರಧಾನಿಯಾಗಿದ್ದಾಗ ಯೋಜನೆ ರೂಪಿಸಿ 650 ಕೋಟಿ ಅಂದಾಜು ತಯಾರಿಸಿದ್ದೆ
* ಈಗ ಕಾಂಗ್ರೆಸಿಗರು ಬೀದಿಗಿಳಿದಿದ್ದಾರೆ
* ಗೆದ್ದರೆ 5 ವರ್ಷದಲ್ಲಿ ಎಲ್ಲಾ ನೀರಾವರಿ ಯೋಜನೆ ಪೂರ್ಣ: ಹೆಚ್‌ಡಿಕೆ
ಶ್ರೀರಂಗಪಟ್ಟಣ(ಏ.17): ಮೇಕೆದಾಟು(Mekedatu) ಅಣೆಕಟ್ಟು ನಾನು ಪ್ರಧಾನಿಯಾಗಿದ್ದ ಸಮಯದಲ್ಲಿ ರೂಪುಗೊಂಡಿದ್ದ ಯೋಜನೆ. ಅಂದು ಯೋಜನೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ಈಗ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ಜಾರಿಗೆ ಬೀದಿಗೆ ಇಳಿದಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ(HD Devegowda) ಟೀಕಿಸಿದರು.
ಜಲಧಾರೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿಯಾಗಿದ್ದ ಸಮಯದಲ್ಲೇ ಅಣೆಕಟ್ಟು ನಿರ್ಮಾಣಕ್ಕೆ 650 ಕೋಟಿ ರು.ವೆಚ್ಚದ ಅಂದಾಜುಪಟ್ಟಿ ತಯಾರಿಸಿದ್ದೆ. ಆದರೆ, ಕಾಂಗ್ರೆಸ್(Congress) ಸೇರಿದಂತೆ ತಮಿಳುನಾಡಿನ(Tamil Nadun) ಅಂದಿನ ಸಿಎಂ ಅಣೆಕಟ್ಟು(Dam) ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಕಾವೇರಿ ನೀರಿನ ಮೇಲಿನ ಹಕ್ಕಿಗಾಗಿ ನಾನು ಹೋರಾಟ ಮಾಡುತ್ತಿದ್ದ ವೇಳೆ ಪ್ರಧಾನಿ ವಾಜಪೇಯಿ ಕಣ್ಣೀರಿಟ್ಟು ನನ್ನ ಬಳಿ ಮಾತನಾಡಿದ್ದರು. ತಮಿಳುನಾಡಿನ 30 ಸಂಸದರು ಬೆಂಬಲ ನೀಡುತ್ತಿದ್ದಾರೆ. ನಾನು ಏನು ಮಾಡಲು ಆಗುವುದಿಲ್ಲ, ದಯವಿಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಿ ಎಂದಿದ್ದರು ಎಂಬುದನ್ನು ಎಚ್ಡಿಡಿ ಸ್ಮರಿಸಿದರು.
ನೈಸ್ ಸಂಸ್ಥೆ ವಿರುದ್ಧ ಮತ್ತೆ ಸಿಡಿದೆದ್ದ ಎಚ್‌ಡಿ ದೇವೇಗೌಡ, ಗಂಭೀರ ಆರೋಪ
ಕುಮಾರಸ್ವಾಮಿ ಕಲ್ಪನೆಯ ಕೂಸು ಜಲಧಾರೆ
ಜತನಾ ಜಲಧಾರೆ ಎಂಬುದು ಕುಮಾರಸ್ವಾಮಿ(HD Kumaraswamy) ಅವರ ಕಲ್ಪನೆಯ ಕೂಸಾಗಿದ್ದು, ಪ್ರಾದೇಶಿಕ ಪಕ್ಷ ಹಾಗೂ ರಾಜ್ಯದ ಉಳಿವಿವಾಗಿ ನಾನು ನಿರಂತರ ಹೋರಾಟ ಮಾಡುತ್ತಿದ್ದೇನೆ. ಈ ಜಲಧಾರೆ ಹೋರಾಟ ಚುನಾವಣಾ ತಯಾರಿಯಲ್ಲ. ಇದು ಜನತೆಯ ಹಿತಕ್ಕಾಗಿ. ಕನ್ನಡಿಗರು(Kannadigas0 ಕುಡಿಯುವ ನೀರಿಗೂ ಭಿಕ್ಷೆ ಬೇಡಬಾರದು ಎಂದರು.
ಗೆದ್ದರೆ 5 ವರ್ಷದಲ್ಲಿ ಎಲ್ಲಾ ನೀರಾವರಿ ಯೋಜನೆ ಪೂರ್ಣ
ವಿಜಯಪುರ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟಬಹುಮತ ನೀಡಿದರೇ ರಾಜ್ಯದ ಎಲ್ಲ ನದಿಗಳ ನೀರನ್ನು ಸದ್ಬಳಕೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಆಲಮಟ್ಟಿಯಲ್ಲಿ(Almatti) ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಎಷ್ಟೇ ಲಕ್ಷ ಕೋಟಿ ವೆಚ್ಚವಾದರೂ 5 ವರ್ಷಗಳಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಹನುಮ ಜಯಂತಿ ದಿನ ಸಂಕಲ್ಪ ಮಾಡಿದ್ದೇವೆ ಎಂದರು.
ಭ್ರಷ್ಟಾಚಾರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಆಗಿದೆ ಎಂದು ಲೇವಡಿ ಮಾಡಿದ ಅವರು, ಕಾಂಗ್ರೆಸ್ಸಿನ ಭ್ರಷ್ಟಾಚಾರದ ಮಾಹಿತಿ ತೆಗೆದರೆ ಒಂದು ಗುಡ್ಡದಷ್ಟುಮಾಹಿತಿ ಲಭಿಸುತ್ತದೆ. ಗುಡ್ಡದಷ್ಟು ಮಾಹಿತಿಯನ್ನು ದಾಖಲೆ ಸಮೇತ ಇಡಬಹುದು ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಪತ್ನಿಗೆ ಐಟಿ ನೋಟಿಸ್: ಎಚ್ ಡಿ ರೇವಣ್ಣ ಗರಂ
ಭ್ರಷ್ಟಾಚಾರದ(Corruption) ವಿಚಾರದಲ್ಲಿ ಬಿಜೆಪಿ(BJP) ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಎರಡೂ ಪಕ್ಷಗಳಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಅಧಿಕಾರವೊಂದೇ ಮುಖ್ಯವಾಗಿದೆ. 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೇನು. ಸಾಲಮನ್ನಾ ಮಾಡಲು ಎಲ್ಲಿಂದ ದುಡ್ಡು ತರುತ್ತಾರೆ ಎಂಬ ಬಗ್ಗೆ ವಿರೋಧಿಗಳು ಲಘುವಾಗಿ ಮಾತನಾಡಿದರು. ಆದರೂ ನಾನು ಸಾಲಮನ್ನಾ ಮಾಡಿ ತೋರಿಸಿದ್ದೇನೆ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ(Santosh Patil Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ(KS Eshwarappa) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಅವರನ್ನು ಬಂಧಿಸುವ ವಿಚಾರವಾಗಿ ಪಟ್ಟು ಹಿಡಿದಿದೆ. ಈಶ್ವರಪ್ಪನವರನ್ನು ಬಂಧಿಸುವಂತೆ ಆಗ್ರಹಿಸುವುದು ಸರಿಯಲ್ಲ ಎಂದರು.