ರಾಜ್ಯ ಸರ್ಕಾರದ ಇಬ್ಬಗೆ ನೀತಿ: ದಸರಾ ಹಬ್ಬದಂದೇ ಪ್ರತಿಭಟನೆಗೆ ಮುಂದಾದ ರೈತರು
ರೈತ ಸಂಘಟನೆ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯವ್ಯಾಪಿ ಪತ್ರಿಭಟನೆ ನಡೆಯಲಿದೆ. ಸರ್ಕಾರದ ಹಲವು ನಿಲುವುಗಳನ್ನ ವಿರೋಧಿಸಿ ರಸ್ತೆ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ. ರೈತರಿಗೊಂದು ನ್ಯಾಯ ಕೈಗಾರಿಕೆಗಳಿಗೊಂದು ನ್ಯಾಯ ಎಂದು ರೈತರು ಆರೋಪಿಸಿದ್ದಾರೆ.

ಬೆಂಗಳೂರು(ಅ.24): ರಾಜ್ಯ ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ದಸರಾ ಹಬ್ಬದಂದೇ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದಾರೆ. ಹೌದು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಇಂದು(ಮಂಗಳವಾರ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ರೈತ ಸಂಘಟನೆ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯವ್ಯಾಪಿ ಪತ್ರಿಭಟನೆ ನಡೆಯಲಿದೆ. ಸರ್ಕಾರದ ಹಲವು ನಿಲುವುಗಳನ್ನ ವಿರೋಧಿಸಿ ರಸ್ತೆ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ. ರೈತರಿಗೊಂದು ನ್ಯಾಯ ಕೈಗಾರಿಕೆಗಳಿಗೊಂದು ನ್ಯಾಯ ಎಂದು ರೈತರು ಆರೋಪಿಸಿದ್ದಾರೆ.
Tumakur : ಲೋಡ್‌ಶೆಡ್ಡಿಂಗ್ ವಿರೋಧಿಸಿ ರೈತರ ಪ್ರತಿಭಟನೆ
ರೈತರಿಗೆ 5 ಗಂಟೆ ವಿದ್ಯುತ್ ಕೈಗಾರಿಕೆಗಳಿಗೆ 10 ಗಂಟೆ ವಿದ್ಯುತ್ ಸರ್ಕಾರ ನೀಡುತ್ತಿದೆ. ಬರಗಾಲ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸೋದಾಗಿ ಸರ್ಕಾರ ಹೇಳಿತ್ತು. ಆದರೆ, ಇದೀಗ ಅದ್ದೂರಿ ದಸರಾ ಆಚರಿಸ್ತಿದೆ. ಬರಗಾಲದಲ್ಲೂ ಮೋಜಿನ ದಸರಾ ಬೇಕಿತ್ತಾ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ರಾಜ್ಯ ವ್ಯಾಪಿ ರಸ್ತೆತೆಡೆದು ಪ್ರತಿಭಟನೆ ಮಾಡಲು ತಿರ್ಮಾನ ಮಾಡಲಾಗಿದೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಬೇಡಿಕೆಗಳು:
* ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರು ನಿಲ್ಲಿಸಬೇಕು
* ಬೆಳಗಿನ ಸಮಯದಲ್ಲೇ ರೈತರಿಗೆ ಕನಿಷ್ಠ 10 ಗಂಟೆ ವಿದ್ಯುತ್ ಕೊಡಬೇಕು
* ಕಬ್ಬಿನ ಎಫ್ ಆರ್ ಪಿ ದರ ಹೆಚ್ಚಳಕ್ಕೆ ಆಗ್ರಹ
* ಬರಪೀಡಿತ 225 ತಾಲ್ಲೂಕಿನಲ್ಲಿ ಶೀಘ್ರವಾಗಿ ರೈತರಿಗೆ ಪರಿಹಾರ ನೀಡಬೇಕು
* ನೀರಿಲ್ಲದೇ ಬೆಳೆ ಬೆಳೆಯದೇ ಇರುವ ರೈತರಿಗೂ ಬೆಳೆ ಪರಿಹಾರ ನೀಡಬೇಕು