ಬಿಜೆಪಿ ಸೇರಿದವರು ಈಗ ಅಂತರಪಿಶಾಚಿಗಳು: ಸಿದ್ದು

ಬಿಜೆಪಿ ಸೇರಿದವರು ಈಗ ಅಂತರಪಿಶಾಚಿಗಳು: ಸಿದ್ದು| ರಾಜ್ಯ ಸರ್ಕಾರ ಟೇಕಾಫ್‌ ಹಂತ ತಲುಪುವುದು ಬಿಡಿ, ಸತ್ತೇ ಹೋಗಿದೆ 

Former CM Siddaramaiah Slams The Leaders Who Joined BJP

ಮೈಸೂರು[ಜ.21]: ರಾಜ್ಯ ಸರ್ಕಾರ ಟೇಕಾಫ್‌ ಹಂತ ತಲುಪುವುದು ಬಿಡಿ, ಸತ್ತೇ ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ. ಅಧಿಕಾರದಾಸೆಗೆ ಪಕ್ಷ ಬಿಟ್ಟು ಈಗ ಅತಂತ್ರರಾಗಿರುವವರನ್ನು ನೋಡಿದರೆ ಅಯ್ಯೋ ಎನಿಸುತ್ತೆ. ಅವರ ಸ್ಥಿತಿ ಅಂತರಪಿಶಾಚಿಯಂತಾಗಿದೆ ಎಂದಿದ್ದಾರೆ.

'ಸಿದ್ದರಾಮಯ್ಯ ಹೌದು ಹುಲಿಯಾ ಅಲ್ಲಾ ಅವರು ಹೌದು ಸೋನಿಯಾ'

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 26ನೇ ತಾರೀಖಿಗೆ ಬಿಜೆಪಿ ಅಧಿಕಾರಕ್ಕೆ ಬಂದು 6 ತಿಂಗಳಾಗುತ್ತದೆ. ಆದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲವೇನೋ ಎಂಬಂಥ ಪರಿಸ್ಥಿತಿ ಇದೆ. ಮುಖ್ಯಮಂತ್ರಿಗಳು ಜನರಿಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇನ್ನೂ ಪೂರ್ಣ ಪ್ರಮಾಣದ ಮಂತ್ರಿಮಂಡಲವೇ ರಚನೆಯಾಗಿಲ್ಲ. ಹೀಗಾದರೆ ಅಭಿವೃದ್ಧಿ ಕೆಲಸ ಆಗುವುದು ಹೇಗೆ? ಎಂದು ಪ್ರಶ್ನಿಸಿದರು.

ಮಂತ್ರಿಮಂಡಲ ರಚನೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಅಮಿತ್‌ ಶಾ ಅವಕಾಶವನ್ನೇ ನೀಡುತ್ತಿಲ್ಲ. ಅಂದು ಯಡಿಯೂರಪ್ಪ ‘ಪ್ರಮಾಣವಚನ ಸ್ವೀಕರಿಸಿದ ದಿನವೇ ನಿಮ್ಮನ್ನು ಮಂತ್ರಿ ಮಾಡ್ತೀನಿ’ ಎಂದು ಅತೃಪ್ತರಿಗೆ ಹೇಳಿದ್ದರು. ಅಧಿಕಾರದಾಸೆಗೆ ಪಕ್ಷ ಬಿಟ್ಟು ಈಗ ಅತಂತ್ರರಾಗಿರುವವರನ್ನು ನೋಡಿದರೆ ಅಯ್ಯೋ ಎನಿಸುತ್ತೆ. ಅವರ ಸ್ಥಿತಿ ಅಂತರಪಿಶಾಚಿಯಂತಾಗಿದೆ. ರಾಜ್ಯ ಸರ್ಕಾರದ ಹಲವು ಇಲಾಖೆಗಳು ಮಂತ್ರಿಗಳಿಲ್ಲದೆ ನಿಷ್ಕ್ರಿಯವಾಗಿವೆ. ಜನರ ಕಷ್ಟಕೇಳಲು ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಜಿಲ್ಲೆ ಕಡೆಗೆ ತಲೆ ಹಾಕುತ್ತಿಲ್ಲ. ಪ್ರವಾಹ ಬಂದು ಇಷ್ಟುಸಮಯವಾದರೂ ಇನ್ನೂ ಜನ ಬೀದಿಬದಿಯಲ್ಲೇ ವಾಸಿಸುತ್ತಾ ಇದ್ದಾರೆ ಎಂದು ದೂರಿದರು.

