ಇತ್ತೀಚೆಗಷ್ಟೇ ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಹಾಗೂ ಅಂಬರೀಶ್ ನಿಧನರಾಗಿದ್ದರು. ಇದೀಗ ಮತ್ತೋರ್ವ ಕಾಂಗ್ರೆಸ್ ನಾಯಕ ವಿಧಿವಶರಾಗಿದ್ದಾರೆ.
ಬೆಂಗಳೂರು, [ನ.30]: ಕಾಂಗ್ರೆಸ್ ಹಿರಿಯ ನಾಯಕ ಮೀರ್ ಅಜೀಜ್ ಅಹಮ್ಮದ್(85) ಅವರು ನಿನ್ನೆ [ಗುರುವಾರ] ತಡರಾತ್ರಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೀರ್ ಅಜೀಜ್ ಅಹಮ್ಮದ್ ಅವರು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ನಿನ್ನೆ ಕೊನೆಯುಸಿರೆಳೆದರು.
2003 ರಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯರಾಗಿದ್ದರು. ಅಜೀಜ್ ಎಂಎಂಎಸ್ ಹಾಗೂ ಎಸ್ಟಿಎ ಬಸ್ನ ಮಾಲೀಕರಾಗಿದ್ದರು.
ಅಜೀಜ್ ಅಹಮದ್ ಅವರಿಗೆ ಇಬ್ಬರು ಗಂಡು ಹಾಗೂ ಹೆಣ್ಣು ಮಕ್ಕಳು ಇದ್ದಾರೆ. ಮೊನ್ನೇ ಅಷ್ಟೇ ಕಾಂಗ್ರೆಸ್, ಅಂಬರೀಶ್ ಹಾಗೂ ಜಾಫರ್ ಶರೀಫ್ ಅವರನ್ನ ಕಳೆದುಕೊಂಡಿತ್ತು.
