ವಕ್ಫ್ ಹಠಾವೋ: ತಾಲಿಬಾನ್ ಮಾದರಿ ಆಡಳಿತ ನಡೆಸ್ತಿದ್ಯಾ ಸಿದ್ದರಾಮಯ್ಯ ಸರ್ಕಾರ? ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಪ್ರತಾಪ್ ಸಿಂಹ!

ಕಂಪ್ಲಿಯಲ್ಲಿ ನಡೆದ ವಕ್ಫ್ ಹಠಾವೋ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಸ್ಲಿಂ ಓಲೈಕೆ ಹಾಗೂ ವಕ್ಫ್ ಆಸ್ತಿ ವಿಚಾರವಾಗಿ ಸರ್ಕಾರದ ನಡೆಯನ್ನು ಟೀಕಿಸಿದರು.

former mysuru mp pratap simha outraged against cm siddaramaiah in Waqf Hatao Public Awareness Conference ballari rav

ಕಂಪ್ಲಿ (ಜ.10): ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಮುಸ್ಲಿಂ ಓಲೈಕೆಗೆ ಟಿಪ್ಪು ಜಯಂತಿ ಮಾಡಿದ್ದು, ಮೈಸೂರಲ್ಲಿ ಜನರು ಸೋಲಿಸಿದರೂ ಬುದ್ಧಿ ಕಲಿಯುತ್ತಿಲ್ಲ. ಸಿದ್ದರಾಮಯ್ಯ ಪದೇಪದೇ ದೇವರಾಜ್ ಅರಸುವಿನಂತೆ ನಾನು ಎನ್ನುತ್ತಾರೆ. ಅರಸು ಭೂಮಿ ನೀಡಿದರೆ ಇವರು ಭೂಮಿ ಕಿತ್ತು ಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದ್ದಾರೆ..

ಪಟ್ಟಣದ ಶಾರದಾ ಶಾಲೆ ಆವರಣದಲ್ಲಿ ಶನಿವಾರ ಕಂಪ್ಲಿಯ ನಾಗರಿಕ ಹಿತ ರಕ್ಷಣಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಕ್ಫ್ ಹಠಾವೋ ದೇಶ ಬಚಾವೋ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಸ್ಲಿಂ ಬಾಹುಳ್ಯ ಎಲ್ಲೆಲ್ಲಿ ಇದಾವೋ ಆ ದೇಶಗಳು ಮುಳುಗಿ ಹೋಗುತ್ತಿವೆ. ಮುಸ್ಲಿಂ 15 ಪರ್ಸೆಂಟ್ ಆದ ಕೂಡಲೇ ಭೂಮಿ‌ ಕಬಳಿಸುತ್ತಿದ್ದಾರೆ. 25 ಪರ್ಸೆಂಟ್ ಆದರೆ ಉಳಿಗಾಲವಿಲ್ಲ. ಮುಸ್ಲಿಂ, ಕ್ರಿಶ್ಚನ್ ಒಂದಾದಂತೆ ಹಿಂದೂಗಳು ಒಂದಾಗಬೇಕು ಎಂದರು.

ಇದನ್ನೂ ಓದಿಸಿಎಂ ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ: ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಪಿತ್ರಾರ್ಜಿತ ಆಸ್ತಿ ಮಕ್ಕಳು, ಮೊಮ್ಮಕ್ಕಳಿಗೆ ಬರುತ್ತದೆ. ಆದರೆ ತಲತಲಾಂತರದಿಂದ ಹಿಂದೂಗಳಿಗೆ ಸೇರಿದ ಆಸ್ತಿ ರಾತ್ರಿ ಬೆಳಗಾಗುವುದರಲ್ಲಿ ವಕ್ಫ ಆಸ್ತಿ ಆಗುವುದು ಹೇಗೆ?, ಅವರು ಬಂದು ವಕ್ಫ್‌ ಆಸ್ತಿ ನಮ್ಮದು ಎನ್ನುತ್ತಿದ್ದಾರೆ ಎಂದು ಪ್ರತಾಪ ಸಿಂಹ ಹೇಳಿದರು.

ಮೊದಲ ಹಂತದ ಹೋರಾಟ ಬಳಿಕ ಜೆಪಿಸಿ ಜೊತೆಗೆ ಕೇಂದ್ರ ಸಚಿವರ ಜೊತೆಗೆ ಮಾತನಾಡಿ ಬಂದಿದ್ದೇವೆ. ಭಾಷಣ ಕೊಡುವ ಹೋರಾಟ ನಮ್ಮದಲ್ಲ. ಬಡವರಿಗೆ ನ್ಯಾಯ ಕೊಡಿಸುವುದು ನಮ್ಮ ಉದ್ದೇಶವಾಗಿದೆ. ಚುನಾವಣಾ ಹಿನ್ನೆಲೆ ಮಾಡುತ್ತಿರುವ ಹೋರಾಟ ನಮ್ಮದಲ್ಲ. ಚುನಾವಣಾ ಇನ್ನು ಮೂರೂವರೆ ವರ್ಷ ಇದೆ. ಅದಕ್ಕೆ ನಾವು ಹೋರಾಟ ಮಾಡುತ್ತಿಲ್ಲ. ಡೋಂಗಿ ರಾಜಕಾರಣಿಗಳು ನಾವಲ್ಲ. ಕೃಷಿ‌ಭೂಮಿ, ಮಠಗಳ ಭೂಮಿ ಕಬಳಿಸುವ ಯತ್ನದಲ್ಲಿ ನೋಟಿಸ್ ಕೊಡುತ್ತಿದ್ದಾರೆ.

ರಾಜಕಾರಣಿಗಳು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮಾತನಾಡುವುದು ಸಹಜ. 2023ರಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ ಡಿಕೆಶಿ, ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬಂದ ಬಳಿಕ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಧಿಕಾರಕ್ಕೆ ಬರುವ ಮುಂಚೆ 40 ಪರ್ಸೆಂಟ್ ಎಂದವರು ಈಗ, ಅಧಿಕಾರಕ್ಕೆ ಬಂದು‌ ಏನು ಮಾಡುತ್ತಿದ್ದಾರೆ. ಅಡ್ಜಸ್ಟ್ ಮೆಂಟ್ ರಾಜಕಾರಣಿಗಳು ರಾಜ್ಯದಲ್ಲಿ ತುಂಬಿಕೊಂಡಿದ್ದಾರೆ ಎಂದರು.

ಕುಮಾರ್ ಬಂಗಾರಪ್ಪ ಮಾತನಾಡಿ, ಪಹಣಿಯಲ್ಲಿನ ವಕ್ಫ್ ಹೆಸರು ತಿದ್ದುಪಡಿಗೆ ಮುಖ್ಯಮಂತ್ರಿಯಾಗಲಿ, ಜಿಲ್ಲಾಧಿಕಾರಿ, ತಹಸೀಲ್ದಾರ್ ಗೆ ಯಾವುದೇ ಅಧಿಕಾರವಿಲ್ಲ. ಒಂದು ವೇಳೆ ರಾಜ್ಯದ ಜನತೆಗೆ ವಕ್ಫ್ ಹೆಸರು ತೊಲಗಿಸಿ ನ್ಯಾಯ ಒದಗಿಸಬೇಕೆಂದರೆ ಕಾಂಗ್ರೆಸ್ ವಕ್ಫ್ ತಿದ್ದುಪಡಿಗೆ ಬೆಂಬಲಿಸಬೇಕು. ರಾಜ್ಯದಲ್ಲಿ 65 ಸಾವಿರ ಆಸ್ತಿ, ಬಳ್ಳಾರಿಯಲ್ಲಿ 3658 ಆಸ್ತಿಗಳು ವಕ್ಫ್ ಹೆಸರಿನಲ್ಲಿವೆ. ಈ ಕುರಿತು ಜನರನ್ನು ಜಾಗೃತಗೊಳಿಸಲು ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ ಎಂದರು.

ಸಿದ್ದರಾಮಯ್ಯ ಪರ ಬ್ಯಾಟಿಂಗ್; ಪ್ರತಾಪ ಸಿಂಹ ಎಲ್ಲಿಯಾದ್ರೂ ಸಿಕ್ಕರೆ ಕಾಫಿ ಕೊಡಿಸುತ್ತೇನೆ: ಎಂ ಲಕ್ಷ್ಮಣ್

ಕಂಪ್ಲಿ ಕಲ್ಮಠದ ಸ್ವಾಮೀಜಿ, ಹಂಪಿ ಮಾತಂಗಪರ್ವತದ ಪೂರ್ಣಾನಂದ ಭಾರತಿಶ್ರೀ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ರಮೇಶ ಜಾರಕಿಹೊಳಿ, ಚಂದ್ರಪ್ಪ, ಬಿ.ಪಿ. ಹರೀಶ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ, ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್, ಮಾಜಿ ಸಂಸದ ಬಿ.ವಿ. ನಾಯಕ್, ಪ್ರಮುಖರಾದ ಎಂ.ಭರತ್, ರವಿಬಿರಾದಾರ್, ರೇಣುಕಪ್ರಸಾದ, ರಾಜೇಶ, ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್, ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರಾದ ವಾಲ್ಮೀಕಿ ಈರಣ್ಣ, ಎಂ.ಮಂಜುನಾಥ, ಪಿ.ಶಂಭುಲಿಂಗ, ಹರೀಷ್ ಚಿತ್ರಗಾರ್, ಸಂತೋಷ್ ದಮ್ಮಾಳೆ, ಕೆ.ರೇಣುಕರಾಜ, ಕೆ.ಚಂದ್ರಶೇಖರ್, ಜಿ.ಮನೋಜ್, ವಿಜಯ್ ಅನೇಕರಿದ್ದರು.

Latest Videos
Follow Us:
Download App:
  • android
  • ios