ಬಣ ರಾಜಕೀಯ ಮತ್ತೆ ಮುನ್ನೆಲೆಗೆ: ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಪರಂ

ಸಂಪುಟ ವಿಸ್ತರಣೆಯಾದ್ರೆ ಸ್ಫೋಟ:

ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು. ಯಾರು ಆಗಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಬೇಗನೆ ನೇಮಕವಾಗಲಿ ಅಂತ ನಾನೂ ಹೇಳುತ್ತೇನೆ. ಹಾಗಂತ ಯಾರು ನೇಮಕವಾಗಬೇಕು ಅಂತ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ಇದು ದೊಡ್ಡ ವಿಚಾರವಲ್ಲ, ಇದಕ್ಕಿಂತ ದೊಡ್ಡ ವಿಚಾರ ಮಂತ್ರಿ ಮಂಡಲದ್ದು. ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಯಾದರೆ ಸ್ಫೋಟವಾಗುತ್ತದೆ. ಮಂತ್ರಿ ಸ್ಥಾನ ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್‌ ಹೇಳಿದ್ದಾರೆ. ಮುಂದೆ ನೀವೆ ನೋಡಿ ಎಂದು ಹೊಸ ಬಾಂಬ್‌ ಎಸೆದರು.

ಸಿದ್ದರಾಮಯ್ಯಗೆ ಎದುರಾಯ್ತು ಭೂ ಕಂಟಕ..!

ಹುಬ್ಬಳ್ಳಿಗರ ಕಷ್ಟ ದೂರವಾಗುತ್ತಾ?

ಹುಬ್ಬಳ್ಳಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಲ್ಲಿನ ಮಹದಾಯಿ ಸಮಸ್ಯೆ ಬಗ್ಗೆ ಮಾತನಾಡೋದು ಬಿಟ್ಟು ಪಾಕಿಸ್ತಾನದ ಬಗ್ಗೆ ಮಾತಾಡುತ್ತಾರೆ. ಇದರಿಂದ ಹುಬ್ಬಳ್ಳಿ ಜನರ ಕಷ್ಟದೂರಾಗುತ್ತದೆಯೇ? ಪ್ರವಾಹ ಬಂದಾಗ ರಾಜ್ಯದ ಕಡೆ ಕಣ್ಣೆತ್ತಿ ನೋಡದ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಈಗ ಏಕೆ ಬಂದಿದ್ದಾರೆ? ಬಂದವರು ಜನರ ಸಮಸ್ಯೆಗೆ ಪರಿಹಾರ ಹೇಳಿದ್ದಾರಾ? ದೇಶದ 13 ರಾಜ್ಯಗಳು ಸಿಎಎ, ಎನ್‌ಆರ್‌ಸಿ ಜಾರಿ ಮಾಡಲ್ಲ ಎಂದು ಹೇಳುತ್ತಿವೆ. ಈ ಎಲ್ಲ ರಾಜ್ಯ ಸರ್ಕಾರಗಳನ್ನು ಕೇಂದ್ರ ಸರ್ಕಾರ ವಜಾ ಮಾಡುತ್ತಾ? ಎಂದು ಪ್ರಶ್ನಿಸಿದರು.

'ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿದೆ'..!

ನಿತೀಶ್‌ ಕುಮಾರ್‌ ವಿರುದ್ಧ ಕ್ರಮವಿದೆಯೇ?

ಸಿಎಎ ಜಾರಿ ಮಾಡಿ ಎಂದು ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡುವುದು ಅಸಂವಿಧಾನಿಕ. ರಾಜ್ಯಪಾಲರು ಚುನಾಯಿತ ಸರ್ಕಾರದ ಮುಖ್ಯಸ್ಥರಲ್ಲ, ಅವರ ಮಾತನ್ನು ಸರ್ಕಾರ ಕೇಳಲೇಬೇಕೆಂಬ ನಿಯಮವೂ ಇಲ್ಲ. ಬಿಹಾರದಲ್ಲಿ ಬಿಜೆಪಿಯ ಸಮ್ಮಿಶ್ರ ಸರ್ಕಾರವಿದ್ದರೂ ಸಿಎಎ, ಎನ್‌ಆರ್‌ಸಿ ಜಾರಿ ಮಾಡಲ್ಲ ಎಂದು ಅಲ್ಲಿನ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ ಬಿಜೆಪಿಯವರು ಅಲ್ಲಿನ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆಯಲಿ ನೋಡೋಣ. ಬಿಜೆಪಿ ಸರ್ಕಾರ ಇರುವಲ್ಲೇ ಈ ಕಾಯ್ದೆ ಜಾರಿಯಾಗುತ್ತಿಲ್ಲ, ಬೇರೆ ಕಡೆಯದು ಆಮೇಲಿನ ಮಾತು ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios