Asianet Suvarna News Asianet Suvarna News

Pravasi Bharatiya Divas: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಿಸಲು ಉತ್ಸವ: ರಾಮ್‌ಪ್ರಸಾದ್‌

ಪ್ರವಾಸೋದ್ಯಮ ಉತ್ತೇಜಿಸಲು ದಕ್ಷಿಣ ಭಾರತ ಮಟ್ಟದಲ್ಲಿ ಉತ್ಸವಗಳನ್ನು ಹಮ್ಮಿಕೊಂಡು ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಹ್ವಾನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

Festival to attract investment in tourism sector says Ramprasad rav
Author
First Published Jan 10, 2023, 10:39 PM IST

ಬೆಂಗಳೂರು (ಜ.10) : ಪ್ರವಾಸೋದ್ಯಮ ಉತ್ತೇಜಿಸಲು ದಕ್ಷಿಣ ಭಾರತ ಮಟ್ಟದಲ್ಲಿ ಉತ್ಸವಗಳನ್ನು ಹಮ್ಮಿಕೊಂಡು ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಹ್ವಾನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ(Department of Tourism) ಮತ್ತು ಆರ್‌ಸಿ ಕಾಲೇಜು(RC Collage) ಸಹಯೋಗದಲ್ಲಿ ಸೋಮವಾರ ಎಫ್‌ಕೆಸಿಸಿಐ(FKCCI)ನಲ್ಲಿ ಹಮ್ಮಿಕೊಂಡಿದ್ದ ‘ಪ್ರವಾಸಿ ಭಾರತೀಯ ದಿವಸ್‌’(Tourist Indian Day) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯ ಏಕಸ್ವಾಮ್ಯತೆ ಹೊಂದಿದೆ. ಇವುಗಳ ಬೆಳವಣಿಗೆಯಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ, ಆರ್ಥಿಕತೆ ವೃದ್ಧಿಯಾಗುತ್ತದೆ. ಈ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳುವ ಆಗತ್ಯತೆ ಹೆಚ್ಚಿದೆ ಎಂದರು.

ಜಗತ್ತಿನ ಅಭಿವೃದ್ಧಿಯ ಇಂಜಿನ್‌ ಆಗುವ ಶಕ್ತಿ ಭಾರತಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

ಸದ್ಯ ಇಂಜಿನಿಯರಿಂಗ್‌ ಕ್ಷೇತ್ರಕ್ಕಿಂತಲೂ ವಾಣಿಜ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಯುವಜನತೆ ಕಲಿಕೆಗೆ ಮುಂದಾಗಬೇಕು. 18 ವರ್ಷ ತುಂಬಿದ ಬಳಿಕ ಸ್ವಾವಲಂಬಿಗಳಾಗಿ ಬದುಕು ರೂಪಿಸುವ ಕಲಿಕೆಯತ್ತ ಗಮನ ಹರಿಸಬೇಕು. ಸಮಯ ಎಲ್ಲರಿಗೂ ಒಂದೇ ಆಗಿದ್ದು, ಅದನ್ನು ಬಳಸಿಕೊಳ್ಳುವವರು ಸಾಧನೆ ಮಾಡುತ್ತಾರೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಗುರುಕಿರಣ್‌(Music Director Gurukiran) ಮಾತನಾಡಿ, ನಮ್ಮ ದೇಶ ಶ್ರೀಮಂತ ಸಂಸ್ಕೃತಿಯಿಂದ ತುಂಬಿದೆ. ರಾಜ್ಯದಲ್ಲಿ ಸಾಕಷ್ಟುಪಾರಂಪರಿಕ, ಐತಿಹಾಸಿಕ, ಮನಮೋಹಕ ಸ್ಥಳಗಳಿವೆ. ಕಲೆ, ಸಂಸ್ಕೃತಿಗಳಿವೆ. ಇವೆಲ್ಲಾ ಪೂರ್ವಜರು, ಪ್ರಕೃತಿ ನೀಡಿದ ಕೊಡುಗೆಯಾಗಿದೆ. ಇವುಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವಜನತೆ ಉನ್ನತಿ ಸಾಧಿಸಬೇಕು. ಮೂಲಸೌಕರ್ಯಕ್ಕೆ ಸರ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ವಿಶ್ವ ಅಂತರ್ಜಾಲದಿಂದ, ನಮ್ಮ ಮನಸ್ಸು ಭಾರತದೊಂದಿಗೆ ಕನೆಕ್ಟ್; ಅನಿವಾಸಿ ಭಾರತೀಯರನ್ನುದ್ದೇಶಿ ಮೋದಿ ಭಾಷಣ!

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಜಿ.ಕೆ.ಶೆಟ್ಟಿ, ಎಫ್‌ಕೆಸಿಸಿಐ ಅಧ್ಯಕ್ಷ ಗೋಪಾಲರೆಡ್ಡಿ, ಉಪಾಧ್ಯಕ್ಷ ಬಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios