ಮುಡಾ ಮೇಲೆ ಇಡಿ ದಾಳಿ: ಸಿದ್ದು ಕಳಂಕ ರಹಿತವಾಗಿದ್ದರೆ ರಾಜ್ಯಕ್ಕೆ ಮಾದರಿ ಆಗ್ತಾರೆ, ಆರಗ ಜ್ಞಾನೇಂದ್ರ

ಮುಡಾ ಕಚೇರಿಗೆ ನಗರಾಭಿವೃದ್ಧಿ ಸಚಿವರನ್ನು ಕಳುಹಿಸಿ ಬೆಂಗಳೂರಿಗೆ ದಾಖಲೆಗಳನ್ನು ತರಿಸಿದ್ದಾರೆ. ಇಡಿ ಮೊದಲು ಇದನ್ನು ಹುಡುಕಬೇಕು ಯಾವುದೇ ಪಕ್ಷದವರೇ ಇದ್ದರೂ ಕಾನೂನು ಬಾಹಿರವಾಗಿ ನಡೆದುಕೊಂಡವರ ವಿರುದ್ಧ ಕ್ರಮ ಆಗಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ

Former  Home Minister Araga Jnanendra Talks Siddaramaiah's Muda Scam grg

ಶಿವಮೊಗ್ಗ(ಅ.18):  ಮುಡಾ ಕಚೇರಿ ‌ಮೇಲೆ ಇಡಿ ದಾಳಿ ಸ್ವಾಗತಾರ್ಹವಾಗಿದೆ. ಮುಡಾ ಕಚೇರಿಯಲ್ಲಿ ದಾಖಲೆಗಳೇ ಇಲ್ಲ. ಇದೊಂದು ದೊಡ್ಡ ಹಗರಣವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಕಳಂಕ ರಹಿತವಾಗಿದ್ದರೆ ಈ ರಾಜ್ಯಕ್ಕೆ ಮಾದರಿ ಆಗ್ತಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

ಮುಡಾ ಕಚೇರಿ ಮೇಲೆ ಇಡಿ ದಾಳಿ‌ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಮುಡಾ ಕಚೇರಿಗೆ ನಗರಾಭಿವೃದ್ಧಿ ಸಚಿವರನ್ನು ಕಳುಹಿಸಿ ಬೆಂಗಳೂರಿಗೆ ದಾಖಲೆಗಳನ್ನು ತರಿಸಿದ್ದಾರೆ. ಇಡಿ ಮೊದಲು ಇದನ್ನು ಹುಡುಕಬೇಕು ಯಾವುದೇ ಪಕ್ಷದವರೇ ಇದ್ದರೂ ಕಾನೂನು ಬಾಹಿರವಾಗಿ ನಡೆದುಕೊಂಡವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ. 

ನನಗೂ ಮುಡಾ ಅಧ್ಯಕ್ಷ ಸ್ಥಾನ ಬೇಡ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಇಡಿ ದುರ್ಬಳಕೆ ಆಗ್ತಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಎಸ್ ಐಟಿ ಯನ್ನು‌ ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳಲಿಲ್ವಾ? ಎಂದು ಪ್ರಶ್ನಿಸಿದ್ದಾರೆ. 

ರಾಜ್ಯದಲ್ಲಿ ಮೂರು ಉಪಚುನಾವಣೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಉಪಚುನಾವಣೆಯ ಅಭ್ಯರ್ಥಿಗಳನ್ನು ಹಿರಿಯರು ನಿರ್ಧರಿಸಲಿದ್ದಾರೆ. ಚನ್ನಪಟ್ಟಣದಿಂದ ಪಕ್ಷದ ಅಭ್ಯರ್ಥಿಯಾಗಲು ಯೋಗೇಶ್ವರ್ ಟಿಕೆಟ್ ಕೇಳಿರುವುದರಲ್ಲಿ ತಪ್ಪಿಲ್ಲ. ನಮ್ಮ ಪಕ್ಷದಲ್ಲಿಯೇ ಇದ್ದರೆ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಸಲಹೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios