ಬೆಳೆ ಮಾರಲಾಗದೆ ರೈತರ ಪರದಾಟ| ಮಾರುಕಟ್ಟೆಗಳಲ್ಲಿ ಕೊಳೆಯುತ್ತಿದೆ ತರಕಾರಿ| ಹರಾಜು ಕೂಗುವವರಿಲ್ಲದೆ ಸಮಸ್ಯೆ| - ಕೇಜಿಗೆ ಹಸಿಮೆಣಸಿಗೆ 60 ರು. ದರ| ಆದರೆ ರೈತರಿಗೆ ಚೀಲಕ್ಕೆ 100 ರು.ಗೆ ಖರೀದಿ

 ಬೆಂಗಳೂರು(ಮೇ.01): ಜನತಾ ಕರ್ಪ್ಯೂ ಘೋಷಣೆ ಕಾರಣ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ರೈತರ ಸಂಕಷ್ಟಮುಂದುವರಿದಿದೆ. ಕನಿಷ್ಠ ಮಧ್ಯಾಹ್ನ 2 ಗಂಟೆಯವರೆಗಾದರೂ ವ್ಯಾಪಾರಕ್ಕೆ ಅವಕಾಶ ನೀಡುವಂತೆ ರೈತರು ಮನವಿ ಮಾಡಿದರೂ ಕೂಡ ಇಲ್ಲಿಯವರೆಗೂ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ಕಫä್ರ್ಯ ನೆಪಮಾಡಿಕೊಂಡು ವ್ಯಾಪಾರಿಗಳು ರೈತರೊಂದಿಗೆ ಚಲ್ಲಾಟವಾಡುತ್ತಿದ್ದಾರೆ.

ಪ್ರಮುಖವಾಗಿ ಸಮಯದ ಅಭಾವದಿಂದ ಹರಾಜು ಕರೆಯುವವರು ಎಪಿಎಂಸಿಗೆ ಬರುತ್ತಿಲ್ಲ. ಇದರಿಂದ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ವಿವಿಧೆಡೆ ಎಪಿಎಂಸಿಗಳಲ್ಲಿ ರೈತರು ತಂದಿರುವ ತರಕಾರಿ ಹಾಗೇ ಕೊಳೆಯುತ್ತಿದೆ. ಅಲ್ಪ ಪ್ರಮಾಣದ ತರಕಾರಿ ಮಾತ್ರ ತುಂಬಾ ಕಡಿಮೆ ಬೆಲೆಗೆ ವ್ಯಾಪಾರವಾಗುತ್ತಿದೆ. ಹೀಗಾಗಿ ಬೆಳೆಗೆ ಖರ್ಚು ಮಾಡಿದ ಹಣ ಕೂಡ ರೈತರಿಗೆ ವಾಪಸ್‌ ಬರುತ್ತಿಲ್ಲ.

ಬೆಳಗಾವಿ ಮಾರುಕಟ್ಟೆಯಲ್ಲಿ 1 ಕೆಜಿ ಹಸಿಮೆಣಸಿನಕಾಯಿಗೆ .50 ರಿಂದ .60 ದರವಿದೆ. ಆದರೆ, ವ್ಯಾಪಾರಿಗಳು ರೈತರಿಂದ ಒಂದು ಚೀಲ ಮೆಣಸಿನಕಾಯಿಗೆ ಕೇವಲ .80 ರಿಂದ .100 ದರ ನೀಡಿ ಖರೀದಿಸುತ್ತಿದ್ದಾರೆ. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಗೆ ಲಾಭವಿಲ್ಲ ಎಂದು ಆರೋಪಿಸುತ್ತಿದ್ದಾರೆ.

"

ಕಫä್ರ್ಯ ಹಿನ್ನೆಲೆಯಲ್ಲಿ ಬೆಳಗಾವಿಯ ಎಪಿಎಂಸಿ ಮಾರುಕಟ್ಟೆವಿಭಜನೆಗಾಗಿ ಎರಡು ದಿನ ಜಿಲ್ಲಾಡಳಿತ ಎಪಿಎಂಸಿ ಬಂದ್‌ ಮಾಡಿದೆ. ಹೀಗಾಗಿ ರೈತರಿಂದ ವ್ಯಾಪಾರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸೂಕ್ತ ದರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಮಂಡ್ಯದಲ್ಲಿ ಸೋಂಕು ತಡೆಯುವ ಉದ್ದೇಶದಿಂದ ತರಕಾರಿ ಮಾರುಕಟ್ಟೆಯಲ್ಲಿನ ವರ್ತಕರು, ವ್ಯಾಪಾರಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಿದರೂ ಒಂದೇ ದಿನಕ್ಕೆ ತರಕಾರಿ ವ್ಯಾಪಾರ ಸ್ಥಗಿತಗೊಂಡಿದೆ.

ಸಮಸ್ಯೆ ಏನು?

- ಜನತಾ ಕರ್ಫ್ಯೂ ಕಾರಣ ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ

- ಕನಿಷ್ಠ ಮಧ್ಯಾಹ್ನ 2 ಗಂಟೆಯವರೆಗಾದರೂ ವಿಸ್ತರಿಸಿ ಎಂದು ರೈತರಿಂದ ಮೊರೆ

- ಸ್ಪಂದನೆ ಸಿಗದ ಕಾರಣ ಮಾರುಕಟ್ಟೆಗಳಲ್ಲಿ ರೈತರ ಉತ್ಪನ್ನ ಕೇಳುವವರು ಇಲ್ಲ

- ಬೆಳೆಗಳನ್ನು ಮಾರುಕಟ್ಟೆಗೆ ತಂದ ರೈತರಿಂದ ಮಾರಾಟ ಮಾಡಲು ತೀವ್ರ ಪರದಾಟ

- ಪರಿಸ್ಥಿತಿಯ ಲಾಭ ಪಡೆದು ಕಡಿಮೆ ಬೆಲೆಗೆ ಬೆಳೆ ಖರೀದಿಸುತ್ತಿರುವ ವ್ಯಾಪಾರಿಗಳು

- ಬೆಳೆ ಬೆಳೆಯಲು ಹಾಗೂ ಕಡೆಗೆ ಸಾಗಾಟಕ್ಕೆ ಆದ ಖರ್ಚೂ ಹುಟ್ಟದೆ ರೈತರಿಗೆ ನಷ್ಟ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona