ಆನೇಕಲ್(ಜ.19): ಸಿದ್ದರಾಮಯ್ಯ ಓರ್ವ ಹುಚ್ಚ ಎಂಬ ಈಶ್ವರಪ್ಪ ಹೇಳಿಕೆಗೆ ಕಾಂಗ್ರೇಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ. ಆನೇಕಲ್‌ನಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಶ್ವರಪ್ಪಗೆ ಮೆದುಳೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಹಿಂಸೆಯಿಂದ ತಪ್ಪಿಸಿಕೊಳ್ಳಲು ಈಗಲ್ಟನ್ ರೆಸಾರ್ಟ್ ಗೆ ಹೋಗಿದ್ದೇವೆ ಎಂದ ಸಿದ್ದರಾಮಯ್ಯ, ಈಶ್ವರಪ್ಪ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಹಾಗಾಗಿಯೇ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತಾ ತಿರುಗೇಟು ನೀಡಿದರು.

"

ಈಶ್ವರಪ್ಪ ಅವರಿಗೆ ಸಂಸ್ಕೃತಿ ಗೊತ್ತಿಲ್ಲ, ಸಮಾಜದಲ್ಲಿ ವರ್ತಿಸುವ ಬಗೆ ಅವರಿಗೆ ಪಾಠ ಹೇಳಿ ಕೊಡಬೇಕಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.