Asianet Suvarna News Asianet Suvarna News

ಮೂರು ಮನೆಗಳಿಗೆ ಬೆಂಕಿ; ಪ್ರಾಣ ಲೆಕ್ಕಿಸದೇ ಇಬ್ಬರ ಜೀವ ಉಳಿಸಿದ ಮಹಿಳೆಯರು!

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಗುಡಿಸಲುಗಳಿಂದ ಮಹಿಳೆಯರು ಪ್ರಾಣ ಲೆಕ್ಕಿಸದೇ ಮನೆಯೊಳಗೆ ಸಿಲುಕಿದ್ದ ಒಬ್ಬ ಪುರುಷ ಮತ್ತು ಮಗುವನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಮ್ಮನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.

Fire accident 3 houses Women who saved two lives regardless of their lives at chikkamagaluru rav
Author
First Published Nov 2, 2023, 3:40 PM IST

ಚಿಕ್ಕಮಗಳೂರು (ನ.2): ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಗುಡಿಸಲುಗಳಿಂದ ಮಹಿಳೆಯರು ಪ್ರಾಣ ಲೆಕ್ಕಿಸದೇ ಮನೆಯೊಳಗೆ ಸಿಲುಕಿದ್ದ ಒಬ್ಬ ಪುರುಷ ಮತ್ತು ಮಗುವನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಮ್ಮನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.

6 ವರ್ಷದ ಮಗು, ಮನೆಯಲ್ಲಿದ್ದ ಮಧ್ಯ ವಯಸ್ಕನನ್ನ ರಕ್ಷಿಸಿದ ಮಹಿಳೆಯರು. ಗ್ರಾಮದ ಬಹುತೇಕ ಪುರುಷರು ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿದ್ದರು. ಈ ವೇಳೆ ಶಶಿ, ಕಲ್ಲೇಶ್, ಹನುಮಂತ ಎಂಬುವರಿಗೆ ಸೇರಿದ್ದ ಮನೆಗಳಿಗೆ ಬೆಂಕಿ ಬಿದ್ದಿದೆ. ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಬೆಂಕಿ. ಬೆಂಕಿ ಬಿದ್ದ ವೇಳೆ ಮನೆಯೊಳಗೆ ಕುಡಿದ ಮಲಗಿದ್ದ ಹನುಮಂತ. ಜತೆಗೆ ಕಲ್ಲೇಶ್ ಮನೆಯಲ್ಲಿ 6 ವರ್ಷದ ಮಗು ಮಲಗಿತ್ತು.

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಗಂಗಮ್ಮನಗುಡಿ ಸ್ಪಾಂಜ್‌ ಫ್ಯಾಕ್ಟರಿಗೆ ಬೆಂಕಿ

ಕ್ಷಣಮಾತ್ರದಲ್ಲಿ ಧಗಧಗ ಉರಿದ ಬೆಂಕಿ ನಂದಿಸಲು ಹರಸಾಹಸ. ಈ ವೇಳೆ ಮಹಿಳೆಯರು ಪ್ರಾಣ ಲೆಕ್ಕಿಸದೇ ಮನೆಯೊಳಗೆ ನುಗ್ಗಿ ಹನಮಂತ ಮತ್ತು ಮಗುವನ್ನು ಹೊರಗೆ ತಂದಿದ್ದಾರೆ. ಮನೆಗಳಿಗೆ ಬೆಂಕಿ ಬಿದ್ದ ಘಟನೆ ತಿಳಿಯುತ್ತಿದ್ದಂತೆ ಅರ್ಧಕ್ಕೆ ಅಂತ್ಯ ಸಂಸ್ಕಾರ ಬಿಟ್ಟು ಬಂದ ಗ್ರಾಮಸ್ಥರು. ಗ್ರಾಮದ ಹೆಣ್ಣುಮಕ್ಕಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಶಶಿ, ಕಲ್ಲೇಶ್ ಮನೆ ಸಂಪೂರ್ಣ ಹಾನಿ, ಹನುಮಂತನ ಮನೆ ಭಾಗಶಃ  ನಾಶವಾಗಿದೆ.

Follow Us:
Download App:
  • android
  • ios