Asianet Suvarna News Asianet Suvarna News

ಮಹದಾಯಿ ರೈತರ ಕೂಗಿಗೆ ರಾಜ್ಯಪಾಲ ಡೋಂಟ್ ಕೇರ್: ಗುಜರಾತಿ ಫಂಕ್ಷನ್‌ನಲ್ಲಿ ಬ್ಯುಸಿ

ಮಹದಾಯಿ ಹೋರಾಟಗಾರರ ಭೇಟಿ ಮಾಡದ ರಾಜ್ಯಪಾಲರು| ಗುಜರಾತಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ| ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ನೆಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗಿ| ಮಹದಾಯಿ ವಿಚಾರವಾಗಿ ರೈತರು ರಾಜ್ಯಪಾಲರನ್ನು ಭೇಟಿಗೆ ಕಾಲವಕಾಶ ಕೇಳಿದ್ರು|ಹೋರಾಟಗಾರರನ್ನನ್ನು ಕ್ಯಾರೆ ಅನ್ನದ ರಾಜ್ಯಪಾಲರು ಭೇಟಿ ಮಾಡಲು ಅವಕಾಶ ನೀಡಲಿಲ್ಲ| ಬದಲಿಗೆ ಗುಜರಾತಿ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ರಾಜ್ಯಪಾಲರು.

farmers Protest For  mahadayi But governor Vajubhai Vala Busy In gujarati function at Bengaluru
Author
Bengaluru, First Published Oct 19, 2019, 8:32 PM IST

ಬೆಂಗಳೂರು, [ಅ.19]:  ಮಹದಾಯಿ ನದಿ ನೀರು ಯೋಜನೆ ಸಂಬಂಧ ಉತ್ತರ ಕರ್ನಾಟಕದ ನೂರಾರು ರೈತರು ಕಳೆದ 3 ದಿನಗಳಿಂದ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಹೋರಾಟ ಇಂದು [ಶನಿವಾರ] ಅಂತ್ಯವಾಗಿದೆ.

ಆದ್ರೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸ್ವೀಕರಿಸುವ ರೈತರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಅಷ್ಟೇ ಅಲ್ಲದೇ ರಾಜಭವನಕ್ಕೂ ರೈತರನ್ನು ಬಿಟ್ಟುಕೊಳ್ಳದೇ ಗೇಟ್ ನಲ್ಲಿಯೇ ಅಧಿಕಾರಿಗಳು ಮನವಿ ಪತ್ರ ತೆಗೆದುಕೊಂಡು ಕಳುಹಿಸಿದರು.

ಮಹದಾಯಿ ಹೋರಾಟ: ಅದೇ ಗೊಳ್ಳು ಮಾತುಗಳನ್ನಾಡಲು ಹೋದ ಕಾರಜೋಳಗೆ ಮುಖಭಂಗ

ಮಳೆ, ಚಳಿ ಎನ್ನದೇ ಮನೆ-ಮಠ ಬಿಟ್ಟು ಹೋರಾಟ ಮಾಡುತ್ತಿರುವ ಅನ್ನದಾತರ ಕೂಗು ಕೇಳಿಸಿಕೊಳ್ಳದೇ ನಮ್ಮ ರಾಜ್ಯಪಾಲರಾದ ವಾಜುಭಾಯಿ ವಾಲಾ ಅವರು ಬೆಂಗಳೂರಿನಲ್ಲಿ ಇದ್ದರೂ ಸಹ ಗುಜರಾತಿಯ ಖಾಸಗಿ ಕಾರ್ಯಕ್ರಮದಲ್ಲಿ ಬ್ಯುಸಿಯಗಿದ್ದರು.

ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ನೆಡೆಯುತ್ತಿದ್ದ ಗುಜರಾತಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಹದಾಯಿ ವಿಚಾರವಾಗಿ ರೈತರು ರಾಜ್ಯಪಾಲರನ್ನು ಭೇಟಿಗೆ ಕಾಲವಕಾಶ ಕೇಳಿದ್ರು.

ಮೂರನೇ ದಿನಕ್ಕೆ ಕಾಲಿಟ್ಟ ಮಹದಾಯಿ ಕಿಚ್ಚು; ಸರ್ಕಾರಕ್ಕೆ ರೈತರಿಂದ ಎಚ್ಚರಿಕೆ!

ಜೊತೆಗೆ ರಾಜ್ಯಪಾಲರನ್ನು ಭೇಟಿ ಮಾಡಲು ಕಳೆದ ಎರಡು ದಿನಗಳಿಂದ ರಾಜಭವನಕ್ಕೆ ಅಲೆದರು.  ಆದ್ರೆ ಹೋರಾಟಗಾರರನ್ನು ಕ್ಯಾರೆ ಅನ್ನದ ರಾಜ್ಯಪಾಲರು ಭೇಟಿ ಮಾಡಲು ಅವಕಾಶ ನೀಡಲಿಲ್ಲ. 

ಮಹದಾಯಿಗಾಗಿ ರಾಜ್ಯದ ರೈತರು ನಡೆಸುತ್ತಿರುವ ಹೋರಾಟ ಇವತ್ತಿನದಲ್ಲ. ವರ್ಷಗಳಿಂದಲೂ ಧಾರವಾಡ ಸೇರಿದಂತೆ ಕೆಲವಡೆ ಇವರು ಪ್ರತಿಭಟನೆ, ಹೋರಾಟ ನಡೆಸುತ್ತಲೇ ಬಂದಿದ್ಧಾರೆ. 

ಈಗ ಇದಕ್ಕೆ ಒಂದು ತಾರ್ಕಿಕ ಅಂತ್ಯ ಕೊಡಲು ರಾಜಧಾನಿಯ ಅಖಾಡಕ್ಕೆ ಧುಮುಕಿದ್ದರು. ಮಹದಾಯಿ ನದಿ ನೀರು ಹಂಚಿಕೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂಬುದು ಈಗ ರೈತರ ಒತ್ತಾಯವಾಗಿದೆ. 

ಸರ್ಕಾರಗಳು ಯಾವುದೇ ಕ್ರಮ ಕೖಗೊಳ್ಳದ ಹಿನ್ನೆಲೆಯಲ್ಲಿ ರೈತರು ರಾಜ್ಯಪಾಲರ ಮೊರೆ ಹೋಗಿದ್ದರು. ಆದ್ರೆ ರಾಜ್ಯಪಾಲ ವಾಜುಭಾಯಿ ವಾಲ ಸಹ ರೈತರ ಅಳಲು ಆಲಿಸಲಿಲ್ಲ. ಹಾಗಾದ್ರೆ ರೈತರ ಗೋಳು ಕೇಳೋರ್ಯಾರು?.

Follow Us:
Download App:
  • android
  • ios