ಜಮಖಂಡಿಯಲ್ಲಿ ಸಿದ್ದು ಅಬ್ಬರ: ಹೆಲ್ಮೆಟ್ ಇಲ್ಲದೇ ಹೆಬ್ಬಾಳ್ಕರ್ ಬೈಕ್ ಸವಾರಿ!
ಜಮಂಖಡಿಯಲ್ಲಿ ಶರುವಾಯ್ತು ಕಾಂಗ್ರೆಸ್ ಅಬ್ಬರದ ಪ್ರಚಾರ! ಜಮಖಂಡಿಯಲ್ಲೇ ಬೀಡು ಬಿಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ! ಬೈಕ್ ರ್ಯಾಲಿಯಲ್ಲಿ ಹೆಲ್ಮೆಟ್ ಧರಿಸದೇ ಹೆಬ್ಬಾಳ್ಕರ್ ಬೈಕ್ ಸವಾರಿ! ಸಿದ್ದು ನ್ಯಾಮಗೌಡರನ್ನು ನೆನೆದ ಗದ್ಗದಿತರಾದ ಸಿದ್ದರಾಮಯ್ಯ! ಆನಂದ ನ್ಯಾಮಗೌಡಗೆ ಮತ ನೀಡುವಂತೆ ಸಿದ್ದರಾಮಯ್ಯ ಮನವಿ
ಜಮಖಂಡಿ(ಅ.27): ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಉಪಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಮತ್ತಷ್ಟು ರಂಗೇರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ಅಖಾಡಕ್ಕೀಳಿದ ಮೇಲೆ ಕಾಂಗ್ರೆಸ್ ನಲ್ಲಿ ಮತ್ತಷ್ಟು ಹುರುಪು ಬಂದಿದೆ.
ಕಾಂಗ್ರೆಸ್ ಜಮಖಂಡಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಪಣತೊಟ್ಟಿದ್ದು,ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಜಮಖಂಡಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಬೆಳಿಗ್ಗೆ ಪ್ರಚಾರಕ್ಕೆಂದು ಆಗಮಿಸಿರುವ ಸಚಿವ ಜಮೀರ್ ಅಹ್ಮದ್ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಗೆಟ್ಟ್ ಹೌಸ್ ಗೆ ಭೇಟಿ ನೀಡಿ ಪ್ರಚಾರಕ್ಕೆ ತೆರಳಿದರು.
ಬಳಿಕ ಸನಾಳ ಗ್ರಾಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಬೈಕ್ ರ್ಯಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಬೈಕ್ ರ್ಯಾಲಿ ಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೈಕ್ ಹಿಂಬದಿಯಲ್ಲಿ ಹೆಲ್ಮೆಟ್ ಧರಿಸದೇ ಸವಾರಿ ನಡೆಸಿ ಸಾರಿಗೆ ನಿಯಮ ಉಲ್ಲಂಘಿಸಿದ ಘಟನೆಯೂ ನಡೆಯಿತು.
"
ಬಳಿಕ ಕುಂಬಾರ ಹಳ್ಳದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, ಸಿದ್ದು ನ್ಯಾಮಗೌಡ ಒಬ್ಬ ಅಜಾತ ಶತ್ರು, ಅವರು ಯಾರೊಂದಿಗೂ ಜಗಳ ಮಾಡ್ತಿರಲಿಲ್ಲ.ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅನುದಾನ ಕೇಳುತ್ತಿದ್ದರು. ಹಿರೇಪಡಸಲಗಿ ಬ್ಯಾರೇಜ್ ಎತ್ತಿರಿಸುವ ಸಂಬಂಧ ಅನುದಾನ ಕೇಳಿದ್ದರು. ನಾನು 10 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಆನಂದ ನ್ಯಾಮಗೌಡ ಗೆಲ್ಲಿಸುವ ಮೂಲಕ ಬಿಜೆಪಿಗೆ ಬುದ್ಧಿ ಕಲಿಸಬೇಕಾಗಿದ್ದು, ಕುಂಬಾರಹಳ್ಳ ಗ್ರಾಮದವರು ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಬೇಕು ಎಂದು ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.
ಇದೇ ವೇಳೇ ಶ್ರೀರಾಮುಲು ಮುಖ್ಯಮಂತ್ರಿ ಆಗ್ತಾರೆ ಎನ್ನುವ ಮಾಜಿ ಸಚಿವ ವಿ, ಸೋಮಣ್ಣ ಹೇಳಿಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯಲ್ಲೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದೆಂಬ ಷಡ್ಯಂತ್ರ ನಡೆಯುತ್ತಿದೆ ಎಂದು ಹರಿಹಾಯ್ದರು.