ಇಂಗ್ಲಿಷ್‌ನಲ್ಲಿ ಟಸ್ಸು ಪುಸ್ಸು ಎಂದ ಅಧಿಕಾರಿಗಳಿಗೆ ಮಾಜಿ ಸಿಎಂ ಕ್ಲಾಸ್!

ಕನ್ನಡ ಮಾತನಾಡದ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

Former CM Siddaramaiah Angry on Officials Over Kannada Language

ಪಟ್ಟದಕಲ್ಲು(ಜ.05): ಕನ್ನಡ ಮಾತನಾಡದ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

ಐತಿಹಾಸಿಕ ನಗರ ಪಟ್ಟದಕಲ್ಲಿನಲ್ಲಿ ಪ್ರವಾಸಿ ತಾಣ ವೀಕ್ಷಣೆ ವೇಳೆ ಘಟನೆ ನಡೆದಿದ್ದು, ಇಂಗ್ಲಿಷ್‌ನಲ್ಲಿ ಸ್ಥಳದ ಕುರಿತು ಮಾಹಿತಿ ನೀಡಲು ಮುಂದಾದ ಅಧಿಕಾರಿಗಳನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಪುರಾತತ್ವ ಇಲಾಖೆ ಅಧಿಖಾರಿಗಳಿಗೆ ಇಂಗ್ಲಿಷ್​ನಲ್ಲಿಯೇ ಚಾಟಿ ಬೀಸಿದ ಸಿದ್ದರಾಮಯ್ಯ, ನಿಮಗೆ ಕನ್ನಡ ಗೊತ್ತಿಲ್ವಾ? ನೀವಿಬ್ಬರೂ ಇನ್ನೂ ಏಕೆ ಕನ್ನಡ ಕಲಿತಿಲ್ಲವೆಂದು  ಹರಿಹಾಯ್ದರು.

ಸಿದ್ದರಾಮಯ್ಯ ಪ್ರಶ್ನೆಗಳಿಗೆ ತಡಬಡಾಯಿಸಿದ ಅಧಿಕಾರಿಗಳು ‘ವಿ ವಿಲ್ ಟ್ರೈ’ ಎಂದಾಗ ನೀವು ಕನ್ನಡ ಕಲಿಯಲೇಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.

Latest Videos
Follow Us:
Download App:
  • android
  • ios