ಬೆಳಗಾವಿಯ ಸುವರ್ಣ ಸೌಧ ಮುಂದೆ ರೖತರ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.  ಅಷ್ಟಕ್ಕೂ ಬೆಳಗಾವಿಯಲ್ಲಿ ರೈತರು ಉಗ್ರ ಪ್ರತಿಭಟನೆ ಕೈಗೊಂಡಿದ್ದಾದರೂ ಯಾಕೆ?  ಅನ್ನದಾತರ ಪ್ರತಿಭಟನೆಗೆ ಕಾರಣವಾದರೂ ಏನು? ಇಲ್ಲಿದೆ.

ಬೆಳಗಾವಿ, [ನ.18] ಮಾತು ತಪ್ಪಿದ ಸಿಎಂ ಎಚ್. ಡಿ. ಕುಮಾರಸ್ವಾಮಿ ಕುಮಾರಸ್ವಾಮಿ ವಿರುದ್ಧ ಅನ್ನದಾತರು ಸಿಡಿದೆದ್ದಾರೆ. ಬೆಳಗಾವಿಯ ಸುವರ್ಣ ಸೌಧ ಮುಂದೆ ರೖತರ ಪ್ರತಿಭಟನೆ ವಿಕೋಪಕ್ಕೆ ತಿರುಗಿರುವುದಕ್ಕೆ ಒಂದು ಅಸಲಿ ಕಾರಣ ಇದೆ. 

ಅದೇನೆಂದೆ ರೈತರ ಸಮಸ್ಯೆ ಪರಿಹರಿಸಲು ಹೇಳಿ ಕುಮಾರಸ್ವಾಮಿ ಕೈಕೊಟ್ಟಿದ್ದಾರೆ. ಇದ್ರಿಂದ ರೈತರ ಕೋಪ ನೆತ್ತಿಗೇರಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತರು ಬೆಳಗಾವಿ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡ್ತಿದ್ರು. 

"

'ಗಲಾಟೆ ಮಾಡುತ್ತಿರುವ ಕಬ್ಬು ಬೆಳೆಗಾರರು ರೈತರಲ್ಲ, ಅವ್ರು ಗೂಂಡಾಗಳು'

ನವೆಂಬರ್​​​​​ 19ಕ್ಕೆ ಬೆಳಗಾವಿ ಪ್ರವಾಸ ಮಾಡಿ, ಸಭೆ ನಡೆಸುವ ಕುಮಾರಸ್ವಾಮಿ ಭರವಸೆ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟಿದ್ರು. ಇದೀಗ ನವೆಂಬರ್​​ 20ಕ್ಕೆ ರೈತರನ್ನೆ ಬೆಂಗಳೂರಿಗೆ ಬರುವಂತೆ ತಿಳಿಸಿ, ಸಿಎಂ ಪ್ರವಾಸವನ್ನ ರದ್ದು ಮಾಡಿದ್ದಾರೆ.

 ನಾಳೆ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದಿನ ಬೆಳಗಾವಿ ಪ್ರವಾಸವನ್ನ ರದ್ದು ಪಡಿಸಿದ್ದಾರೆ. ಇದ್ರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ಮುಂದುವರೆಸಲು ಬಾಗಲಕೋಟೆ, ಬೆಳಗಾವಿ ರೈತರು ಕುರಿತು ತೀರ್ಮಾನಿಸಿದ್ದಾರೆ. 

"