Asianet Suvarna News Asianet Suvarna News

ಮಂಡ್ಯ ಕೇಂದ್ರ ಸಚಿವ ರಾಜೀನಾಮೆ ಕೊಟ್ಟು ಚನ್ನಪಟ್ಟಣ ಉಳಿಸಿಕೊಳ್ತಾರೆ: ಡಿಕೆ ಸುರೇಶ್ ವ್ಯಂಗ್ಯ

ಚನ್ನಪಟ್ಟಣಕ್ಕೆ ಇನ್ನೂ ಬೈ ಎಲೆಕ್ಷನ್ ಘೋಷಣೆ ಆಗಿಲ್ಲ. ಯಾಕೆಂದ್ರೆ ಹಾಲಿ ಶಾಸಕರು ಇನ್ನೂ ರಾಜೀನಾಮೆಯೇ ನೀಡಿಲ್ಲ. ನಮಗೆ ವಿಶ್ವಾಸವಿದೆ ಹೆಚ್‌ಡಿಕೆ ಯಾವುದೇ ಕಾರಣಕ್ಕೂ ಚನ್ನಪಟ್ಟಣ ಬಿಟ್ಟು ಹೋಗೊಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ವ್ಯಂಗ್ಯ ಮಾಡಿದರು.

Former MP DK Suresh reacts about channapattana by election rav
Author
First Published Jun 11, 2024, 5:59 PM IST

ಚನ್ನಪಟ್ಟಣ (ಜೂ.11): ಚನ್ನಪಟ್ಟಣಕ್ಕೆ ಇನ್ನೂ ಬೈ ಎಲೆಕ್ಷನ್ ಘೋಷಣೆ ಆಗಿಲ್ಲ. ಯಾಕೆಂದ್ರೆ ಹಾಲಿ ಶಾಸಕರು ಇನ್ನೂ ರಾಜೀನಾಮೆಯೇ ನೀಡಿಲ್ಲ. ನಮಗೆ ವಿಶ್ವಾಸವಿದೆ ಹೆಚ್‌ಡಿಕೆ ಯಾವುದೇ ಕಾರಣಕ್ಕೂ ಚನ್ನಪಟ್ಟಣ ಬಿಟ್ಟು ಹೋಗೊಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ವ್ಯಂಗ್ಯ ಮಾಡಿದರು.

ಉಪಚುನಾವಣೆ ವಿಚಾರವಾಗಿ ಇಂದು ಚನ್ನಪಟ್ಟಣದಲ್ಲಿ ಮಾತನಾಡಿದ ಡಿಕೆ ಸುರೇಶ್, ಹೆಚ್‌ಡಿಕೆ ಅವರಿಗೆ ಅಧಿಕಾರಕ್ಕಿಂತ ಕ್ಷೇತ್ರದ ಜನ, ಕಾರ್ಯಕರ್ತರು ಮುಖ್ಯ. ನಾನು ಸಾಕಷ್ಟು ಬಾರಿ ಅವರ ಮಾತುಗಳನ್ನು ಆಲಿಸಿದ್ದೇನೆ. ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳು ಅಂದಿದ್ರು. ಅಧಿಕಾರ ಇದ್ದಾಗ, ಇಲ್ಲದಿದ್ದಾಗ ಅವರ ಮಾತುಗಳನ್ನ ನೋಡಿದ್ದೇನೆ. ಅಲ್ಲದೇ ಅವರು ಹೃದಯವಂತರು ಕೂಡಾ. ಹಾಗಾಗಿ ಚನ್ನಪಟ್ಟಣ ಉಳಿಸಿಕೊಳ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಲೇವಡಿ ಮಾಡಿದರು.

ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸುವಂತೆ ಡಿಕೆ ಸುರೇಶ್ ಕಾರಿಗೆ ಕೈಕಾರ್ಯಕರ್ತರು ಮುತ್ತಿಗೆ!

ಇನ್ನು ಚನ್ನಪಟ್ಟಣ ಸ್ಪರ್ಧೆಗೆ ಕಾರ್ಯಕರ್ತರ ಒತ್ತಾಯ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ಅವರು ಮೊದಲು ರಾಜೀನಾಮೆ ಕೊಟ್ಟಮೇಲೆ ತಾನೇ ಬೈ ಎಲೆಕ್ಷನ್ ವಿಚಾರ? ನಾನು ಈಗಾಗಲೇ ಸೋತಿದ್ದೇನೆ. ಜನ ನನ್ನನ್ನ ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡ್ತಾರೆ. ಅಚ್ಚರಿ ಅಭ್ಯರ್ಥಿಯನ್ನ ಚನ್ನಪಟ್ಟಣಕ್ಕೆ ಕೊಡ್ತಾರೆ ಎಂದರು.

Latest Videos
Follow Us:
Download App:
  • android
  • ios