Asianet Suvarna News Asianet Suvarna News

ರಾಜ್ಯ ಕೋಆಪರೇಟಿವ್ ಸೊಸೈಟಿಯಲ್ಲಿ ಹಣ ದುರುಪಯೋಗ: ಪ್ರಭಾರ ಸಿಇಓ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌

ಸೊಸೈಟಿಯಲ್ಲಿ ಎಫ್ ಡಿ ರೂಪದಲ್ಲಿದ್ದ 19.34 ಕೋಟಿ ರೂ. ಹಣ ಅಕ್ರಮ ವರ್ಗಾವಣೆಯಾಗಿದೆ . ಪತಿ ಸೇರಿ ಇನ್ನಿತರ ಖಾಸಗಿ ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ನಂತರ 101 ಎಫ್ ಡಿ ಖಾತೆಗಳ ನಕಲಿ ಠೇವಣಿ ಬಾಂಡ್‌ಗಳನ್ನ ಸೃಷ್ಟಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆಯ ಮುಚ್ಚಿಡಲು ನಕಲಿ ಖಾತೆಗಳನ್ನ ಸೃಷ್ಟಿ ಮಾಡಿಲಾಗಿದೆ. ಅಧ್ಯಕ್ಷರ ಸಹಿಯನ್ನೂ ಕೂಡ ನಕಲಿ‌ ಮಾಡಲಾಗಿದೆ ಎಂದು ಆರೋಪಿಸಿದ ಸೊಸೈಟಿ ಅಧ್ಯಕ್ಷ ರಾಜು 

FIR against 6 people including CEO of misuse of money in State Cooperative Society grg
Author
First Published Oct 18, 2024, 7:40 PM IST | Last Updated Oct 18, 2024, 7:40 PM IST

ಬೆಂಗಳೂರು(ಅ.18):  ರಾಜ್ಯ ಕೋಆಪರೇಟಿವ್ ಸೊಸೈಟಿ ಮಹಾ ಮಂಡಲದಲ್ಲಿ ಹಣ ದುರುಪಯೋಗ ಆರೋಪದ ಹಿನ್ನಲೆಯಲ್ಲಿ ಸೊಸೈಟಿಯ ಮಾಜಿ ಸಿಇಓ ಸೇರಿ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೊಸೈಟಿ ಅಧ್ಯಕ್ಷ ರಾಜು ಎಂಬುವರ ದೂರರಿನ ಹಿನ್ನೆಲೆಯಲ್ಲಿ ಪ್ರಭಾರ ಸಿಇಓ ಆಶಾಲತಾ, ಆಕೆಯ ಪತಿ ಸೋಮಶೇಖರ್ ಸೇರಿ ಆರು ಜನರ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

2017 ರಿಂದ 2023 ರವರೆಗೆ 19.34ಕೋಟಿ ರೂ. ದುರುಪಯೋಗವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ರಾಜು ಆರೋಪಿಸಿದ್ದಾರೆ. ಸೊಸೈಟಿಯಲ್ಲಿ ಎಫ್ ಡಿ ರೂಪದಲ್ಲಿದ್ದ 19.34 ಕೋಟಿ ರೂ. ಹಣ ಅಕ್ರಮ ವರ್ಗಾವಣೆಯಾಗಿದೆ . ಪತಿ ಸೇರಿ ಇನ್ನಿತರ ಖಾಸಗಿ ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ನಂತರ 101 ಎಫ್ ಡಿ ಖಾತೆಗಳ ನಕಲಿ ಠೇವಣಿ ಬಾಂಡ್‌ಗಳನ್ನ ಸೃಷ್ಟಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆಯ ಮುಚ್ಚಿಡಲು ನಕಲಿ ಖಾತೆಗಳನ್ನ ಸೃಷ್ಟಿ ಮಾಡಿಲಾಗಿದೆ. ಅಧ್ಯಕ್ಷರ ಸಹಿಯನ್ನೂ ಕೂಡ ನಕಲಿ‌ ಮಾಡಲಾಗಿದೆ ಎಂದು ಪ್ರಭಾರ ಸಿಇಓ ಆಶಾಲತಳ ವಿರುದ್ಧ ಗಂಭೀರವಾಗಿ ಆರೋಪಿಸಲಾಗಿದೆ. 

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್‌ಐಆರ್‌

ಸದ್ಯ ಘಟನೆ ಸಂಬಂಧಿಸಿದಂತೆ ನಂದಿನಿ  ಲೇಔಟ್ ಠಾಣೆಗೆ ಸೊಸೈಟಿ ಅಧ್ಯಕ್ಷ ರಾಜು ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.  

Latest Videos
Follow Us:
Download App:
  • android
  • ios